Varisu Movie: ವಿಜಯ್-ರಶ್ಮಿಕಾ ವಾರಿಸು ಚಿತ್ರದ OTT ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್! ಯಾರ ಪಾಲಾಯ್ತು ಸಿನಿಮಾ?
ವಿಜಯ್ ಅಭಿನಯದ ವಾರಿಸು ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆ ದಿನವೇ ವಾರಿಸು ಚಿತ್ರದ OTT ರೈಟ್ಸ್ ಯಾರು ಖರೀದಿಸಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ತಮಿಳಿನ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿನಯದ ವಾರಿಸು ಸಿನಿಮಾವನ್ನು ಟಾಲಿವುಡ್ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. ದಿಲ್ ರಾಜು ನಿರ್ಮಾಣ ಮಾಡಿದ್ದು, ಥಿಯೇಟರ್ಗಳಲ್ಲಿ ಭರ್ಜರಿ ಸದ್ದು ಮಾಡ್ತಿದೆ.
2/ 8
ಟಾಲಿವುಡ್ ಹಿರಿಯ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಶರತ್ ಕುಮಾರ್, ಜಯಸುಧಾ, ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ತೆಲುಗು ನಿರ್ಮಾಪಕ ದಿಲ್ ರಾಜು ಸುಮಾರು 200 ಕೋಟಿ ರೂಪಾಯಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
3/ 8
ತಮಿಳಿನಲ್ಲಿ ತೆರೆಕಂಡ ಈ ಸಿನಿಮಾ ಬಗ್ಗೆ ಹಿಟ್ ಟಾಕ್ ಜೋರಾಗಿದೆ. ವಿಜಯ್ ವಾರಿಸು ಚಿತ್ರ, ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದೆ. ಸಂಕ್ರಾತಿಗೆ ಬಂದ ವಾರಿಸು ಫ್ಯಾಮಿಲಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಲಿದೆ.
4/ 8
ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿರುವ ವಿಜಯ್ ಮೂವಿ OTT ರೈಟ್ಸ್ ಯಾರ ಪಾಲಾಗಿದೆ. ವಾರಿಸು ಸಿನಿಮಾ ಓಟಿಟಿ ರೈಟ್ಸ್ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಓಟಿ ರೈಟ್ಸ್ ಕೂಡ ಭಾರೀ ಬೆಲೆಗೆ ಸೇಲ್ ಆಗಿದೆ.
5/ 8
ವಾರಿಸು ಚಿತ್ರದ ಓಟಿಟಿ ರೈಟ್ಸ್ ನನ್ನು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ತಿಂಗಳ ನಂತರ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
6/ 8
ವಾರಿಸು ಚಿತ್ರದಲ್ಲಿ ಕಥೆ ವಿಷಯಕ್ಕೆ ಬಂದ್ರೆ ಮಗನಿಗೆ ಹೆಸರಿಡಲು ಇಚ್ಛಿಸದ ತಂದೆ. ತಂದೆಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಲು ಇಷ್ಟಪಡದ ಮಗ. ಇಬ್ಬರ ನಡುವಿನ ಅಹಂನೊಂದಿಗೆ ಕೌಟುಂಬಿಕ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ಸಿನಿಮಾ ಮೂಲಕ ಹೇಳಿದ್ದಾರೆ.
7/ 8
ವಿಜಯ್ ಅವರ 66 ನೇ ಚಿತ್ರವು ಪ್ರೇಕ್ಷಕರ ಮುಂದೆ ಬರುತ್ತಿದೆ ಮತ್ತು ಪಿವಿಪಿ ಬ್ಯಾನರ್ ಅಡಿಯಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ದಿಲ್ ರಾಜು ನಿರ್ಮಿಸಿದ್ದಾರೆ. ಸಿರೀಶ್, ಪರಮ್ ವಿ ಪೊಟ್ಲೂರಿ ಮತ್ತು ಪರ್ಲ್ ವಿ ಪೊಟ್ಲೂರಿ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ.
8/ 8
ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಮೂವಿಗೆ ವಿಜಯ್ ಅಭಿಮಾನಿಗಳು ಫಿದಾ ಆಗಿದ್ದಾರೆ.