2019ರಲ್ಲಿ ಬಿಡುಗಡೆಯಾದ ಸೂಪರ್ ಡಿಲಕ್ಸ್ ಸಿನಿಮಾವನ್ನು ತ್ಯಾಗರಾಜನ್ ಕುಮಾರರಾಜ ನಿರ್ದೇಶಿಸಿದ್ದಾರೆ. 'ಸೂಪರ್ ಡಿಲಕ್ಸ್' ನಾಲ್ಕು ವ್ಯಕ್ತಿಗಳ ಜೀವನದ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಟ್ರಾನ್ಸ್ಜೆಂಡರ್ ಶಿಲ್ಪಾ ಪಾತ್ರವನ್ನು ನಿರ್ವಹಿಸಿದ್ದಾರೆ. ಲಿಂಗ-ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ತನ್ನ ಊರಿನಲ್ಲಿ ತೊಂದರೆಗಳನ್ನು ಎದುರಿಸುವ ಟ್ರಾನ್ಸ್ ಮ್ಯಾನ್ ಪಾತ್ರವನ್ನು ಅವರು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
ಪಿಜ್ಜಾ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ರಮ್ಯಾ ನಂಬೀಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸೇತುಪತಿ ತನ್ನ ಗೆಳತಿಯೊಂದಿಗೆ ವಾಸಿಸುವ ಪಿಜ್ಜಾ ಡೆಲಿವರಿ ಹುಡುಗನ ಪಾತ್ರವನ್ನು ನಿರ್ವಹಿಸಿದ್ದರು. ಒಂದು ದಿನ ತನ್ನ ಮಾಲೀಕ ಕೆಲವು ವಜ್ರಗಳನ್ನು ಬಚ್ಚಿಟ್ಟಿದ್ದಾನೆಂದು ತಿಳಿದಾಗ, ಅವನು ತನ್ನ ಗೆಳತಿಯೊಂದಿಗೆ ಅವುಗಳನ್ನು ಕದ್ದು ವಜ್ರವನ್ನು ಕಳೆದುಕೊಂಡ ಬಂಗಲೆಯ ಸುತ್ತ ಭಯಾನಕ ಕಥೆಯನ್ನು ಹೆಣೆದು ಪಾರಾಗುತ್ತಾರೆ.
`ನಾನುಮ್ ರೌಡಿ ಧಾನ್’ ಸಿನಿಮಾ 2015ರಲ್ಲಿ ಬಿಡುಗಡೆಯಾಗಿತ್ತು. ವಿಘ್ನೇಶ್ ಶಿವನ್ ನಿರ್ದೇಶಿಸಿದ ಈ ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಆರ್ಜೆ ಬಾಲಾಜಿ ನಟಿಸಿದ್ದಾರೆ. ಇದರಲ್ಲಿ ಸೇತುಪತಿ ಅವರು ಪೊಲೀಸ್ ಇನ್ಸ್ಪೆಕ್ಟರ್ ಮಗನಾಗಿದ್ದರೂ ಎಲ್ಲಾ ಅಕ್ರಮಗಳಲ್ಲಿ ಭಾಗಿಯಾಗಿರುವ ಪಾಂಡಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.
`ವಿಕ್ರಮ್ ವೇದ’ ಸಿನಿಮಾ 2017ರಲ್ಲಿ ಬಿಡುಗಡೆಯಾಗಿತು.ಈ ಸಿನಿಮಾವನ್ನು ಪುಷ್ಕರ್-ಗಾಯತ್ರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಾಧವನ್, ಶ್ರದ್ಧಾ ಶ್ರೀನಾಥ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿದ್ದರು. ವಿಜಯ್ ಸೇತುಪತಿ ವೇದಾ - ದರೋಡೆಕೋರನ ಪಾತ್ರವನ್ನು ನಿರ್ವಹಿಸಿದ್ದಾರೆ.ಈಗ ಹಿಂದಿಯಲ್ಲಿ ಹೃತಿಕ್ ರೋಷನ್ ಮುಖ್ಯ ಪಾತ್ರದಲ್ಲಿ ರಿಮೇಕ್ ಮಾಡಲಾಗುತ್ತಿದೆ.