ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದಲ್ಲಿ ಈ ಫೋಟೋದಲ್ಲಿ ನೀವು ನೋಡುತ್ತಿರುವ ನಟ ಕೂಡಾ ನಟಿಸಿದ್ದಾರೆ. ಇದು ಅವರ ಮದುವೆ ಫೋಟೋ. ಈ ನಟ ಯಾರು ಗೊತ್ತೇ?
2/ 9
ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ ನಟ ಇವರು. ಕನ್ನಡದ ಪ್ರಮುಖ ಸೈಡ್ ಆ್ಯಕ್ಟರ್ಸ್ಗಳಲ್ಲಿ ಇವರೂ ಒಬ್ಬರು.
3/ 9
ಕಾಂತಾರ ಸಿನಿಮಾದಲ್ಲಿ ಆರಂಭದಲ್ಲಿ ಕಂಡುಬರುವ ರಾಜನ ಪಾತ್ರ ನೆನಪಿದೆಯಾ? ಬಹಳ ತೇಜಸ್ಸು ತುಂಬಿರುವ ಮುಖ, ರಾಜಕಳೆ ಇದ್ದ ಆ ನಟನ ಪಾತ್ರ ಪ್ರೇಕ್ಷಕನ ಮನಸಲ್ಲಿ ಬೆಚ್ಚಗೆ ಕೂರುತ್ತದೆ.
4/ 9
ಮನಶಾಂತಿಗಾಗಿ ದೈವವನ್ನು ಮನೆಗೆ ತಂದು ಭೂಮಿಯನ್ನು ದಾನ ಮಾಡುವ ರಾಜನಾಗಿ ಕಾಣಿಸಿಕೊಂಡಿದ್ದು ಬೇರೆ ಯಾರೂ ಅಲ್ಲ, ನಟ ವಿನಯ್ ಬಿದ್ದಪ್ಪ.
5/ 9
ವಿನಯ್ ಬಿದ್ದಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆ.ಜಿ.ಎಫ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
6/ 9
ಸಿನಿಮಾದಲ್ಲಿ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದ ಅವರು ಥೇಟ್ ರಾಜನಂತೆಯೇ ಕಾಣಿಸಿದ್ದರು. ಚಿಕ್ಕ ಪಾತ್ರವನ್ನು ಚೊಕ್ಕದಾಗಿ ಮಾಡಿದ್ದರು ವಿನಯ್.
7/ 9
ಇದು ವಿನಯ್ ಬಿದ್ದಪ್ಪ ಅವರ ಕ್ಯೂಟ್ ಫ್ಯಾಮಿಲಿ. ಅವರ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.
8/ 9
ಮದುವೆಯಾಗಿ 10ನೇ ವಿವಾಹ ವಾರ್ಷಿಕೋತ್ಸವ ಸಂದರ್ಭ ನಟ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ ಇವರೇ ಕಾಂತಾರದ ನಟ ಎಂದು ನಂಬುವುದು ಕಷ್ಟ.
9/ 9
ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಹಲವಾರು ಸೈಡ್ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತಾರದಲ್ಲಿ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಬಂದಿದೆ.