Kichcha Sudeep: ಬಿಗ್ ಬಾಸ್ ಜತೆಗೆ ಸಿನಿಮಾ ಕೆಲಸದಲ್ಲೂ ಬ್ಯುಸಿಯಾದ ಕಿಚ್ಚ ಸುದೀಪ್..!
Vikrant Rona: ಒಂದು ಕಡೆ ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ನಿರೂಪಣೆ. ಮತ್ತೊಂದು ಕಡೆ ಸಿನಿಮಾ ಕೆಲಸಗಳು. ಹೌದು, ಕಿಚ್ಚ ಸುದೀಪ್ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ತಮ್ಮ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದಾರೆ. (ಚಿತ್ರಗಳು ಕೃಪೆ: ಕಿಚ್ಚ ಸುದೀಪ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ)
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ವಿಕ್ರಾಂತ್ ರೋಣ ಸಹ ಒಂದು.
2/ 10
ವಿಕ್ರಾಂತ್ ರೋಣ ಸಿನಿಮಾ ಕುರಿತಾಗಿ ಇತ್ತೀಚೆಗೆ ಸಾಕಷ್ಟು ಅಪ್ಡೇಟ್ ಸಿಗುತ್ತಿದೆ.
3/ 10
ಇತ್ತೀಚೆಗಷ್ಟೆ ಕೆಲ ಕಲಾವಿದರು ಈ ಸಿನಿಮಾದಲ್ಲಿನ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮುಗಿಸಿದ್ದಾರೆ.
4/ 10
ಈಗ ಕಿಚ್ಚ ಸುದೀಪ್ ಸಹ ತಮಮ ಪಾತ್ರಕ್ಕೆ ಡಬ್ಬಿಂಗ್ ಆರಂಭಿಸಿದ್ದಾರೆ.
5/ 10
ಬಹಳ ಸಮಯದ ನಂತರ ಸಿನಿಮಾಗೆ ಕಂಠದಾನ ಮಾಡುತ್ತಿದ್ದೇನೆ. ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಮಾಡುತ್ತಿದ್ದೇನೆ. ಸಿನಿಮಾ ಕೆಲಸಗಳು ಆರಂಭವಾಗಿರುವುದನ್ನು ನೋಡಲು ತುಂಬಾ ಖುಷಿಯಾಗುತ್ತಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
6/ 10
ಸುದೀಪ್ ಸದ್ಯ ಬಿಗ್ ಬಾಸ್ 8ರ ಸೆಕೆಂಡ್ ಇನ್ನಿಂಗ್ಸ್ನ ನಿರೂಪಣೆಯಲ್ಲೂ ಬ್ಯುಸಿಯಾಗಿದ್ದಾರೆ.
7/ 10
ವಿಕ್ರಾಂತ್ ರೋಣ ಸಿನಿಮಾಗಿಂತ ಮೊದಲು ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಬೇಕಿದೆ.
8/ 10
ಈಗಾಗಲೇ ಎರಡೂ ಸಿನಿಮಾಗಳ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
9/ 10
ಮೊದಲು ಕೋರಿಗೊಬ್ಬ 3 ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
10/ 10
ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆದ ನಂತರವೇ ವಿಕ್ರಾಂತ್ ರೋಣ ತೆರೆ ಕಾಣಲಿದೆಯಂತೆ.