Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

Vishal: ತಮಿಳು ನಟ ವಿಶಾಲ್ ಬಹುನಿರೀಕ್ಷಿತ ಸಿನಿಮಾ 'ಮಾರ್ಕ್ ಆಂಟೋನಿ' ಚಿತ್ರೀಕರಣ ಭರದಿಂದ ಸಾಗಿದೆ. 'ಮಾರ್ಕ್ ಆಂಟೋನಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ನಿರ್ದೇಶಕರು ಭರ್ಜರಿ ಆ್ಯಕ್ಷನ್ ಸೀನ್ ಪ್ಲಾನ್ ಮಾಡಿದ್ದಾರೆ. ಇದೀಗ ಸಿನಿಮಾ ಸೆಟ್​ನಲ್ಲಿ ಅವಘಡ ಸಂಭವಿಸಿದ್ದು, ಇಡೀ ಚಿತ್ರತಂಡವೇ ಬೆಚ್ಚಿಬಿದ್ದಿದೆ.

First published:

 • 18

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಇತ್ತೀಚೆಗೆ ಕಾಲಿವುಡ್ ನಟ ವಿಶಾಲ್ (Vishal) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ವಿಶಾಲ್ ಮಾರ್ಕ್ ಆಂಟೋನಿ ಚಿತ್ರಕ್ಕಾಗಿ ಆ ಚಿತ್ರೀಕರಣದ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಚಿತ್ರೀಕರಣದ ಅದೇ ಜಾಗದಲ್ಲಿ ಮತ್ತೊಂದು ಘಟನೆ ಸಂಭವಿಸಿದೆ.

  MORE
  GALLERIES

 • 28

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ವಿಶಾಲ್ ನಾಯಕನಾಗಿ ನಟಿಸುತ್ತಿರುವ 'ಮಾರ್ಕ್ ಆಂಟೋನಿ' ಚಿತ್ರದ ಇತ್ತೀಚಿನ ಶೂಟಿಂಗ್ ಚೆನ್ನೈನ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಸಿನಿಮಾಗಾಗಿ ಟ್ರಕ್​ಗೆ ಸಂಬಂಧಿಸಿದ ದೃಶ್ಯವನ್ನು ಚಿತ್ರೀಕರಿಸಲಾಗ್ತಿತ್ತು ಈ ವೇಳೆ ಟ್ರಕ್ ಡ್ರೈವರ್ ನಿಯಂತ್ರಣ ತಪ್ಪಿದ್ದು, ಎಲ್ಲಿ ಟ್ರಕ್ ನಿಲ್ಲಬೇಕೋ ಅಲ್ಲಿ ನಿಲ್ಲದೆ ಮುಂದಕ್ಕೆ ಬಂದಿದೆ.

  MORE
  GALLERIES

 • 38

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ನೂರಾರು ಜನರು ಶೂಟಿಂಗ್ ಸ್ಥಳದಲ್ಲಿದ್ರು ಟ್ರಕ್ ಮುಂದಕ್ಕೆ ಬರ್ತಿದ್ದಂತೆ ಎದ್ದು ಓಡಿದ್ದಾರೆ. ಟ್ರಕ್ ನಿಯಂತ್ರಣ ತಪ್ಪಿ ಸ್ಟುಡಿಯೋದಲ್ಲಿನ ಸೆಟ್ಟಿಂಗ್ಸ್​ಗೆ ಡಿಕ್ಕಿ ಹೊಡೆದಿದೆ. ಸಿನಿಮಾ ಸೆಟ್ ಸಂಪೂರ್ಣ ಹಾಳಾಗಿದೆ.

  MORE
  GALLERIES

 • 48

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಇದೇ ವೇಳೆ ಸ್ಥಳದಲ್ಲಿ ನಾಯಕ ವಿಶಾಲ್ ಹಾಗೂ ಅನೇಕ ಕಲಾವಿದರು ಸೇರಿದಂತೆ 100ಕ್ಕೂ ಹೆಚ್ಚು ಕಾರ್ಮಿಕರು ಮತ್ತು ತಂತ್ರಜ್ಞರು ಇದ್ದರು. ಲಾರಿ ನಿಯಂತ್ರಣ ತಪ್ಪಿ ಹೋಗಿರುವುದನ್ನು ಅರಿತ ಅಲ್ಲಿದ್ದವರು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡ ವಿಚಾರಣೆ ನೀಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದೆ.

  MORE
  GALLERIES

 • 58

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಈ ಹಿಂದೆ ಇದೇ ಸಿನಿಮಾದ ಫೈಟ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ವಿಶಾಲ್ ಗಾಯಗೊಂಡಿದ್ದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಚಿತ್ರೀಕರಣದಿಂದ ತೆರಳಿದ್ರು. ಬಳಿಕ ಚಿತ್ರದ ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸಲಾಯಿತು.

  MORE
  GALLERIES

 • 68

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಇತ್ತೀಚೆಗಷ್ಟೇ ದೊಡ್ಡ ಅಪಘಾತದಿಂದ ಹೊರಬಂದ ವಿಶಾಲ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಅಷ್ಟೇ ಅಲ್ಲದೇ ಶೂಟಿಂಗ್ ವೇಳೆ ಅನೇಕ ಬಾರಿ ವಿಶಾಲ್ ಗಾಯಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

  MORE
  GALLERIES

 • 78

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಸಿನಿಮಾ ಶೂಟಿಂಗ್ ವಿಷಯದಲ್ಲಿ ವಿಶಾಲ್ ಯಾವಾಗಲೂ ರಿಸ್ಕ್ ತೆಗೆದುಕೊಳ್ಳುತ್ತಾರೆ. ಮಾರ್ಕ್ ಆಂಟೋನಿ ಸಿನಿಮಾದ ಪ್ರಮುಖ ಫೈಟ್ ದೃಶ್ಯಗಳ ಚಿತ್ರೀಕರಣದ ವೇಳೆ ಕೂಡ ಅವಘಡ ಸಂಭವಿಸಿದೆ. ಅವರ ಜತೆಗೆ ಘಟಕದ ಸದಸ್ಯರೆಲ್ಲರೂ ಅಪಘಾತದಿಂದ ಪಾರಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

  MORE
  GALLERIES

 • 88

  Vishal: ಮಾರ್ಕ್ ಆಂಟೋನಿ ಸಿನಿಮಾ ಸೆಟ್​ನಲ್ಲಿ ಭಾರೀ ಅವಘಡ; ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್

  ಇತ್ತೀಚೆಗೆ ಲಾಠಿ ಚಿತ್ರದ ಶೂಟಿಂಗ್ ವೇಳೆ ವಿಶಾಲ್ ಎರಡು ಬಾರಿ ಗಾಯಗೊಂಡು ಚೇತರಿಸಿಕೊಂಡಿದ್ದರು. ಈ ಸಿನಿಮಾದ ಕ್ಲೈಮ್ಯಾಕ್ಸ್ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ವಿಶಾಲ್ ಕೈಗೆ ಗಾಯವಾಗಿದೆ. ಕೆಲ ದಿನಗಳ ವಿಶ್ರಾಂತಿಯ ನಂತರ ವಿಶಾಲ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಇತ್ತೀಚೆಗಷ್ಟೇ ಅಪರಿಚಿತ ವ್ಯಕ್ತಿಗಳು ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ರು.

  MORE
  GALLERIES