ಕಾಂತಾರ ಸಿನಿಮಾ ಆಸ್ಕರ್ ಕ್ವಾಲಿಫಿಕೇಷನ್ಗಳನ್ನು ಪಾಸ್ ಮಾಡಿದ ಬೆನ್ನಲ್ಲೇ ಕನ್ನಡದ ಇನ್ನೊಂದು ಸಿನಿಮಾ ಲಿಸ್ಟ್ ಸೇರಿರುವ ವಿಚಾರ ರಿವೀಲ್ ಆಗಿದೆ.
2/ 7
ಅನೂಪ್ ಭಂಡಾರಿ ನಿರ್ದೇಶನದ ಕನ್ನಡ ಸಿನಿಮಾ ವಿಕ್ರಾಂತ್ ರೋಣ ಕೂಡಾ ಆಸ್ಕರ್ ಲಿಸ್ಟ್ ಸೇರಿಕೊಂಡಿದ್ದು ನಿರ್ದೇಶಕರು ಈ ಹ್ಯಾಪಿ ನ್ಯೂಸ್ ಶೇರ್ ಮಾಡಿದ್ದಾರೆ.
3/ 7
ನಿರ್ದೇಶಕರ ಅನೂಪ್ ಭಂಡಾರಿ ಈ ಕುರಿತು ಟ್ವೀಟ್ ಮಾಡಿದ್ದಾರೆ. 2016ರಲ್ಲಿ ರಂಗಿತರಂಗ ನಂತರ ವಿಕ್ರಾಂತ್ ರೋಣವನ್ನು ಆಸ್ಕರ್ ಲಿಸ್ಟ್ನಲ್ಲಿ ನೋಡಲು ಖುಷಿಯಾಗುತ್ತಿದೆ. ಕಾಂತಾರವನ್ನೂ ಲಿಸ್ಟ್ನಲ್ಲಿ ನೋಡಿ ಖುಷಿ ಆಯ್ತು. 2 ಕನ್ನಡ ಸಿನಿಮಾ, ತಂಡಕ್ಕೆ ಶುಭಾಶಯಗಳು ಎಂದು ಬರೆದಿದ್ದಾರೆ.
4/ 7
ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್, ಮಿಲನಾ ನಾಗರಾಜ್, ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ನಟಿಸಿದ್ದಾರೆ.
5/ 7
ರಂಗಿತರಂಗ ಸಿನಿಮಾದ ಪಾರ್ಟ್ 2 ನಂತೆ ಬಂದ ವಿಕ್ರಾಂತ್ ರೋಣ ಸಿನಿಮಾ ಕಥೆ ಬಹಳಷ್ಟು ಹೋಲಿಕೆ ಕಾಣುತ್ತಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿತ್ತು.
6/ 7
ಕಾಂತಾರ ಸೇರಿದಂತೆ ಟಾಪ್ ಸಿನಿಮಾಗಳು ಆಸ್ಕರ್ಗೆ ಅರ್ಜಿ ಸಲ್ಲಿಸಿದ್ದವು. ಇದೀಗ ಕನ್ನಡದ ಎರಡು ಸಿನಿಮಾ ಆಸ್ಕರ್ ಕ್ವಾಲಿಫಿಕೇಷನ್ ಪಾಸ್ ಮಾಡಿರುವುದು ಹೆಮ್ಮೆಯ ಸಂಗತಿ.
7/ 7
ಕಾಂತಾರ ಸಿನಿಮಾ ಕೂಡಾ ಕ್ವಾಲಿಫಿಕೇಷನ್ ಪಾಸ್ ಮಾಡಿದ್ದು ಹೊಂಬಾಳೆ ಫಿಲ್ಮ್ಸ್ ಈ ಗುಡ್ ನ್ಯೂಸ್ ಶೇರ್ ಮಾಡಿದೆ. ಅಂತೂ ಲಿಸ್ಟ್ ರಿಲೀಸ್ ಆಗಿ ಸ್ಯಾಂಡಲ್ವುಡ್ಗೆ ಪಾಸಿಟಿವ್ ನ್ಯೂಸ್ ಸಿಕ್ಕಿದೆ.