ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪವರ್ ಕಪಲ್. ಇಬ್ಬರೂ ಒಟ್ಟಿಗೆ ಬಂದಾಗಲೆಲ್ಲಾ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಮುಂಬೈನಲ್ಲಿ ನಡೆದ ಇಂಡಿಯನ್ ಸ್ಪೋರ್ಟ್ಸ್ ಆನರ್ ಅವಾರ್ಡ್-2023 ರಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರಾಟ್-ಅನುಷ್ಕಾ ಕೂಡ ಭಾಗವಹಿಸಿದ್ದು, ಈ ಪವರ್ ಜೋಡಿ ತಮ್ಮ ಸ್ಟೈಲ್ ನಿಂದ ಎಲ್ಲರ ಮನ ಗೆದ್ದಿದ್ದಾರೆ.
ಅನುಷ್ಕಾ ಶರ್ಮಾ ರೆಡ್ ಕಾರ್ಪೆಟ್ ಕಡೆಗೆ ನಡೆಯಲು ಪ್ರಾರಂಭಿಸಿದ ತಕ್ಷಣ, ಅವರ ಗೌನ್ ಅವರ ಚಪ್ಪಲಿಯಲ್ಲಿ ಸಿಲುಕಿಕೊಂಡಿತು. ಡ್ರೆಸ್ ನಿಂದಾಗಿ ಅನುಷ್ಕಾ ನಡೆಯಲು ಕೂಡ ತೊಂದರೆ ಅನುಭವಿಸುತ್ತಿದ್ದರು. ವಿರಾಟ್ ಅದನ್ನು ನೋಡಿದ ತಕ್ಷಣ, ಅವರು ಸ್ವಲ್ಪವೂ ಹಿಂಜರಿಯದೆ ತನ್ನ ಕೈಯಲ್ಲಿ ಅನುಷ್ಕಾಳ ಗೌನ್ ಅನ್ನು ಎತ್ತಿಕೊಂಡು ಅವರ ಹಿಂದೆ ರೆಡ್ ಕಾರ್ಪೆಟ್ ಕಡೆಗೆ ನಡೆಯಲು ಪ್ರಾರಂಭಿಸಿದರು.