ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಒಬ್ಬ ವ್ಯಕ್ತಿ ಕಾರಣ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈ ಜೋಡಿ ವಿಚ್ಛೇದನ ಬಳಿಕ ಭಾರೀ ಸುದ್ದಿಯಾಗಿದ್ದಾರೆ. ಇಬ್ಬರು ದೂರವಾಗಿ ವರ್ಷಗಳೇ ಕಳೆದ್ರು ಜನ ಇವ್ರು ದೂರಾಗಲು ಕಾರಣ ಏನು ಅನ್ನೋದನ್ನು ಹುಡುಕುತ್ತಿದ್ದಾರೆ. ಇಬ್ಬರ ಸಂಬಂಧ ಮುರಿಯಲು ಸ್ಯಾಮ್ ಆಪ್ತ ಸ್ನೇಹಿತ ಮತ್ತು ಸ್ಟೈಲಿಸ್ಟ್ ಪ್ರೀತಮ್ ಜುಕಲ್ಕರ್ ಕಾರಣ ಎನ್ನಲಾಗ್ತಿದೆ.
ಪ್ರೀತಮ್ ಜುಕಾಲ್ಕರ್, ಸಮಂತಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎನ್ನಲಾಗ್ತಿದ್ದು, ಈ ಬಗ್ಗೆ ಅನೇಕ ಬಾರಿ ಸ್ಯಾಮ್ ಟ್ರೋಲ್ಗೆ ಒಳಗಾಗಿದ್ದಾರೆ. ಈತನೇ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗಿದೆ. ಈತನಿಗೆ ನಾಗ ಚೈತನ್ಯ ಅಭಿಮಾನಿಗಳಿಂದ ಕೊಲೆ ಬೆದರಿಕೆ ಕೂಡ ಬಂದಿತ್ತಂತೆ. ಆದರೆ, ಬಳಿಕ ಪ್ರೀತಮ್ ಜುಕಾಲ್ಕರ್ ಮೊದಲ ಬಾರಿಗೆ ಮೌನ ಮುರಿದು ಸಮಂತಾ ಜೊತೆಗಿನ ಸಂಬಂಧದ ಬಗ್ಗೆ ಜನರಿಗೆ ತಿಳಿಸಿದ್ದರು.
ಚೈತನ್ಯ ಅವರನ್ನು ನಾನು ಹಲವು ವರ್ಷಗಳಿಂದ ಬಲ್ಲೆ. ಸಮಂತಾ ಮತ್ತು ನನ್ನ ನಡುವಿನ ಸಂಬಂಧ ಅವರಿಗೂ ಗೊತ್ತು. ಅವರು ಕೂಡ ಈ ಬಗ್ಗೆ ಮಾತನಾಡಬಹುದಿತ್ತು. ಸ್ಯಾಮ್ ಬಗ್ಗೆ ಇಂತಹ ಕಾಮೆಂಟ್ಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಇಂತಹ ಹೇಳಿಕೆ ನೀಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚೈತನ್ಯ ಅವರೇ ಪ್ರತಿಕ್ರಿಯಿಸಬೇಕಿದೆ. ಈ ಜನರನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.