ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದು. ಈ ಜೋಡಿಯ ನಡುವಿನ ಹಲವಾರು ಪ್ರಸಂಗಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ತಾಹಿರಾ ತನ್ನ ‘‘ದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್’’ ಪುಸ್ತಕದಲ್ಲು ಉಲ್ಲೇಖಿಸಿದ್ದ ಕೆಲವು ಸಂಗತಿಗಳು ವೈರಲ್ ಆಗಿದೆ . ಅದರಲ್ಲೂ ಆಯುಷ್ಮಾನ್ ಮಾಡಿರುವ ತಮಾಷೆಯ ಘಟನೆಯನ್ನು ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ, ಈ ಪುಸ್ತಕವು ಮೊದಲ ಬಾರಿ ತಾಯಿಯಾಗುವ ಮಹಿಳೆಯರು ಮತ್ತು ಸಮಾಜದ ಇತರ ಮಹಿಳೆಯರಿಂದ ಸ್ವೀಕರಿಸುವ ತೀರ್ಪುಗಳ ಕುರಿತು ಇದರಲ್ಲಿ ವಿವರಿಸಿದ್ದಾರೆ. ಅದರ ಜೊತೆಗೆ ಅವರ ಪತಿ ಆಯುಷ್ಮಾನ್ ತನ್ನ ಎದೆ ಹಾಲನ್ನು ಸೇವಿಸಿದರ ಬಗ್ಗೆ ಯೂ ಹೇಳಿಕೊಂಡಿದ್ದಾರೆ.