Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

ಅಭಿಮಾನಿಗಳು ನೆಚ್ಚಿನ ನಟ-ನಟಿಯರ ಜೊತೆಗೆ ಮಾತನಾಡಲು, ಅವರನ್ನು ನೋಡಲು ಹಾಗೂ ಅವರ ಕುರಿತಾದ ಮಾಹಿತಿ ಪಡೆದುಕೊಳ್ಳಲು ತುಂಬಾ ಪರದಾಡುತ್ತಿದ್ದರು. ಆದರೆ,ಈಗ ಸಾಮಾಜಿಕ ಜಾಲತಾಣದಿಂದಾಗಿ ಎಲ್ಲವೂ ಬೆರಳ ತುದಿಗೆ ಬಂದು ನಿಂತಿದೆ. ಈಗ ನೆಚ್ಚಿನ ನಟ-ನಟಿಯರ ಜತೆ ಸೋಶಿಯಲ್​ ಮೀಡಿಯಾದಲ್ಲಿ ಸಂಪರ್ಕದಲ್ಲಿರುತ್ತಾರೆ. ಇನ್ನು, ಕನ್ನಡದಲ್ಲಿ ಟಾಪ್​ ನಟರು (Sandalwood Top Stars) ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಎಂದರೆ ತಪ್ಪಾಗದು. ಈಗ ಇರುವ ಟಾಪ್ ನಟರಲ್ಲಿ ಯಾರಿಗೆ ಹೆಚ್ಚು ಹಿಂಬಾಲಕರಿದ್ದಾರೆ. ಯಾರು ಟಾಪ್​ನಲ್ಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published:

 • 17

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ಯಾವ ಸಿನಿರಂಗದ ಸ್ಟಾರ್​ಗಳಾದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸೋಶಿಯಲ್ ಮೀಡಿಯಾದಿಂದ ದೂರ ಇರುವ ನಟ-ನಟಿಯರು ತುಂಬಾ ವಿರಳ. ಇನ್ನು ಕನ್ನಡದ ಟಾಪ್​ ನಟರಿಗೆ ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಮಟ್ಟದಲ್ಲೇ ಹಿಂಬಾಲಕರ ಬಳಗವಿದೆ. ಯಾವ ನಟನಿಗೆ ಎಷ್ಟು ಮಂದಿ ಹಿಂಬಾಲಕರಿದ್ದಾರೆ. ಯಾರು ಟಾಪ್​ನಲ್ಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

  MORE
  GALLERIES

 • 27

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಯಶ್​ ಅವರಿಗೆ ಕನ್ನಡ ಸಿನಿರಂಗದಲ್ಲಿರುವ ಟಾಪ್​ ನಟರಲ್ಲಿ ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರಿದ್ದಾರೆ. 5.3 ಮಿಲಿಯನ್​ ಹಿಂಬಾಲಕರನ್ನು ಹೊಂದಿರುವ ಯಶ್​ ಟಾಪ್​ನಲ್ಲಿದ್ದಾರೆ. ಯಶ್​ ಅಭಿನಯದ ಕೆಜಿಎಫ್​ 2 ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ.

  MORE
  GALLERIES

 • 37

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ಸ್ಯಾಂಡಲ್​ವುಡ್​ನ ಪವರ್ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರು ಅಭಿಮಾನಿ ಬಳಗದಲ್ಲಿ ಅಪ್ಪು ಎಂದೇ ಖ್ಯಾತರಾದವರು ಇವರಿಗೆ ಇನ್​ಸ್ಟಾಗ್ರಾಂನಲ್ಲಿ 1.5 ಮಿಲಿಯನ್​ ಹಿಂಬಾಲಕರಿದ್ದಾರೆ. ಈ ಮೂಲಕ 2ನೇ ಸ್ಥಾನದಲ್ಲಿದ್ದಾರೆ ಅಪ್ಪು. ಇವರ ಅಭಿನಯದ ಜೇಮ್ಸ್​ ಹಾಗೂ ದ್ವಿತ್ವ ಇನ್ನೂ ಚಿತ್ರೀಕರಣದ ಹಂತದಲ್ಲಿವೆ.

  MORE
  GALLERIES

 • 47

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ಕನ್ನಡದ ಕಿಚ್ಚ ಸುದೀಪ್​ ಅವರ ಅಭಿನಯದ ಸಿನಿಮಾ ಕೋಟಿಗೊಬ್ಬ 3 ಇತ್ತೀಚೆಗಷ್ಟೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಕಿಚ್ಚ ಸುದೀಪ್​ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 1.4 ಮಿಲಿಯನ್ ಹಿಂಬಾಲಕರಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

  MORE
  GALLERIES

 • 57

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅವರ ಅಭಿನಯದ ಕಡೆಯ ಸಿನಿಮಾ ಪೊಗರು. ಸದ್ಯ ಧ್ರುವ ಅವರು ಮಾರ್ಟಿನ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ಇನ್​ಸ್ಟಾಗ್ರಾಂನಲ್ಲಿ 1.1 ಮಿಲಿಯನ್​ ಹಿಂಬಾಲಕರಿದ್ದಾರೆ.

  MORE
  GALLERIES

 • 67

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ನವರಸ ನಾಯಕ ಜಗ್ಗೇಶ್​ ಅವರು ಸದ್ಯ ತಮ್ಮ ಸಿನಿಮಾ ರಂಗನಾಯಕದ ಶೂಟಿಂಗ್​ನಲ್ಲಿ ವ್ಯಸ್ತವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಇವರಿಗೆ ಇನ್​ಸ್ಟಾಗ್ರಾಂನಲ್ಲಿ 9.43 ಲಕ್ಷ ಹಿಂಬಾಲಕರಿದ್ದಾರೆ.

  MORE
  GALLERIES

 • 77

  Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

  ರೋರಿಂಗ್ ಸ್ಟಾರ್ ಮುರಳಿ ಅವರೂ ಸಹ ಸ್ಯಾಂಡಲ್​ವುಡ್​ನಲ್ಲಿ ಬಹಳ ಸಮಯದಿಂದ ರಂಜಿಸುತ್ತಾ ಬಂದಿದ್ದಾರೆ. ಸಾಕಷಟು ಹಿಟ್​ ಚಿತ್ರಗಳನ್ನು ನೀಡಿದ ಶ್ರೀಮುರಳಿ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 9.15 ಲಕ್ಷ ಹಿಂಬಾಲಕರಿದ್ದಾರೆ.

  MORE
  GALLERIES