Prabhas-Rishab Shetty: ವಿಶ್ ಮಾಡೋಕೆ ಕಾಲ್ ಮಾಡಿದ್ರೆ ಇಂಟ್ರೆಸ್ಟ್ ತೋರಿಸ್ಲಿಲ್ಲ ಪ್ರಭಾಸ್! ರಿಷಬ್ ಏನಂದ್ರು?
ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರು ಪ್ರಭಾಸ್ಗೆ ಕಾಲ್ ಮಾಡಿದ್ರಂತೆ. ನಟನಿಗೆ ವಿಶ್ ಮಾಡೋಣ ಅಂದ್ರೆ ಅದರ ಬಗ್ಗೆ ಆಸಕ್ತಿಯನ್ನೇ ತೋರಿಸ್ಲಿಲ್ಲ ಪ್ರಭಾಸ್ ಎಂದಿದ್ದಾರೆ ರಿಷಬ್.
1/ 6
ನಟ ರಿಷಬ್ ಶೆಟ್ಟಿ ಅವರು ಪ್ರಭಾಸ್ ಅವರ ಜೊತೆಗಿನ ಹಳೆಯ ಫೋನ್ ಕಾಲ್ ಸಂಭಾಷಣೆಯೊಂದನ್ನು ರಿವೀಲ್ ಮಾಡಿದ್ದಾರೆ. ಬಾಹುಬಲಿ ಸ್ಟಾರ್ಗೆ ರಿಷಬ್ ಕರೆ ಮಾಡಿದ್ದೇಕೆ?
2/ 6
ಪ್ರಭಾಸ್ ಬರ್ತ್ಡೇ ದಿನ ರಿಷಬ್ ಶೆಟ್ಟಿ ಅವರು ಬಾಹುಬಲಿ ಸ್ಟಾರ್ಗೆ ವಿಶ್ ಮಾಡೋಕೆ ಕಾಲ್ ಮಾಡಿದ್ರಂತೆ. ಆದರೆ ಪ್ರಭಾಸ್ ವಿಶ್ ಬಗ್ಗೆ ಆಸಕ್ತಿಯೇ ತೋರಿಸಿಲ್ಲ.
3/ 6
ನಾನು ಬರ್ತ್ಡೇ ವಿಶ್ ಮಾಡೋಕೆ ಕಾಲ್ ಮಾಡಿದ್ದೆ. ಆದರೆ ಅವರು ವಿಶ್ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಬರೀ ಕಾಂತಾರ ಬಗ್ಗೆಯೇ ಮಾತನಾಡಿದ್ದರು ಎಂದಿದ್ದಾರೆ ರಿಷಬ್ ಶೆಟ್ಟಿ.
4/ 6
ಕಾಂತಾರ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೇ ಸಿನಿಮಾಗೆ ಶುಭ ಹಾರೈಸಿದವರಲ್ಲಿ ನಟ ಪ್ರಭಾಸ್ ಕೂಡಾ ಒಬ್ಬರು ಎನ್ನುವುದು ಗಮನಾರ್ಹ.
5/ 6
ಕಾಂತಾರ ಸಿನಿಮಾ ರಿಲೀಸ್ ಆಗಿ ಹೊಸ ಅಲೆ ಶುರುವಾಗಿತ್ತಷ್ಟೇ. ಆಗಿನ್ನೂ ಸ್ವತಃ ಚಿತ್ರತಂಡಕ್ಕೂ ಈ ಸಿನಿಮಾ ಹೀಗೆ ಹಿಟ್ ಆಗುತ್ತೆ ಎನ್ನುವುದು ಗೊತ್ತಿರಲಿಲ್ಲವೇನೋ.
6/ 6
ಆದರೆ ಕನ್ನಡದ ಸ್ಟಾರ್ ನಟರು ರಿಷಬ್ ಶೆಟ್ಟಿಗೆ ಶುಭಾಶಯ ಹೇಳುವ ಮೊದಲೇ ನಟ ಪ್ರಭಾಸ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿ ರಿಷಬ್ ಶೆಟ್ಟಿ ಹಾಗೂ ತಂಡಕ್ಕೆ ವಿಶ್ ಮಾಡಿದ್ದರು.
First published: