ನಟಿ ಹಾಗೂ ರಾಜಕಾರಣಿಯಾಗಿರುವ ನಗ್ಮಾ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 1990ರ ದಶಕದಲ್ಲಿ ಜನಪ್ರಿಯ ನಾಯಕ ನಟಿಯಾಗಿ ಮಿಂಚಿದ್ರು. 1990ರಲ್ಲಿ ಸಲ್ಮಾನ್ ಖಾನ್ ಜೊತೆಗಿನ ಬಾಘಿ ಚಿತ್ರದ ಮೂಲಕ ನಗ್ಮಾ ತಮ್ಮ ಸಿನಿಮಾ ರಂಗಕ್ಕೆ ಕಾಲಿಟ್ಟರು. ಹಿಂದಿ ಮಾತ್ರವಲ್ಲದೆ ಸೌತ್ ಸಿನಿಮಾಗಳನ್ನು ನಟಿಸಿದ್ದಾರೆ. ಜೊತೆಗೆ ಭೋಜ್ಪುರಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ನಟಿ ನಗ್ಮಾ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರೊಂದಿಗೆ ಆಫೇರ್ ಹೊಂದಿದ್ದಾರೆ ಎಂದು ಹಿಂದೆ ಭಾರೀ ಸುದ್ದಿ ಆಗಿತ್ತು. ಈ ಇಬ್ಬರೂ ಸೆಲೆಬ್ರಿಟಿಗಳು ರೂರ್ಮಸ್ ಬಗ್ಗೆ ಮಾತಾಡಲಿಲ್ಲ. ಕ್ರಿಕೆಟಿಗನ ಮದುವೆಯ ನಂತರವೂ ಗಂಗೂಲಿಯೊಂದಿಗೆ ನಗ್ಮಾ ಹೆಸರು ತಳುಕು ಹಾಕಿಕೊಂಡಿತ್ತು. 2009ರಲ್ಲಿ ದಿ ಟೆಲಿಗ್ರಾಫ್ ಜೊತೆಗಿನ ಸಂಭಾಷಣೆಯಲ್ಲಿ ನಗ್ಮಾ ಅವರು ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತಾಡಿದರು.