South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

ಚಿತ್ರರಂಗದಲ್ಲಿ ಹೀರೋಗಳು ಬೇಗ ಹೈಲೈಟ್ ಆಗುತ್ತಾರೆ. ಆದರೆ ವಿಲನ್ ಪಾತ್ರದಿಂದ ಪ್ರೇಕ್ಷಕರ ಹೃದಯವನ್ನು ಆಳುವವರು ಹಲವರು. ಅದೇ ಸಮಯದಲ್ಲಿ, ಪರದೆಯ ಮೇಲೆ ಮಹಿಳೆಯಾಗಿ ಜನರನ್ನು ಆಕರ್ಷಿಸಿದ ಅನೇಕ ಕಲಾವಿದರು ಇದ್ದಾರೆ. ಬಾಲಿವುಡ್‌ನ ಹೊರತಾಗಿ, ಸೌತ್ ಚಿತ್ರರಂಗದಲ್ಲಿ ಅಂತಹ ಅನೇಕ ನಟರಿದ್ದಾರೆ. ಅಯ್ಯೋ ಮಹಿಳೆಯಾಗಿ ನಟಿಸ್ಬೇಕಾ ಅಂತ ಹಿಂಜರಿಯಲಿಲ್ಲ ಇವರು. ಬದಲಾಗಿ ಬೆಳ್ಳಿತೆರೆಯ ಮೇಲೆ ತಮ್ಮ ಅಭಿನಯದಿಂದ ಮೋಡಿ ಮಾಡಿದರು. ಈ ಪಟ್ಟಿಯಲ್ಲಿ ರಜನಿಕಾಂತ್, ಕಮಲ್ ಹಾಸನ್ ಅವರಂತಹ ಸೂಪರ್ ಸ್ಟಾರ್ ಗಳೂ ಸೇರಿದ್ದಾರೆ.

First published:

  • 19

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ಬ್ಲಾಕ್ ಬಸ್ಟರ್ ಚಿತ್ರ 'ಅವ್ವೈ ಷಣ್ಮುಗಿ'ಯಲ್ಲಿ ಕಮಲ್ ಸ್ತ್ರೀ ದಾದಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳೆಯ ಪಾತ್ರವನ್ನು ನಿರ್ವಹಿಸಿದ ಮೊದಲ ನಟರಲ್ಲಿ ಅವರು ಒಬ್ಬರು. ಆ ಮಹಿಳೆ ಕಮಲ್ ಹಾಸನ್ ಎಂದು ತಿಳಿದಾಗ ಜನರು ಅಚ್ಚರಿಪಟ್ಟರು.

    MORE
    GALLERIES

  • 29

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ಕಮಲ್ ಹಾಸನ್ ಅದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ ಈ ನಟ ತೆರೆಯ ಮೇಲೆ ಅಭಿನಯ ರಾಕ್ಷಸ ಎಂದೇ ಹೇಳಬಹುದು.

    MORE
    GALLERIES

  • 39

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ‘ಕಂದಸ್ವಾಮಿ’ ಚಿತ್ರದಲ್ಲಿ ವಿಕ್ರಮ್ ಅವರು ಹೆಣ್ಣಿನ ಪಾತ್ರ ಮಾಡಿದ್ದರು. ಅವರು ಚಿತ್ರದಲ್ಲಿ ಕಾನ್-ಆರ್ಟಿಸ್ಟ್/ಐಟಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಸೀರೆ ಮತ್ತು ಮೇಕಪ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಜನರು ಅವರ ಸ್ಟೈಲ್ ತುಂಬಾ ಇಷ್ಟಪಟ್ಟಿದ್ದರು.

    MORE
    GALLERIES

  • 49

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ಸೂರ್ಯ ಅವರ 'ಅಯಾನ್' ಚಿತ್ರದಲ್ಲಿ ಮಹಿಳೆಯಾಗಿ ನಟಿಸಿದ್ದಾರೆ. ಅಲ್ಲಿ ಅವರು ಸ್ಮಗ್ಲರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಜೈಭೀಮ್ ಸ್ಟಾರ್ ಚಿತ್ರದಲ್ಲಿ ಒಂದು ತುಂಡು ಉಡುಪನ್ನು ಧರಿಸಿದ್ದರು. ಅವರು ಮಹಿಳೆಯಾಗಿದ್ದರೆ ಅವರು ಎಷ್ಟು ಕ್ಯೂಟ್ ಆಗಿರುತ್ತಿದ್ದರು ಎನ್ನುವುದನ್ನು ಇಲ್ಲಿ ತೋರಿಸಿದ್ದಾರೆ.

    MORE
    GALLERIES

  • 59

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    'ರೆಮೋ' ಚಿತ್ರದಲ್ಲಿ ಶಿವಕಾರ್ತಿಕೇಯನ್ ಲೇಡಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದಲ್ಲಿ ಜನರು ಅವರನ್ನು ತುಂಬಾ ಇಷ್ಟಪಟ್ಟಿದ್ದರು. ಇದರಲ್ಲಿ ಕೀರ್ತಿ ಸುರೇಶ್ ಹೀರೋಯಿನ್ ಆಗಿ ನಟಿಸಿದ್ದರು.

    MORE
    GALLERIES

  • 69

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ‘ಕವಿಯ ತಲೈವನ್’ ಚಿತ್ರದಲ್ಲಿ ಪೃಥ್ವಿರಾಜ್ ಹೆಣ್ಣಿನ ಉಡುಗೆ ತೊಟ್ಟಿದ್ದರು. ಅವರು 20 ನೇ ಶತಮಾನದ ರಂಗಭೂಮಿ ಕಲಾವಿದನ ಪಾತ್ರವನ್ನು ನಿರ್ವಹಿಸಿದರು. ಪೃಥ್ವಿರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅವರ ಚಿತ್ರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 79

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ಹಾರರ್ ಚಿತ್ರ 'ಕಾಂಚನಾ'ದಲ್ಲಿ ಶರತ್‌ಕುಮಾರ್ ಟ್ರಾನ್ಸ್‌ಜೆಂಡರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶರತ್‌ಕುಮಾರ್ ಅವರ ಅಭಿನಯವು ಹೆಚ್ಚು ಮೆಚ್ಚುಗೆ ಪಡೆದಿದೆ. ಅವರ ಬಾಡಿ ಲಾಂಗ್ವೇಜ್ ಅಂತೂ ಅದ್ಭುತವಾಗಿತ್ತು.

    MORE
    GALLERIES

  • 89

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    'ಪಂಕರನ್' ಚಿತ್ರದಲ್ಲಿ ರಜನಿಕಾಂತ್ ತನ್ನ ತಂಗಿಯ ಮದುವೆಯಂದು ಅವಳನ್ನು ಹುರಿದುಂಬಿಸುತ್ತಾನೆ. ಹಿಟ್ ಹಾಡು 100 ವರುಷಂಗಾಗಿ ಅವರು ಮದುವೆಯ ಉಡುಪನ್ನು ಧರಿಸಿದ್ದರು.

    MORE
    GALLERIES

  • 99

    South Stars: ಈ ಸೌತ್ ಸೂಪರ್ ಸ್ಟಾರ್ಸ್ ಮಹಿಳಾ ಪಾತ್ರ ಮಾಡಿ ಸೈ ಎನಿಸಿಕೊಂಡ್ರು!

    ‘ಮಾಮನ ಮಗ’ ಸಿನಿಮಾದಲ್ಲಿ ಸತ್ಯರಾಜ್ ಹೆಣ್ಣಿನ ವೇಷ ಧರಿಸಿ ಮೀನಾ ಅವರನ್ನು ಫೂಲ್ ಮಾಡುವ ಸೀನ್ ಇದೆ. ಸತ್ಯರಾಜ್ ಇತರ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವೆಲ್ಲಕ್ಕೂ ನ್ಯಾಯ ಸಲ್ಲಿಸಿದ್ದಾರೆ.

    MORE
    GALLERIES