ನನಗೆ ನಂದಿನಿ ಪಾತ್ರ ಇಷ್ಟ. ಹಾಗೆಯೇ ನಂದಿನಿ ಪಾತ್ರವನ್ನು ಮಾಡುವುದಕ್ಕೂ ಇಷ್ಟ. ನಾನು ಮಣಿರತ್ನಂ ಸರ್ ಅವರ ಆಫೀಸ್ಗೆ ಹೋದಾಗ ಈ ವಿಚಾರ ಹೇಳಿದ್ದೆ. ಆದರೆ ಅವರು ಸಾಧ್ಯವಿಲ್ಲ ಎಂದರು. ನಾವು ಸೈನ್ ಮಾಡಿರುವ ಮೊದಲ ವಿಚಾರವೇ ಅದು. ಅದು ಮುಗಿದಾಗಿದೆ. ಐಶ್ ಮಾತ್ರ ಅದನ್ನು ಮಾಡಲು ಸಾಧ್ಯ ಎಂದರು. ಖಂಡಿತಾ ನಾನವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದಿದ್ದಾರೆ ತ್ರಿಶಾ.
ನಂದಿನಿ ಈ ಸಿನಿಮಾದ ಪ್ರಮುಖ ವಿಲನ್. ರಾಣಿ ನಂದಿನಿ ಪಾಂಡಿಯ ದೊರೆ ವೀರಪಾಂಡಿಯನ್ ಸಾವಿಗೆ ಪ್ರತೀಕಾರ ತೆಗೆಯಲು ಬಯಸುವುದಲ್ಲದೆ ಚೋಳ ಸಾಮ್ರಾಜ್ಯ ವಶಪಡಿಸಲು ಪ್ರಯತ್ನಿಸುತ್ತಾಳೆ. ಆದರೆ ನಂತರ ಪೆರಿಯ ಪಳುವೆಟ್ಟರಾಯರ್(ಶರತ್ ಕುಮಾರ್) ನಂದಿನಿ ವೀರಪಾಂಡಿಯನ್ ಮಗಳೆಂಬುದನ್ನು ರಿವೀಲ್ ಮಾಡುತ್ತಾರೆ. ಮಧುರಾಂತಕನ್(ರೆಹಮಾನ್) ಆಕೆಯ ಅವಳಿ ಸಹೋದರ ಎನ್ನುವುದನ್ನು ತಿಳಿಸುತ್ತಾರೆ.