ಇಲ್ಲಿದ್ದಾರೆ ನೋಡಿ ನಿಮ್ಮ ಮಸ್ತಾನಿ ಎಂದು ಕತ್ರೀನಾ ಕೈಫ್ ಅವರನ್ನು ಪರಿಚಯಿಸಿದರು. ಸುಭಾಶ್ ಕೆ ಜಾ ಅವರು ಬಾಜಿರಾವ್ ಮಸ್ತಾನಿಯಲ್ಲಿ ಹೀರೋ - ಹೀರೋಯಿನ್ ಆಯ್ಕೆ ಬಗ್ಗೆ ಆಸಕ್ತಿಕರ ವಿಚಾರಗಳನ್ನು ಬರೆದಿದ್ದಾರೆ. ಐಶ್-ಸಲ್ಮಾನ್ ಜೋಡಿಯನ್ನು ಒಂದು ಮಾಡುವುದು ಸಾಧ್ಯವಾಗದೆ ಇದ್ದಾಗ ಸಲ್ಮಾನ್ ಅವರು ಇದರಲ್ಲಿ ಕತ್ರೀನಾ ನಟಿಸಬೇಕೆಂದು ಬಯಸಿದರು. ಹಾಗಾಗಿ ಕತ್ರೀನಾ ಅವರನ್ನು ತಾವೇ ಖುದ್ದಾಗಿ ಕರೆದುಕೊಂಡು ಬನ್ಸಾಲಿ ಮನೆಗೆ ಬಂದಿದ್ದರು.
ಭೂಮಿಕಾಗೆ ಬನ್ಸಾಲಿ ಒಂದು ಸ್ಕ್ರೀನ್ ಟೆಸ್ಟ್ ಇಟ್ಟರು. ಆದರೆ ಇದರಲ್ಲಿ ಭೂಮಿಕಾ ಅವರ ಸೀರೆಗೆ ಬೆಂಕಿ ತಾಗಿತು. ಅಲ್ಲಿಗೆ ಭೂಮಿಕಾ ಅಡಿಷನ್ ಖತಂ. ಈ ಘಟನೆಯಾಗಿ ಬರೋಬ್ಬರಿ 12 ವರ್ಷಗಳ ನಂತರ ಬನ್ಸಾಲಿ ಮತ್ತೊಮ್ಮೆ ಬಾಜಿರಾವ್ ಮಸ್ತಾನಿ ಪ್ರಾಜೆಕ್ಟ್ ರೀ ಓಪನ್ ಮಾಡಿದರು. ಈ ಸಲ ಅಜಯ್ ದೇವಗನ್ ಅವರ ಆಯ್ಕೆಯಾಗಿದ್ದರು. ಆದರೆ ಅಜಯ್ ಕೇಳಿದ ಸಂಭಾವನೆ ನೀಡಲು ತಂಡ ಸಿದ್ಧವಿರದ ಕಾರಣ ಅವರನ್ನೂ ಕೈಬಿಡಲಾಯ್ತು.