ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಅವರು ಶೋಭಿತಾ ಧೂಳೀಪಾಲ ಎಂಬ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸ್ವಲ್ಪ ಸಮಯ ಹಿಂದಿನಿಂದಲೇ ಕೇಳಿ ಬರುತ್ತಿದೆ. ಆರಂಭದಲ್ಲಿ ರೂಮರ್ಸ್ ಎನ್ನಲಾಗಿದ್ದರೂ ಈಗ ಈ ಸುದ್ದಿ ಮತ್ತಷ್ಟು ವೈರಲ್ ಆಗಿದೆ.
2/ 7
ಈಗ ಇಬ್ಬರೂ ವೆಕೇಷನ್ ಹೋಗಿದ್ದು ಇವರ ನಡುವಿನ ಸಂಬಂಧ ಮತ್ತಷ್ಟು ಡಿಸ್ಕಸ್ ಆಗುತ್ತಿದೆ. ಹಾಗಿದ್ದರೆ ಶೋಭಿತಾ ಯಾರು? ಎಲ್ಲಿಯವರು? ಯಾವ ಇಂಡಸ್ಟ್ರಿಯವರು?
3/ 7
ಶೋಭಿತಾ ಧೂಳಿಪಾಲ 31 ಮೇ 1992ರಂದು ಜನಿಸಿದರು. ಭಾರತೀಯ ನಟಿ ಹಾಗೂ ರೂಪದರ್ಶಿಯಾಗಿ ಗುರುತಿಸಲ್ಪಟ್ಟಿರುವ ಇವರು ಸಿನಿಮಾ ನಟಿಯಾಗಿ ಇತ್ತೀಚೆಗೆ ಹೈಲೈಟ್ ಆಗಿದ್ದಾರೆ.
4/ 7
ಶೋಭಿತಾ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಫೆಮಿನಾ ಮಿಸ್ ಇಂಡಿಯಾ 2013 ಸ್ಪರ್ಧೆಯಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿ ಪಡೆದರು.
5/ 7
ಮಿಸ್ ಅರ್ಥ್ 2013ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಶೋಭಿತಾ. ನಟಿ ಅನುರಾಗ್ ಕಶ್ಯಪ್ ಅವರ ಥ್ರಿಲ್ಲರ್ ಚಿತ್ರ ರಾಮನ್ ರಾಘವ್ 2.0 (2016) ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
6/ 7
ಅವರು ತೆಲುಗು ಚಿತ್ರಗಳಾದ ಗೂಡಾಚಾರಿ (2018) ಮತ್ತು ಮೇಜರ್ (2022), ಮತ್ತು ಮಲಯಾಳಂ ಚಿತ್ರ ಕುರುಪ್ (2021) ನಲ್ಲಿ ನಟಿಸಿದರು. ಕುರುಪ್ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ಗೆ ಜೋಡಿಯಾಗಿದ್ದರು.
7/ 7
ಇದೀಗ ಶೋಭಿತಾ ನಾಗ ಚೈತನ್ಯ ಜೊತೆ ಡೇಟ್ ಮಾಡುತ್ತಿರುವ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಇನ್ನೂ ಸೂಪರ್ ಹಿಟ್ ಸಿನಿಮಾ ಕೊಡದಿದ್ದರೂ ಶೋಭಿತಾ ಸ್ವಲ್ಪ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ.