ಅತ್ತ ಸ್ಯಾಂಡಲ್ವುಡ್ ಸಾನ್ವಿ 'ಸರಿಲೇರು ನೀಕೆವ್ವರು ' ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದರು. ಆದರೆ ಇತ್ತ ಐಟಿ ಅಧಿಕಾರಿಗಳು ಅವರಿಗೆ ಶಾಕ್ ನೀಡಿದ್ದರು.
2/ 51
ಹೌದು, ಜನವರಿ 16 ರಂದು ಬೆಳಿಗ್ಗೆ ಕೊಡಗಿನ ವಿರಾಜಪೇಟೆಯಲ್ಲಿರುವ ರಶ್ಮಿಕಾ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರೀಶಿಲನೆ ನಡೆಸಿದ್ದರು.
3/ 51
ಇದೇ ವೇಳೆ ನಟಿ ಹೈದಾರಾಬಾದ್ನಲ್ಲಿ ಭೀಷ್ಮಾ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರನ್ನು ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
4/ 51
ಅಷ್ಟೇ ಅಲ್ಲದೆ ಜ.21ರಂದು ಮೈಸೂರು ಕಚೇರಿಗೆ ಆಗಮಿಸುವಂತೆ ರಶ್ಮಿಕಾ ಹಾಗೂ ಅವರ ತಂದೆ ಮದನ್ ಮಂದಣ್ಣಗೆ ನೋಟಿಸ್ ಜಾರಿ ಮಾಡಿದ್ದರು.
5/ 51
ಈ ದಾಳಿ ವೇಳೆ ರಶ್ಮಿಕಾ ಹೆಸರಿನಲ್ಲಿ ಎರಡು ಪ್ಯಾನ್ ಕಾರ್ಡ್ಗಳು ಲಭ್ಯವಾಗಿತ್ತು. ಒಂದರಲ್ಲಿ ಎಂ.ಎ. ರಶ್ಮಿಕಾ, ಮತ್ತೊಂದರಲ್ಲಿ ಎಂ.ಎಂ. ರಶ್ಮಿಕಾ ಎಂಬ ಹೆಸರಿತ್ತು.
6/ 51
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಟುಂಬಸ್ಥರು ಪ್ಯಾನ್ ಕಾರ್ಡ್ ಹೆಸರಿನಲ್ಲಿ ಲೋಪವಿದ್ದ ಕಾರಣ ಮತ್ತೊಂದು ಕಾರ್ಡ್ ಮಾಡಲಾಗಿದೆ. ಇದರಲ್ಲಿ ಒಂದನ್ನು ಎಲ್ಲೂ ಕೂಡ ಬಳಸಿಲ್ಲ ಎಂದು ಐಟಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
7/ 51
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ನಟಿಯೊಬ್ಬರ ಮನೆ ಮೇಲೆ ಐಟಿ ರೇಡ್ ನಡೆದಿರುವುದು ಇದೇ ಮೊದಲು. ಹೀಗಾಗಿ ಈ ದಾಳಿ ಎಲ್ಲರ ಗಮನ ಸೆಳೆಯುವಂತಾಯಿತು.
8/ 51
ಆದರೆ ಈ ಐಟಿ ದಾಳಿಗೂ ರಶ್ಮಿಕಾ ಮಂದಣ್ಣಗೂ ಯಾವುದೇ ಸಂಬಂಧವಿಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಚಿತ್ರರಂಗದಿಂದ ರಶ್ಮಿಕಾ ಗಳಿಸಿದ್ದಕ್ಕಿಂತ ಹೆಚ್ಚಾಗಿ ನಟಿಯ ತಂದೆಯ ಆಸ್ತಿ ಜಾಸ್ತಿಯಿದೆ ಎಂದು ತಿಳಿದು ಬಂದಿದೆ.
9/ 51
ಮದನ್ ಮಂದಣ್ಣ ಅವರ ಹೆಸರಿನಲ್ಲಿರುವ ಸೆರೆನಿಟಿ ಹಾಲ್ ಕಟ್ಟಲು ಅವರು 4 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಇದಕ್ಕಾಗಿ ತಮ್ಮ 12 ಎಕರೆ ಕಾಫಿ ತೋಟ, 2 ಮನೆ ಹಾಗೂ ಬೆಂಗಳೂರಿನ ಹಾಗೂ ಮೈಸೂರಿನ ಸೈಟ್ಗಳನ್ನು ಮಾರಾಟ ಮಾಡಿದ್ದರು.
10/ 51
ನಾನು ನನ್ನ ಹಣದಿಂದಲೇ ಸೆರೆನಿಟಿ ಹಾಲ್ ನಿರ್ಮಿಸಿದ್ದೆ. ಅದಕ್ಕಾಗಿ ನನ್ನ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿರುವುದಾಗಿ ಮಂದನ್ ಮಂದಣ್ಣ ತಿಳಿಸಿದ್ದಾರೆ. ಇನ್ನು ಐಟಿ ದಾಳಿ ವೇಳೆ ಸಿಕ್ಕಿದ ಸ್ವಲ್ಪ ಹಣ ಕೂಡ ಹಾಲ್ ಬುಕ್ಕಿಂಗ್ಗಾಗಿ ಪಡೆದ ಅಡ್ವಾನ್ಸ್ ಎಂದು ಹೇಳಿದ್ದಾರೆ.
11/ 51
ಇನ್ನು ಈ ದಾಳಿ ವೇಳೆಯೇ ಚಿತ್ರರಂಗದಿಂದ ರಶ್ಮಿಕಾ ಕೋಟಿಗಟ್ಟಲೇ ದುಡಿದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹಾಗಿದ್ರೆ ಸ್ಯಾಂಡಲ್ವುಡ್ ಸಾನ್ವಿ ಚಿತ್ರರಂಗದಿಂದ ಗಳಿಸಿದೆಷ್ಟು?
12/ 51
ರಶ್ಮಿಕಾ ಮಂದಣ್ಣ ಇದುವರೆಗೆ ತಮ್ಮ ಚಿತ್ರಗಳಿಂದ ಪಡೆದಿರುವ ಒಟ್ಟು ಸಂಭಾವನೆ 2 ಕೋಟಿ 10 ಲಕ್ಷ ಎಂದು ಅವರ ತಂದೆ ಮದನ್ ಮಂದಣ್ಣ ತಿಳಿಸಿದ್ದಾರೆ.
13/ 51
ಆ 2 ಕೋಟಿ 10 ಲಕ್ಷದಲ್ಲಿ 70 ಲಕ್ಷ ಟ್ಯಾಕ್ಸ್ ಕಟ್ಟಿದ್ದರು. ಇನ್ನುಳಿದ 40 ಲಕ್ಷ ರೂ. ಖರ್ಚು ಮಾಡಿದ್ದಾರೆ. ಉಳಿದ 90 ಲಕ್ಷ ಅಕೌಂಟ್‍ನಲ್ಲಿದೆ ಎಂದು ತಿಳಿಸಿದ್ದಾರೆ.
14/ 51
ಇನ್ನು ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಗಳಿಸಿದ್ದು ಕೇವಲ 2 ಲಕ್ಷ 50 ಸಾವಿರ ರೂ. ಮಾತ್ರ.
15/ 51
ಹಾಗೆಯೇ ಗಣೇಶ್ ಜೊತೆಗಿನ ಚಮಕ್ ಚಿತ್ರಕ್ಕಾಗಿ 5 ಲಕ್ಷ ರೂ. ಪಡೆದುಕೊಂಡಿದ್ದರು.
16/ 51
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಅಂಜನೀಪುತ್ರ ಚಿತ್ರಕ್ಕೆ 6 ಲಕ್ಷ ರೂ. ಸಂಭಾವನೆ ಪಡೆದಿದ್ದರು ಎಂದು ಮದನ್ ಮಂದಣ್ಣ ತಿಳಿಸಿದ್ದಾರೆ.
17/ 51
ಅದೇ ರೀತಿ ದರ್ಶನ್ ಜೊತೆಗಿನ ಯಜಮಾನ ಚಿತ್ರದ ನಟನೆಗಾಗಿ 18 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದರು ಎನ್ನಲಾಗಿದೆ.
18/ 51
ಹಾಗೆಯೇ ಟಾಲಿವುಡ್-ಕಾಲಿವುಡ್ನಲ್ಲಿ ರಶ್ಮಿಕಾ ಅವರ ಸಂಭಾವನೆ 25 ರಿಂದ 35 ಲಕ್ಷದೊಳಗಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
19/ 51
ಇನ್ನು ರಶ್ಮಿಕಾ ತೆಲುಗು ಚಿತ್ರವೊಂದಕ್ಕೆ 60 ಲಕ್ಷ ರೂ. ಪಡೆದಿರುವುದು ಇದುವರೆಗಿನ ಗರಿಷ್ಠ ಸಂಭಾವನೆ ಎಂದು ಕುಟುಂಬಸ್ಥರು ಹೇಳುತ್ತಾರೆ.
20/ 51
ಆದರೆ ಅವರ ಸಂಭಾವನೆ 1 ಕೋಟಿ ರೂ. ಗೆ ತಲುಪಿದೆ ಎಂಬಿತ್ಯಾದಿ ಸುದ್ದಿಗಳು ಸತ್ಯಕ್ಕೆ ದೂರ. ಪಡೆಯುತ್ತಿರುವ ಸಂಭಾವನೆಗೆ ಸಂಬಂಧಿಸಿದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
21/ 51
ಒಟ್ಟಿನಲ್ಲಿ ಸಕ್ಸಸ್ನ ಉತ್ತುಂಗದಲ್ಲಿರುವಾಗಲೇ ಐಟಿ ದಾಳಿಯಲ್ಲಿ ರಶ್ಮಿಕಾ ಹೆಸರು ಕೇಳಿ ಬಂದಿದ್ದು ಮಾತ್ರ ವಿಪರ್ಯಾಸ.