ಸ್ಯಾಂಡಲ್ವುಡ್ ಮರಿ ಟೈಗರ್ ವಿನೋದ್ ಪ್ರಭಾಕರ್ ಬಿಗ್ ಬ್ರೇಕ್ಗಾಗಿ ಸಕಲ ರೀತಿಯಲ್ಲೂ ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಗೆಳೆಯ ದರ್ಶನ್ ಜೊತೆ 2ನೇ ಬಾರಿ ರಾಬರ್ಟ್ನಲ್ಲಿ ತೆರೆ ಹಂಚಿಕೊಂಡಿದ್ದಾರೆ.
2/ 11
ಇದರ ಬೆನ್ನಲ್ಲೇ ಮತ್ತೆ ನಾಯಕ ನಟನಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈ ಹಿಂದೆ ಬಿಡುಗಡೆಯಾದ ಟೈಸನ್ ಬಳಿಕ ಮರಿ ಟೈಗರ್ ಯಾವುದೇ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಇದಕ್ಕೆ ಕಾರಣ ಅತ್ಯುತ್ತಮ ಕಥೆ ಸಿಗದಿರುವುದು.
3/ 11
ಇದೀಗ ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿಯವರು ನಿರ್ಮಿಸಲಿರುವ ಚಿತ್ರಕ್ಕೆ ವಿನೋದ್ ಪ್ರಭಾಕರ್ ಓಕೆ ಅಂದಿದ್ದಾರೆ.
4/ 11
'ಮೂರ್ಕಲ್ ಎಸ್ಟೇಟ್' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಮೋದ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಚಿತ್ರವು ಲವ್ ಕಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ ಎಂದು ತಿಳಿಸಲಾಗಿದೆ.
5/ 11
ಹಾಗೆಯೇ ಈ ಚಿತ್ರಕ್ಕಾಗಿ ಮತ್ತೊಮ್ಮೆ ಮಾಲಿವುಡ್ ಸುಂದರಿಯನ್ನು ಕನ್ನಡಕ್ಕೆ ಕರೆ ತರಲಿದ್ದಾರೆ ನಿರ್ಮಾಪಕರು. ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪಾರ್ವತಿ ಅರುಣ್ ಮರಿ ಟೈಗರ್ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
6/ 11
ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್ ಮತ್ತು ತಂಡ ಇನ್ನೂ ಹೆಸರಿಡದ ಈ ಚಿತ್ರದ ತಯಾರಿಯಲ್ಲಿದ್ದಾರೆ. ಹಾಗೆಯೇ ಲಾಕ್ಡೌನ್ ತೆರವಾದ ಬಳಿಕ ಫಸ್ಟ್ಲುಕ್ ಪೋಸ್ಟರ್ನೊಂದಿಗೆ ಚಿತ್ರದ ಮುಹೂರ್ತ ನಡೆಯಲಿದೆ ಎಂದು ಹೇಳಲಾಗಿದೆ.
7/ 11
ಒಟ್ಟಿನಲ್ಲಿ ಸ್ಯಾಂಡಲ್ವುಡ್ನ ರಗಡ್ ಹೀರೋಗೆ ಈ ಚಿತ್ರದ ಮೂಲಕ ಬಿಗ್ ಬ್ರೇಕ್ ಸಿಗಲಿದೆ ಎಂಬ ಮಾತುಗಳು ಈಗಾಗಲೇ ಗಾಂಧಿನಗರದಲ್ಲಿದೆ. ಅದು ವಿನೋದ್ ಪ್ರಭಾಕರ್ ವಿಚಾರದಲ್ಲಿ ನಿಜವಾಗಲಿ ಎಂದು ಆಶಿಸೋಣ.