Women's Day: ಸೀರೆಯಲ್ಲಿ ಸ್ಯಾಂಡಲ್ವುಡ್ ನಟಿಯರ ಸೂಪರ್ ಲುಕ್
ಇಂದು ಮಹಿಳಾ ದಿನಾಚರಣೆ. ಸ್ಯಾಂಡಲ್ವುಡ್ ನಟಿಯರ ಕ್ಯೂಟ್ ಸೀರೆ ಫೋಟೋಗಳನ್ನು ನೋಡಿ. ಎಷ್ಟು ಕ್ಯೂಟ್ ಕಾಣ್ತಾರೆ ನಮ್ಮ ಕನ್ನಡದ ನಟಿಯರು!
1/ 11
ಸ್ಯಾಂಡಲ್ವುಡ್ ಮೋಹಕ ತಾರೆ ನಟಿ ರಮ್ಯಾ ಅವರು ಸುಂದರವಾದ ಸೀರೆ ಉಟ್ಟಿದ್ದಾರೆ. ಪಿಂಕ್ ಬಣ್ಣದ ಝರಿ ಸೀರೆ ಉಟ್ಟು ಚೋಕರ್ ಧರಿಸಿ ಪೋಸ್ ಕೊಟ್ಟಿದ್ದಾರೆ.
2/ 11
ನಟಿ ರಾಧಿಕಾ ಪಂಡಿತ್ ಅವರು ಗಿಣಿ ಹಸಿರು ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಕೆಂಪು ಬಣ್ಣದ ಬಾರ್ಡರ್ ಇರುವ ಸೀರೆ ರಾಧಿಕಾ ಸೌಂದರ್ಯ ಹೆಚ್ಚಿಸಿದೆ.
3/ 11
ರಚಿತಾ ರಾಮ್ ಅವರು ಕೆಂಪು ಬ್ಲೌಸ್ ಧರಿಸಿ ವೈಟ್ ಕಲರ್ ಸೀರೆ ಉಟ್ಟು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಸುಂದರವಾದ ನೆಕ್ಲೆಸ್ ಧರಿಸಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ.
4/ 11
ಚಾರ್ಲಿ ಚೆಲುವೆ ಸಂಗೀತಾ ಶೃಂಗೇರಿ ಅವರು ಗ್ರೇ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಸಿಂಪಲ್ ಆಗಿ ಅಲಂಕಾರ ಮಾಡಿಕೊಂಡು ಪೋಸ್ ಕೊಟ್ಟಿದ್ದಾರೆ.
5/ 11
ಸಪ್ತಮಿ ಗೌಡ ಹಾಗೂ ಸೀರೆಗೆ ವಿಶೇಷ ನಂಟಿದೆ. ಕಾಂತಾರ ಚೆಲುವೆ ಸೀರೆ ಉಟ್ಟುಕೊಂಡು ಸಿಂಗರಿಸುತ್ತಿರುವ ಭಂಗಿಯನ್ನು ನೋಡಿ.
6/ 11
ನಟಿ ಅದಿತಿ ಪ್ರಭುದೇವ ಅವರು ಕೆಂಬಣ್ಣದ ಆಕರ್ಷಕ ಸೀರೆ ಉಟ್ಟಿದ್ದಾರೆ. ಅದಕ್ಕೆ ಕೆಂಪು ಕಲರ್ ಇಯರಿಂಗ್ಸ್ ಮ್ಯಾಚ್ ಮಾಡಿದ್ದಾರೆ. ಸಿಂಪಲ್ ಸೀರೆಯೂ ಸುಂದರವಾಗಿ ಕಾಣಿಸಿದೆ.
7/ 11
ಆಶಿಕಾ ರಂಗನಾಥ್ ಅವರು ಕ್ರೀಮ್ ಕಲರ್ ಸೀರೆಗೆ ಡೀಪ್ ವಿ ನೆಕ್ ಬ್ಲೌಸ್ ಧರಿಸಿದ್ದಾರೆ. ಡಿಸೈನರ್ ಸೀರೆಗೆ ಗ್ರ್ಯಾಂಡ್ ಆಗಿರುವಂತಹ ಚೋಕರ್ ಧರಿಸಿದ್ದಾರೆ.
8/ 11
ನಟಿ ಮಿಲನಾ ನಾಗರಾಜ್ ಅವರು ವೈಟ್ ಕಲರ್ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಎಷ್ಟೇ ಸಿಂಪಲ್ ಆದರೂ ಗ್ರ್ಯಾಂಡ್ ಆದರೂ ಸೀರೆ ಯಾವುತ್ತೂ ಚಂದ ಅನ್ನೋದು ಇದಕ್ಕೇ ಅಲ್ವೇ.
9/ 11
ನಟಿ ರಾಗಿಣಿ ಅವರು ಸುಂದರವಾದ ಟ್ರೆಡಿಷನಲ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಹಸಿರು ಹಾಗೂ ಕೆಂಪು ಕಾಂಬಿನೇಷನ್ ಹುಡುಗಿಯರ ಫೇವರಿಟ್ ಅಂತ ತೋರಿಸಿದ್ದಾರೆ.
10/ 11
ನಟಿ ಅಮೂಲ್ಯ ಅವರು ಮೆರೂನ್ ಕಪರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಹಸಿರು ಬಣ್ಣದ ಚೋಕರ್ ಕೂಡಾ ಧರಿಸಿದ್ದರು. ಸುಂದರವಾದ ಬಿಂದಿ ಇಟ್ಟಿದ್ದರು.
11/ 11
ನಟಿ ರಶ್ಮಿಕಾ ಮಂದಣ್ಣ ಕೂಡಾ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸುತ್ತಾರೆ. ತಮ್ಮ ಸಿನಿಮಾ ಪ್ರಮೋಷನ್ ಸಂದರ್ಭ ಹೆಚ್ಚಾಗಿ ನಟಿ ಸೀರೆಯನ್ನೇ ಉಡುತ್ತಾರೆ.
First published: