Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

ಬಾಹುಬಲಿ ನಟ ರಾಣಾ ದಗ್ಗುಬಾಟಿ ಅವರು ಭಾರತೀಯ ಸಿನಿಮಾ ಇಂಡಸ್ಟ್ರಿ ಹಾಗೂ ಹಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಇಲ್ಲಿಯೇ ಹಾಲಿವುಡ್ ಮಾಡ್ತೀವಿ ಎಂದ ನಟ ಹೇಳಿದ್ದಿಷ್ಟು.

First published:

 • 17

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ನಟ ರಾಣಾ ದಗ್ಗುಬಾಟಿ ಅವರು ಇತ್ತೀಚೆಗೆ ಭಾರತೀಯ ಚಿತ್ರರಂಗದ ಬಗ್ಗೆ ತಮ್ಮ ನಿಲುವುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಎಲ್ಲಾ ಇಂಡಸ್ಟ್ರಿಯನ್ನು ಜೊತೆಯಾಗಿ ಕಾಣುವ ಅವರ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 27

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ನಿಜಮ್ ವಿತ್ ಸ್ಮಿತಾ ಟಾಕ್ ಶೋನಲ್ಲಿ ನಟ ನಾನಿ ಹಾಗೂ ರಾಣಾ ದಗ್ಗುಬಾಟಿ ಜೊತೆಯಾಗಿ ಭಾಗವಹಿಸಿದ್ದರು. ಈ ಶೋನಲ್ಲಿ ರಾಣಾ ದಗ್ಗುಬಾಟಿ ಇಂಡಸ್ಟ್ರಿಯಲ್ಲಿ ತಮ್ಮ ಗುರಿ ಹಾಗೂ ಉದ್ದೇಶದ ಸ್ಪಷ್ಟ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

  MORE
  GALLERIES

 • 37

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ನಿಮ್ಮ ಬ್ಯಾಗ್ರೌಂಡ್​ ನಿಮ್ಮ ಹಾಲಿವುಡ್ ಜರ್ನಿಗೆ ಎಷ್ಟು ನೆರವಾಗಬಹುದು ಎನ್ನುವ ಅಭಿಮಾನಿಯ ಪ್ರಶ್ನೆಗೆ ನಟ ಉತ್ತರಿಸಿದ್ದಾರೆ. ನನಗೆ 60-70 ವರ್ಷಗಳ ಸಿನಿಮಾ ಸಂಪರ್ಕ ಇದೆ. ಆ ವಿಚಾರಗಳು ನೆರವಾಗಬಹುದು. ಇಲ್ಲಿ ಸಿನಿಮಾ ಹೇಗೆ ಕಟ್ಟಲ್ಪಟ್ಟಿದೆ ಎನ್ನುವುದು ಗೊತ್ತು ಎಂದಿದ್ದಾರೆ.

  MORE
  GALLERIES

 • 47

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ನನಗೆ ಸಿನಿಮಾದ ಸೋಲು ಗೆಲುವು ಗೊತ್ತು. ಹೇಗೆ ಉದ್ಯಮ ಬೀಳುತ್ತದೆ. ಅದನ್ನೆಲ್ಲ ಸರಿ ಮಾಡಿ ಅವುಗಳನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಾಗಿದೆ. ಹಾಗಾಗಿ ಇದು ನನ್ನ ಕೆಲಸ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  MORE
  GALLERIES

 • 57

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ಭಾರತದಲ್ಲಿ ಹಾಲಿವುಡ್ ನಿರ್ಮಿಸುವುದು ನನ್ನ ಉದ್ದೇಶ. ಅದು ನನ್ನ ಕೆಲಸ. ಎಲ್ಲ ಇಂಡಸ್ಟ್ರಿ ಒಟ್ಟುಗೂಡುವುದು, ಎಲ್ಲಾ ಟೆಕ್ನಾಲಜಿ ಜೊತೆಯಾಗುವ ಮೂಲಕ ನಾವು ಹಾಲಿವುಡ್​ಗಿಂತ ದೊಡ್ಡವರಾಗುತ್ತೇವೆ ಎಂದಿದ್ದಾರೆ.

  MORE
  GALLERIES

 • 67

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ಇದಕ್ಕೆ ಪ್ರತಿಕ್ರಿಯಿಸಿದ ನಾನಿ ಭಾರತದಾದ್ಯಂತ ನಮ್ಮ ಚಿತ್ರಗಳು ಮಾಡುತ್ತಿರುವ ಸದ್ದಿಗೆ ಮೂಲ ಕಾರಣಗಳಲ್ಲಿ ರಾಣಾ ಕೂಡಾ ಒಬ್ಬರು. ಇದೆಲ್ಲವೂ ಅಲ್ಲಿಂದ ಪ್ರಾರಂಭವಾಯಿತು. ದಯವಿಟ್ಟು ಎಲ್ಲರೂ ನೋಡಿ. ನಾವು ಇದನ್ನು ಮಾಡುತ್ತಿದ್ದೇವೆ. ನೀವೂ ಹೀಗೆ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಆಲೋಚನೆಯನ್ನು ಪ್ರಚೋದಿಸಿದವರು ರಾಣಾ ಎಂದಿದ್ದಾರೆ.

  MORE
  GALLERIES

 • 77

  Rana Daggubati: ಎಲ್ಲ ಇಂಡಸ್ಟ್ರಿ ಒಗ್ಗೂಡಿಸಿ ಹಾಲಿವುಡ್ ಇಲ್ಲಿ ಕಟ್ಟಬೇಕು ಎಂದ ರಾಣಾ!

  ರಾಣಾ ದಗ್ಗುಬಾಟಿ ದಮ್ ಮಾರೋ ದಮ್ ಚಿತ್ರದ ಮೂಲಕ ಹಿಂದಿಗೆ ಪಾದಾರ್ಪಣೆ ಮಾಡಿದಾಗ ಪ್ರಾದೇಶಿಕ ಚಲನಚಿತ್ರೋದ್ಯಮಗಳು ಒಂದಾಗುತ್ತವೆ ಎಂದು ಭವಿಷ್ಯ ನುಡಿದಿದ್ದರು. ನಾನು ಒಂಬತ್ತು ವರ್ಷಗಳ ಹಿಂದೆ ಹೇಳಿದ್ದೆ. ಯಾರೂ ನನ್ನನ್ನು ನಂಬಲಿಲ್ಲ. ಈಗ ಅದು ನಿಜವಾಗುತ್ತಿದೆ. ನಾವೆಲ್ಲರೂ ಈಗ ಒಂದೇ ಸ್ಥಳದಲ್ಲಿದ್ದೇವೆ ಎಂದು ಅವರು ಹೇಳಿದರು.

  MORE
  GALLERIES