Rashmika Mandanna: ಸಾಮಾಜಿಕ ಜಾಲತಾಣದಲ್ಲಿ ತೆಲುಗು ನಟ-ನಟಿಯರು ಹಾಗೂ ಟಾಲಿವುಡ್ ಸಿನಿಮಾಗಳ ಕುರಿತಾಗಿಯೇ ಹೆಚ್ಚಾಗಿ ಪೋಸ್ಟ್ ಮಾಡುವ ರಶ್ಮಿಕಾ ಮಂದಣ್ಣ ನಿನ್ನೆ ದರ್ಶನ್ ಜತೆಗೆ ತೆಗೆದುಕೊಂಡಿದ್ದ ಸೆಲ್ಫಿಯೊಂದನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಖಾತೆ)
ತಾವೇ ನಟಿಸಿದ ಕನ್ನಡ ಸಿನಿಮಾಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಮೋಟ್ ಮಾಡುವುದಿಲ್ಲ ಅನ್ನೋ ಆರೋಪ ರಶ್ಮಿಕಾ ಅವರ ಮೇಲೆ ಬಹಳ ಸಮಯದಿಂದ ಇದೆ.
2/ 7
ಇತ್ತೀಚೆಗೆ ತೆರೆ ಕಂಡಿರುವ ಪೊಗರು ಸಿನಿಮಾ ವಿಷಯದಲ್ಲೂ ರಶ್ಮಿಕಾ ಮೇಲೆ ಇದೇ ಆರೋಪ ಕೇಳಿ ಬಂದಿತ್ತು. ಟ್ವಿಟರ್ನಲ್ಲಿ ಸಿನಿಮಾ ರಿಲೀಸ್ಗೂ ಮುನ್ನ ಒಂದೇ ಒಂದಿ ಟ್ವೀಟ್ ಮಾಡಿದ ನಂತರ ಚಿತ್ರದ ಕುರಿತಾಗಿ ಮತ್ತಾವುದೇ ಪೋಸ್ಟ್ ಮಾಡಲಿಲ್ಲ ಈ ನಟಿ.
3/ 7
ಇಂತಹ ನಟಿ ಇದ್ದಕ್ಕಿದ್ದಂತೆಯೆ ನಿನ್ನೆ ದರ್ಶನ್ ಜೊತೆ ಯಜಮಾನ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಂಡಿರುವ ಸೆಲ್ಫಿ ಹಂಚಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.
4/ 7
ರಶ್ಮಿಕಾ ಹೀಗೆ ಮಾಡಲು ಕಾರಣ ಇದೆ.
5/ 7
ರಶ್ಮಿಕಾ ಹಾಗೂ ದರ್ಶನ್ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದಿದೆ.
6/ 7
ಅದಕ್ಕಾಗಿಯೇ ರಶ್ಮಿಕಾ ಯಜಮಾನ ಸಿನಿಮಾದ ಶೂಟಿಂಗ್ ವೇಳೆ ತೆಗೆದ ಎರಡು ಫೋಟೋಗಳನ್ನು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
7/ 7
ರಶ್ಮಿಕಾ ಹಂಚಿಕೊಂಡಿರುವ ಪೋಸ್ಟ್ ನೋಡಿದ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.