ಕಾರಣ 10 - ಆರಡಿ ಅಜಾನುಬಾಹು ಈ ಗಜ... ಹೌದು ಆರಡಿ ಕಟೌಟ್ ದರ್ಶನ್ ರನ್ನು ಬೆಳ್ಳಿತೆರೆ ಮೇಲೆ ನೋಡೋದೆ ಅಭಿಮಾನಿಗಳಿಗೆ ಒಂದು ಹಬ್ಬ. ಮೊದಲ ಸಿನಿಮಾ ಮೆಜೆಸ್ಟಿಕ್ ನಲ್ಲಿ ತಮ್ಮ ಎತ್ತರದ ನಿಲುವಿನಿಂದಲೇ ದರ್ಶನ್ ಎಲ್ಲರ ಗಮನ ಸೆಳೆದಿದ್ರೆ. ಮಾಸ್ ಡೈಲಾಗ್ ಹೇಳುವಾಗಲೇ ಆಗಲಿ, ಫೈಟಿಂಗ್ ಸೀಟ್ ಗಳೆ ಇರಲಿ ದರ್ಶನರ ಹೈಟ್ ಅವರಿಗೆ ಪ್ಲಸ್ ಪಾಯಿಂಟ್. ಅದಕ್ಕೆ ಅವರ ಅಭಿಮಾನಿಗಳು ನಮ್ಮ ಡಿ ಬಾಸ್ ಶಾನೆ ಟಾಪಾಗ್ ಅವರೇ ಅಂತ ಬಹುಪರಾಕ್ ಕೂಗ್ತಾರೆ.
ಕಾರಣ 9 - ಅಂಬರೀಶರ ಉತ್ತರಾಧಿಕಾರಿ ಈ ಚಕ್ರವರ್ತಿ... ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಕನ್ನಡದ ಮೇರು ನಟನಾದ್ರು ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಾಕಷ್ಟು ಸ್ಟ್ರಗಲ್ ಮಾಡಿದ್ದಾರೆ. ಸಿನಿಮಾದಲ್ಲಿ ಹೀರೋ ಆಗಿ ಚಾನ್ಸ್ ಸಿಗುವ ಮೊದಲು ಲೈಟ್ ಬಾಯ್ ಆಗಿ, ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಆ ಕಷ್ಟದ ದಿನಗಳಲ್ಲ ದರ್ಶನ್ ಕೈ ಹಿಡಿದವರು ಕರುನಾಡಿನ ಕರ್ಣ ಅಂಬರೀಶ್. ತಮ್ಮ ಮಗನಂತೆಯೇ ದರ್ಶನ್ ರನ್ನು ಅಂಬಿ ಬೆಳೆಸಿದ್ದಾರೆ. ಅಂಬಿಯ ಎತ್ತರಾಧಿಕಾರಿಯೇ ದರ್ಶನ್ ಎಂಬಂತೆ ಅಣ್ಣವ್ರು, ಮಂಡ್ಯ, ಬುಲ್ ಬುಲ್, ಅಂಬರೀಶ ಸಿನಿಮಾಗಳು ತೆರೆ ಕಂಡಿದ್ವು. ಇನ್ನು ಸುಮಲತಾ ಸಹ ದರ್ಶನ್ ನನ್ನ ಮೊದಲ ಮಗ ಅಂತಲೇ ಹೆಮ್ಮಯಿಂದ ಹೇಳಿಕೊಳ್ತಾರೆ. ದರ್ಶನ್ ಸಹ ಅಂಬಿ ಫ್ಯಾಮಿಲಿಗೆ ಬ್ಯಾಕ್ ಬೋನ್ ಆಗಿ ನಿಲ್ಲುತ್ತಾರೆ. ಅದಕ್ಕೆ ಅಂಬಿ ಅಭಿಮಾನಿಗಳಿಗೆ ದಾಸ ಅಂದ್ರೆ ತುಂಬಾನೇ ಕಾಸ ಅಂತಾರೆ.
ಕಾರಣ 8 - ಮಂಡ್ಯ ಎಲೆಕ್ಷನ್ ನಲ್ಲಿ ಜೋಡೆತ್ತಿನ ಕಮಾಲ್... ರೆಬಲ್ ಸ್ಟಾರ್ ನಿಧನದ ನಂತರ ಸುಮಲತಾ ಅವರು ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ನಿಂತಿದ್ರು. ಆಗ ಮದರ್ ಇಂಡಿಯಾ ಬೆಂಬಲಕ್ಕೆ ನಿಂತವರು ಸ್ಯಾಂಡಲ್ ವುಡ್ ಸಾರಥಿ. ಪ್ರಚಾರದ ವೇಳೆ ಸಾಕಷ್ಟು ವಿವಾದಗಳನ್ನು ದರ್ಶನ್ ಎದುರಿಸಬೇಕಾಯ್ತು. ರಾಜಕೀಯ ಎದುರಾಳಿಗಳ ಮಾತಿಗೆಲ್ಲಾ ತಲೆ ಕೆಡಿಸಿಕೊಳ್ಳದ ದರ್ಶನ್ ಭರ್ಜರಿ ಪ್ರಚಾರ ಮಾಡಿದ್ರು. ಸುಮಲತಾರ ಗೆಲುವಿಗಾಗಿ ನಟ ಯಶ್ ಜೊತೆ ಜೋಡೆತ್ತಾಗಿ ಕ್ಯಾಂಪೇನ್ ನಡಿಸಿದ್ರು. ಅಲ್ಲಿಯವರೆಗೂ ದರ್ಶನ್- ಯಶ್ ನಡುವಿನದ್ದ ಸ್ಟಾರ್ ವಾರ್ ಊಹಾಪೋಹಕ್ಕೆ ದರ್ಶನ್ ತೆರೆ ಎಳೆದ್ರು. ಕೊನೆಗೂ ಸುಮಲತಾರನ್ನು ಭಾರೀ ಅಂತರದಲ್ಲಿ ಗೆಲ್ಲಿಸಿ ತಮ್ಮ ಸ್ಟಾರ್ಡಮ್ ಏನು ಅಂತ ಪ್ರೂವ್ ಮಾಡಿದ್ರು.
ಕಾರಣ 7 - ಸತತ ಸೋಲುಗಳಿಗೆ ಜಗ್ಗದ ಜಗ್ಗುದಾದ... ಇಂದು ದರ್ಶನ್ ಚಾಲೆಂಜಿಗ್ ಸ್ಟಾರ್ ಅಂತಲೇ ಫೇಮಸ್.ಅಂದ್ರೆ ಹೆಸರಿನ ಮುಂದೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸುಮ್ಮನೆ ಬಂದಿದಲ್ಲ. ಅದಕ್ಕಾರಿ ದರ್ಶನ್ ಸಾಕಷ್ಟು ಬೆವರು ಹರಿಸಿದ್ದಾರೆ. ಮೊದಲ ಸಿನಿಮಾ ಮೆಜೆಸ್ಟಿಕ್ ಬಳಿಕ ದರ್ಶನ್ ಗೆ ಸಾಲು ಸಾಲು ಸೋಲುಗಳು ಎದುರಾಗಿದ್ವು. ಆ ಸಮಯದಲ್ಲಿ ದರ್ಶನ್ ಕೆರಿಯರ್ ಫಿನಿಷ್ ಅಂದವರು ಇದ್ದಾರೆ. ಆದ್ರೆ ದರ್ಶನ್ ಸೋಲುಗಳಿಗೆ ಜಗ್ಗದೆ ಲೈಟ್ ಕ್ಯಾಮರ ಆ್ಯಕ್ಷನ್ ಅಂದಿದ್ದೆ ತಮ್ಮೆಲ್ಲಾ ಸಾಮರ್ಥ್ಯವನ್ನ ಒರೆಗೆ ಹಚ್ಚಿದ್ದರು. ಸಾಲು ಸಾಲು ಸೋಲುಗಳಿಗೆ ಸವಾಲಾಕಿ ಗೆಲುವಿನ ಟ್ರ್ಯಾಕ್ ಗೆ ಮರಳಿದ್ರು. ಕರಿಯಾ, ದಾಸ ಸಿನಿಮಾಗಳು ದರ್ಶನ್ ಕೈ ಹಿಡಿದ್ರು. ಅಂದಿನಿಂದ ದರ್ಶನ್ ಹಿಂತಿರುಗಿ ನೋಡಿದ್ದೆ ಇಲ್ಲ. ಚಾಲೆಂಜಿಂಗ್ ಸ್ಟಾರ್ ಅನ್ನೋದು ಹೊಗಳಿಕೆ ಬಿರುದಲ್ಲ, ದರ್ಶನ್ ರ ಪರಿಶ್ರಮಕ್ಕೆ ಸಿಕ್ಕಿರುವ ಬಿರುದು.
ಕಾರಣ 6 - ಕಷ್ಟ ಅಂದವರಿಗೆ ಆಸರೆಯಾಗೋ ಯಜಮಾನ... ದರ್ಶನ್ ಇಂದು ಒಬ್ಬ ಶ್ರೀಮಂತ ನಟ. ಆದ್ರೆ ಅವರು ತಮ್ಮ ಕಷ್ಟದ ದಿನಗಳನ್ನು ಮರೆತಿಲ್ಲ. ಕಷ್ಟ ಅಂತ ಮನೆ ಬಾಗಿಲಿಗೆ ಬಂದವರನ್ನು ದರ್ಶನ್ ಎಂದೂ ಬರಿಗೈನಲ್ಲಿ ಕಳಿಸೋಲ್ಲ. ಚಿತ್ರರಂಗದವರೇ ಆಗಲಿ, ಅಭಿಮಾನಿಗಳೇ ಆಗಿರಲಿ ಅನೇಕರಿಗೆ ದರ್ಶನ್ ಆರ್ಥಿಕ ಸಹಾಯ ಮಾಡಿದ್ದಾರೆ. ಅದಕ್ಕಾಗೇ ಅವರನ್ನು ಮೆಚ್ಚುವವರ ಗುಂಪು ದೊಡ್ಡದಿದೆ.
ಕಾರಣ 5 - ಸ್ನೇಹಕ್ಕೆ ತಲೆಬಾಗೋ ಒಡೆಯ... ದರ್ಶನ್ ತಾವೊಬ್ಬರೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿಲ್ಲ ತಮ್ಮೊಂದಿಗಿದ್ದವರಿಗೂ ಬೆನ್ನೆಲುಬಾಗಿದ್ದಾರೆ. ಸ್ನೇಹಕ್ಕಾಗಿಯೇ ಸೃಜನ್ ಲೋಕೇಶ್, ಆದಿತ್ಯ, ಸೌರವ್ ಜೊತೆ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇನ್ನು ತಮ್ಮ ಹೋಮ್ ಪ್ರೊಡಕ್ಷನ್ ನ ಮೂಲಕ ನೆನಪಿರಲಿ ಪ್ರೇಮ್, ಸೂರಜ್ ಗೌಡಗಾಗಿ ಸಿನಿಮಾ ಮಾಡಿದ್ದಾರೆ.
ಕಾರಣ 4 - ಸುದೀಪ್ ಜೊತೆಗಿನ ಸ್ಟಾರ್ ವಾರ್... ಒಂದು ಕಾಲದಲ್ಲಿ ಕುಚುಕು ಗೆಳೆಯರಾಗಿದ್ದ ಕಿಚ್ಚ ಸುದೀಪ್, ದರ್ಶನ್ ನಂತರದ ದಿನಗಳಲ್ಲಿ ದೂರವಾಗಿದ್ರು. ಇಬ್ಬರು ಮೇರು ನಟರ ಅಭಿಮಾನಿಗಳ ಮಧ್ಯೆ ಆಗಾಗ ಕ್ಲ್ಯಾಶ್ ಆಗುತ್ತಲೇ ಇರುತ್ತೆ. ಈ ಸ್ಟಾರ್ ವಾರ್ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತವೆ. ದಚ್ಚು ಅಭಿಮಾನಿಗಳ ಪೈಪೋಟಿಯಲ್ಲಿ ಬಲವಾಗಿ ಅವರ ಪರ ಸದಾ ನಿಲ್ಲುತ್ತಾರೆ. ಆದ್ರೆ ದರ್ಶನ್ ಈ ಎಲ್ಲ ಕಾಂಟ್ರವರ್ಸಿಗಳಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ.
ಕಾರಣ 3 - ಪತ್ನಿಯೊಂದಿಗಿನ ಜಗಳದ ರಗಳೆ... ಕೆಲ ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಅವರೊಂದಿಗಿನ ಜಗಳ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಜೈಲುವಾಸವನ್ನು ಮಾಡಿದ್ದ ದರ್ಶನ್ ಬಗ್ಗೆ ಸಾಕಷ್ಡು ನೆಗೆಟಿವ್ ಪಬ್ಲಿಸಿಟಿಯೂ ನಡೆದಿತ್ತು. ಆದ್ರೆ ಈ ಕಾಂಟ್ರವರ್ಸಿ ಬಳಿಕ ರಿಲೀಸ್ ಆದ ಸಾರಥಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ವಿವಾದಗಳಿಂದ ಮೈ ಕೊಡವಿ ನಿಂತ ದರ್ಶನ್ ಸಾರಥಿ ಮೂಲಕ ತಾವೊಬ್ಬ ಬಿಗ್ ಸ್ಟಾರ್ ಎಂಬುವುದನ್ನು ಪ್ರೂವ್ ಮಾಡಿದ್ರು.
ಕಾರಣ 2 - ದರ್ಶನ್ ಒಬ್ಬ ಅತ್ಯುತ್ತಮ ನಟ... ಪವರ್ ಫುಲ್ ಡೈಲಾಗ್, ಮಾಸ್ ಸಿನಿಮಾಗಳಾಚೆಗೂ ದರ್ಶನ್ ಒಳಗೆ ಒಬ್ಬ ಅಪ್ಪಟ ಕಲಾವಿದನಿದ್ದಾನೆ. ನಮ್ಮ ಪ್ರೀತಿಯ ರಾಮು, ಸಂಗೊಳ್ಳಿ ರಾಯಣ್ಣ, ಅನಾಥರು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇನ್ನ ನವಗ್ರಹ ಹಾಗೂ ಕುರುಕ್ಷೇತ್ರ ಸಿನಿಮಾಗಳಲ್ಲಿ ನೆಗಟಿವ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕಾರಣ 1 - ಡಿ ಬಾಸ್ ಖದರೇ ಬೇರೆ..... ಹೌದು ದರ್ಶನ್ ಇಷ್ಟ ಆಗೋದೆ ತಮ್ಮ ಡೋಂಟ್ ಕೇರ್ ಆಟಿಟ್ಯೂಡ್ ನಿಂದ. ಸಕ್ಸಸ್ ಇರಲಿ, ಫ್ಲಾಪ್ ಇರಲಿ. ಯಾವುದೇ ಕಾಂಟ್ರವರ್ಸಿ ಇರಲಿ ದರ್ಶನ್ ಎಲ್ಲವನ್ನೂ ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದಲೇ ಹ್ಯಾಂಡಲ್ ಮಾಡ್ತಾರೆ. ತಮಗೆ ಅನಿಸಿದನ್ನ ಯಾವುದೇ ಫಾಲಿಷ್ ಮಾಡದೇ ಹೇಳಿ ಬಿಡ್ತಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಎಲ್ಲಾ ನೇರಾನೇರ. ಅಂಬಿ ನಂತರ ನೇರವಂತಿಕೆಯಿಂದಲೇ ಇಷ್ಟ ಆಗೋ ನಟ ದರ್ಶನ್