vishal: ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಬರೆದುಕೊಂಡ ವಿಶಾಲ್, ಅಪ್ಪನಿಗೆ ಕೊರೋನಾ ಪಾಸಿಟಿವ್ ಖಚಿತವಾಗಿದೆ. ಅವರೊಂದಿಗಿದ್ದ ನನಗೂ ಜ್ವರ, ನೆಗಡಿ, ಕೆಮ್ಮು ಶುರುವಾಗಿದೆ. ಆದೇ ರೀತಿ ನನ್ನ ಮ್ಯಾನೇಜರ್ಗೂ ಇದೆ ಸಮಸ್ಯೆ ಶುರುವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಆರಾಧ್ಯಾ ರೈ ಅವರಿಗೂ ಕೊರೋನಾ ಸೋಂಕು ತಗುಲಿತು. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2/ 10
ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ನಂತರ ಸೂಕ್ತ ಚಿಕಿತ್ಸೆ ಪಡೆದುಕೊಂಡು ಕೊರೋನಾದಿಂದ ಗುಣಮುಖರಾಗಿದ್ದಾರೆ.
3/ 10
ಇದೀಗ ಕಾಲಿವುಡ್ ಸಿನಿಮಾ ರಂಗದಲ್ಲೂ ಕೊರೋನಾ ಸೋಂಕು ಹಬ್ಬುತ್ತಿದ್ದೆ. ಖ್ಯಾತ ನಟ ಹಾಗೂ ಅವರ ತಂದೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
4/ 10
ಕಾಲಿವುಡ್ ನಟ ವಿಶಾಲ್ ಮತ್ತು ಜಿಕೆ ರೆಡ್ಡಿ ಅವರಿಗೂ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರಂತೆ.
5/ 10
ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಬರೆದುಕೊಂಡ ವಿಶಾಲ್, ಅಪ್ಪನಿಗೆ ಕೊರೋನಾ ಪಾಸಿಟಿವ್ ಖಚಿತವಾಗಿದೆ. ಅವರೊಂದಿಗಿದ್ದ ನನಗೂ ಜ್ವರ, ನೆಗಡಿ, ಕೆಮ್ಮು ಶುರುವಾಗಿದೆ. ಆದೇ ರೀತಿ ನನ್ನ ಮ್ಯಾನೇಜರ್ಗೂ ಇದೆ ಸಮಸ್ಯೆ ಶುರುವಾಗಿದೆ ಎಂದು ಹೇಳಿಕೊಂಡಿದ್ದಾರೆ.
6/ 10
ಕೊರೋನಾದಿಂದಾಗಿ ವಿಶಾಲ್ ಮನೆಯ ಉಳಿದ ಸದಸ್ಯರೆಲ್ಲರು ಕ್ವಾರಂಟೈನ್ನಲ್ಲಿದ್ದಾರೆ. ಅವರೆಲ್ಲರೂ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿದ್ದಾರೆ.
7/ 10
ಇತ್ತೀಚೆಗೆ ವಿಶಾಲ್ ಅವರ ಪ್ರೊಡಕ್ಷನ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅವರಿಗೆ 40 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಳು. ಈ ಬಗ್ಗೆ ವಿಶಾಲ್ ಫಿಲಂ ಫ್ಯಾಕ್ಟರಿಯ ಮ್ಯಾನೇಜರ್ ಪರೀಕ್ಷಿಸಿದಾಗ ಆಕೆ ಹಣ ದೋಚಿರುವ ವಿಚಾರ ಬೆಳಕಿಗೆ ಬಂದಿದೆ. ನಂತರ ಮ್ಯಾನೇಜರ್ ಹತ್ತಿರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
8/ 10
ಸಿನಿಮಾ ವಿಚಾರಕ್ಕೆ ಬಂದಾಗ ನಟ ವಿಶಾಲ್ ‘ಚಕ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಜೂನ್ 27 ರಂದು ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿತ್ತು.
9/ 10
ರಾಕಿಂಗ್ ಸ್ಟಾರ್ ಯಶ್ ಕನ್ನಡದಲ್ಲಿ ಚಕ್ರ ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ್ದರು. ವಿಶಾಲ್ ಈ ಸಿನಿಮಾದಲ್ಲಿ ಆರ್ಮಿ ಆಫೀಸರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
10/ 10
ಇದೊಂದು ಪಕ್ಕಾ ಆ್ಯಕ್ಷನ್ ಫಿಲಂ ಎನ್ನಲಾಗುತ್ತಿದೆ. ನವ ನಿರ್ದೇಶಕ ಆನಂದನ್ ಆಕ್ಷನ್ ಕಟ್ ನಲ್ಲಿ ಚಕ್ರ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ವಿಶಾಲ್ ಗೆ ನಾಯಕಿಯರಾಗಿ ರೆಜಿನಾ ಕಸ್ಸಂದ್ರ ಹಾಗೂ ಶ್ರದ್ದಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.