ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಗುರುಶಿಷ್ಯರು ಸಿನಿಮಾ ಮೋಡಿ ಮಾಡಿತ್ತು. ಎಷ್ಟೋ ಜನ ಶರಣ್ ನಟನೆಯನ್ನು ಮೆಚ್ಚಿಕೊಂಡಿದ್ದರು. ಗ್ರಾಮೀಣ ಸೊಬಗು ಸವಿದು ಖುಷಿ ಪಟ್ಟಿದ್ದರು. ಈಗ ಈ ಸಿನಿಮಾ ಟಿವಿಯಲ್ಲಿ ಯಲ್ಲಿ ಬರಲು ಸಜ್ಜಾಗಿದೆ.
2/ 8
ಗುರು ಶಿಷ್ಯರು ಸಿನಿಮಾವೂ ಸ್ಟೋಟ್ರ್ಸ್ ಡ್ರಾಮಾ ಕುರಿತಾದ ಚಿತ್ರವಾಗಿದ್ದು, ಡಿಸೆಂಬರ್ 11ರಂದು ಜೀ ಕನ್ನಡದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. ಮಿಸ್ ಮಾಡ್ದೇ ನೋಡಿ.
3/ 8
ಗುರುಶಿಷ್ಯರು ಚಿತ್ರವು 90ರ ದಶಕದ ಕಥೆಯಾಗಿದೆ. ಈ ಸಿನಿಮಾದಲ್ಲಿ ಶರಣ್ ಅವರ 12 ಶಿಷ್ಯರ ಪಾತ್ರಗಳು ಸಿನಿಮಾಗೆ ಜೀವ ತುಂಬುತ್ತವೆ. ಅದರಲ್ಲಿ ಆರು ಮಂದಿ ಶಿಷ್ಯಂದಿರು ಕನ್ನಡದ ಜನಪ್ರಿಯ ನಟರ ಮಕ್ಕಳಾಗಿದ್ದಾರೆ.
4/ 8
ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿ ಶರಣ್, ನಿಶ್ವಿಕಾ ನಾಯ್ಡು ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಕಾಮಿಡಿಯೂ ಚೆನ್ನಾಗಿ ಮೂಡಿ ಬಂದಿದೆ. ಹಾಡುಗಳು ಸಹ ಜನರಿಗೆ ಇಷ್ಟವಾಗಿದ್ದವು
5/ 8
ಗುರು ಶಿಷ್ಯರು ಸಿನಿಮಾದಲ್ಲಿ ಖೋ ಖೋ ಆಟಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಸಿನಿಮಾದಲ್ಲಿ ದೈಹಿಕ ಶಿಕ್ಷಕರಾಗಿ ನಟಿಸಿದ ಶರಣ್ ಅವರು, ಆಟಕ್ಕಾಗಿ ಹುಡುಗರ ಜತೆ ದೈಹಿಕ ತರಬೇತಿ ಪಡೆದಿದ್ದರಂತೆ.
6/ 8
ನಾಯಕ ಶರಣ್ ಅವರ ಪುತ್ರ ಹೃದಯ್, ನೆನಪಿರಲಿ ಪ್ರೆಮ್ ಪುತ್ರ ಏಕಾಂತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನವೀನ್ ಕೃಷ್ಣ ಪುತ್ರ ಹರ್ಷಿತ್, ರವಿಶಂಕರ್ ಗೌಡ ಪುತ್ರ ಸೂರ್ಯ ಮತ್ತು ರಾಜಕಾರಣಿ ರಾಜು ಗೌಡ ಪುತ್ರ ಮಣಿಕಂಠ ನಾಯಕ್ ನಟಿಸಿದ್ದಾರೆ.
7/ 8
ಶಿಷ್ಯರ ಪಾತ್ರಗಳಿಗೆ ನಡೆದ ಆಡಿಷನ್ನಲ್ಲಿ 6 ಜನ ಸಿನಿಮಾ ನಾಯಕರ ಮಕ್ಕಳು, ಉಳಿದ 6 ಜನರನ್ನು ಹೊರಗಿನವರನ್ನು ಆಯ್ಕೆ ಮಾಡಿದ್ರಂತೆ. 12 ಜನ ಉತ್ತಮವಾಗಿ ನಟಿಸಿದ್ದಾರೆ.
8/ 8
ಚಿತ್ರದಲ್ಲಿ ಗ್ರಾಮೀಣ ಸೊಬಗು ತುಂಬಿದ್ದು, ಸಿನಿಮಾ ಮಿಸ್ ಮಾಡಿಕೊಂಡವರಿಗೆ ಒಳ್ಳೆಯ ಅವಕಾಶ. ಮನೆಯಲ್ಲೇ ಕೂತು ಜೀ ಕನ್ನಡದಲ್ಲಿ ಡಿಸೆಂಬರ್ 11 ರಂದು ಮಧ್ಯಾಹ್ನ 3 ಗಂಟೆಗೆ ನೋಡಿ.