ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

First published:

 • 16

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಕೊರೋನಾ ವೈರಸ್ ಭೀತಿ ನಡುವೆ ಐಪಿಎಲ್ ನಡೆಯುವುದು ಡೌಟ್. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್​)ಗೆ ಮ್ಯಾಚ್ ಫಿಕ್ಸಿಂಗ್ ಭೂತ ಅಂಟಿಕೊಂಡಿದ್ದರಿಂದ ಬಹುತೇಕ ಬ್ಯಾನ್ ಆಗಿದೆ. ಹಾಗೆಯೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಯಾವಾಗ ಎಂಬುದಕ್ಕೆ ಯಾವುದೇ ಉತ್ತರವಿಲ್ಲ.

  MORE
  GALLERIES

 • 26

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಇದರ ನಡುವೆ ವೈಪಿಎಲ್ ಟೂರ್ನಿಯೊಂದು ಶುರುವಾಗುತ್ತಿದೆ. ಅಂದರೆ ಯಜಮಾನ ಪ್ರೀಮಿಯರ್ ಲೀಗ್. ಇದು ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ..ಅಭಿಮಾನಿಗಳಿಗೋಸ್ಕರ. ಯಾರ ಅಭಿಮಾನಿ ಅಂತ ಮಾತ್ರ ಕೇಳ್ಬೇಡಿ. ಏಕೆಂದರೆ ವೈಪಿಎಲ್ ಆಯೋಜಿಸುತ್ತಿರುವುದು ವಿಷ್ಣುಸೇನೆ. ಅಲ್ಲಿಗೆ ವಿಷ್ಣುದಾದನ ಅಭಿಮಾನಿಗಳಿಗೆ ಎಂಬುದು ಕನ್ಫರ್ಮ್ ಆಗಿದೆಯಲ್ವಾ.

  MORE
  GALLERIES

 • 36

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಇನ್ನುಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು. ಈ ಹಿಂದೆ ಇದೇ ವಿಷ್ಣು ಸೇನೆ ಅನೇಕ  ಸಾಮಾಜಿಕ ಕಾರ್ಯಗಳ ಮೂಲಕ ಸದ್ದು ಮಾಡಿದ್ದರು.

  MORE
  GALLERIES

 • 46

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಡಾ. ವಿಷ್ಣು ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಉಚಿತ ತರಬೇತಿ ನೀಡಿ ಎಲ್ಲರಿಗೂ ಮಾದರಿಯಾಗಿ ನಿಂತಿದ್ದರು. ಇದೀಗ ಮತ್ತೊಂದು ಹೆಜ್ಜೆಯಿಟ್ಟಿರುವ ವೀರಕಪುತ್ರ ಶ್ರೀನಿವಾಸ್ ಅವರು ಅಭಿಮಾನಿಗಳನ್ನು ಒಟ್ಟುಗೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

  MORE
  GALLERIES

 • 56

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಅದು ಕೂಡ ಸಾಹಸಸಿಂಹನ ನೆಚ್ಚಿನ ಕ್ರಿಕೆಟ್ ಮೂಲಕ ಎಂಬುದು ವಿಶೇಷ. ಏಕೆಂದರೆ ಈ ಹಿಂದೆ ವಿಷ್ಣುವರ್ಧನ್ ಅವರು ಸ್ನೇಹಲೋಕ ಎಂಬ ಸಂಘ ಕಟ್ಟಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ವಿಷ್ಣುಸೇನೆ ಕೂಡ ಸಿಂಹ ನಡೆದ ದಾರಿಯಲ್ಲಿ ಸಾಗಿದೆ.

  MORE
  GALLERIES

 • 66

  ಐಪಿಎಲ್, ಕೆಪಿಎಲ್, ಸಿಸಿಎಲ್​ ಅಲ್ಲ...ಇದು ವೈಪಿಲ್..!

  ಯಜಮಾನ ಪ್ರೀಮಿಯರ್ ಲೀಗ್​ನ್ನು ಏಪ್ರಿಲ್​ನಲ್ಲಿ ಆಯೋಜಿಸಲು ವಿಷ್ಣುಸೇನೆ ನಿರ್ಧರಿಸಿದ್ದು, ಕೊರೋನಾ ಕಾರಣದಿಂದ ಟೂರ್ನಿ ಆಯೋಜನೆಯಲ್ಲಿ ಕೆಲ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ.

  MORE
  GALLERIES