ಕಾಲಿವುಡ್ ನಟ ವಿಜಯ್ ಸೇತುಪತಿ ಅವರು ತಮ್ಮ ತೂಕದಿಂದಾಗಿ ಭಾರೀ ಕಾಮೆಂಟ್ಗಳನ್ನು ಎದುರಿಸಿದ್ದರು. ನಟನೆಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುವ ಈ ನಟ ವೈಟ್ ಗೈನ್ನಿಂದಾಗಿ ಸ್ವಲ್ಪ ಸುದ್ದಿಯಾಗಿದ್ದರು.
2/ 7
ಆದರೆ ಈಗ ಅವರ ಹೊಸ ಫೋಟೋ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ನಟ ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಸ್ಪಷ್ಟವಾಗಿದೆ. ಅವರ ಫೋಟೋ ವೈರಲ್ ಆಗಿದ್ದು ಇಂಟ್ರೆಸ್ಟಿಂಗ್ ಕಾಮೆಂಟ್ಗಳನ್ನು ಪಡೆಯುತ್ತಿದೆ.
3/ 7
ನಟ ನಗುವ ಸೆಲ್ಫೀಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಟ ವೈಟ್ ಕಲರ್ ಡ್ರೆಸ್ ಧರಿಸಿದ್ದು ಮಿರರ್ ಸೆಲ್ಫೀ ಕ್ಲಿಕ್ ಮಾಡಿದ್ದಾರೆ. ಇದರಲ್ಲಿ ಅವರು ಮೊದಲಿಗಿಂತ ತೆಳ್ಳಗಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ನಟ ಇತ್ತೀಚೆಗೆ ತಮಿಳು ಸಿನಿಮಾ ಡಿಎಸ್ಪಿಯಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ನಟ ಅವರ ಎಂದಿನ ಲುಕ್ನಲ್ಲಿದ್ದರು.
4/ 7
ಆದರೆ ಅವರ ಈಗಿನ ಫೋಟೋದಲ್ಲಿ ಮಾತ್ರ ಅವರು ತೂಕ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಅಭಿಮಾನಿಗಳು ಪ್ರೇರಣಾದಾಯಾಕ, ನಂಬಲಸಾಧ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
5/ 7
ಇನ್ನೂ ಕೆಲವರು ಕಾಮೆಂಟ್ ಮಾಡಿ ಇದು ಕೇವಲ ಕ್ಯಾಮೆರಾ ಆ್ಯಂಗಲ್ ಬದಲಾವಣೆ ಅಷ್ಟೇ. ಇಷ್ಟು ಸ್ವಲ್ಪ ಅವಧಿಯಲ್ಲಿ ಅಷ್ಟು ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
6/ 7
2022ರಲ್ಲಿ ವಿಜಯ್ ಸೇತುಪತಿ ಅವರ 4 ಸಿನಿಮಾ ರಿಲೀಸ್ ಆಗಿದೆ. ವಿಕ್ರಮ್, ಮಾಮನಿದನ್, ಡಿಎಸ್ಪಿ, 19 ಸಿನಿಮಾಗಳು ರಿಲೀಸ್ ಆಗಿವೆ. ಸೂಪರ್ ಡಿಲಕ್ಸ್ನಲ್ಲಿ ತೃತೀಯಲಿಂಗಿ ವ್ಯಕ್ತಿಯ ಪಾತ್ರಕ್ಕಾಗಿ ನಟ ನ್ಯಾಷನಲ್ ಅವಾರ್ಡ್ ಪಡೆದಿದ್ದರು.
7/ 7
ವಿಜಯ್ ಸೇತುಪತಿ ಪುಷ್ಪ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ನಟ ಬಾಲಿವುಡ್ಗೂ ಎಂಟ್ರಿ ಕೊಡಲಿದ್ದು ಶಾಹಿದ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.