Megha Shetty: ಪ್ರಿನ್ಸ್ ಮಹೇಶ್ ಬಾಬು 'ಜೊತೆ ಜೊತೆಯಲಿ' ನಟಿಸುತ್ತಾರಾ 'ಅನು ಸಿರಿಮನೆ'!? ಮೇಘಾಶೆಟ್ಟಿ ಫೋಟೋ ಫುಲ್ ವೈರಲ್

ಮೇಘಾ ಶೆಟ್ಟಿ ಅಂತ ಬೇಕಿದ್ರೆ ಕರೆಯಿರಿ.. ಅನು ಸಿರಿಮನೆ ಅಂತನಾದ್ರೂ ಬೇಕಿದ್ರೆ ಕರೆಯಿರಿ. ಈ ಎರಡೂ ಹೆಸರು ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರ ಪರಿಚಿತ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಾಯಕಿ ಅಂದರೆ ಅನು ಸಿರಿಮನೆ ಪಾತ್ರ ಮಾಡಿದವರು ಮೇಘಾ ಶೆಟ್ಟಿ. ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿಗೆ ಸಿನಿಮಾಗಳಿಂದಲೂ ಆಫರ್ ಬರುತ್ತಿವೆ. ಇದೀಗ ತೆಲುಗು ಸೂಪರ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಜೊತೆ ಜೊತೆಯಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳೀಗ ವೈರಲ್ ಆಗಿವೆ.

First published: