ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರ ಅಭಿನಯದ ವಾರಿಸು ಸಿನಿಮಾ ರಿಲೀಸ್ ಆಗಿ ಸಕ್ಸಸ್ಫುಲ್ ಆಗಿ ರನ್ ಆಗುತ್ತಿದೆ.
2/ 8
ತಮಿಳು ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ತೆಲುಗು ರಾಜ್ಯಗಳಲ್ಲಿ ಮತ್ತು ಹಿಂದಿ ಬೆಲ್ಟ್ನಲ್ಲಿ ಭಾನುವಾರ ಸಖತ್ ಏರಿಕೆಯ ಕಲೆಕ್ಷನ್ ದಾಖಲಿಸಿದೆ.
3/ 8
Sacnilk ಪ್ರಕಾರ, ಚಿತ್ರ ರಿಲೀಸ್ ಆಗಿ ಮೊದಲ ಭಾನುವಾರದ ಕಲೆಕ್ಷನ್ಗಳ ಆರಂಭಿಕ ಅಂದಾಜು ಸುಮಾರು 18.50 ಕೋಟಿ ರೂಪಾಯಿಗಳಾಗಿದ್ದು, ಒಟ್ಟು ಮೊತ್ತವನ್ನು 85.25 ಕೋಟಿ ರೂಪಾಯಿ ದಾಟಿದೆ.
4/ 8
ವಿಜಯ್ ಅವರ ಚಿತ್ರವು ಭಾನುವಾರದಂದು ಒಟ್ಟಾರೆ 74.52% ತಮಿಳು ಆಕ್ಯುಪೆನ್ಸಿಯನ್ನು ಹೊಂದಿದೆ ಎಂದು ಹೇಳಲಾಗಿದ್ದು ಸಿನಿಮಾ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ.
5/ 8
ಹಿಂದಿ ವರ್ಷನ್ಗೂ ಒಳ್ಳೆಯ ಪ್ರತಿಕ್ರಿಯೆ ಲಭಿಸಿದೆ. ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದು, ವಾರಿಸು ಶುಕ್ರವಾರ 79 ಲಕ್ಷ, ಶನಿವಾರ 1.55 ಕೋಟಿ, ಭಾನುವಾರ 1.54 ಕೋಟಿ ಗಳಿಸಿದ್ದು ಒಟ್ಟು: ₹ 3.88 ಕೋಟಿಯಾಗಿದೆ.
6/ 8
ತೆಲುಗು ರಾಜ್ಯಗಳಲ್ಲಿ ಸಿನಿಮಾ ಸುಮಾರು 303 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಎರಡೂ ರಾಜ್ಯಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಹೇಳಲಾಗಿದೆ.
7/ 8
ಇಂಡಸ್ಟ್ರಿ ಟ್ರ್ಯಾಕರ್ ರಾಜಶೇಖರ್ ಟ್ವೀಟ್ ಮಾಡಿದ್ದಾರೆ. ಸೋಮವಾರ ಸಂಜೆ, ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಮೆಗಾ ಬ್ಲಾಕ್ ಬಸ್ಟರ್ ವಾರಿಸು ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದಿದ್ದಾರೆ.
8/ 8
ಈ ಸಿನಿಮಾದ ಟೋಟಲ್ ಬಜೆಟ್ ಸುಮಾರು 250 ಕೋಟಿಯಾಗಿದ್ದು ಲಾಭದ ಹಾದಿಯಲ್ಲಿ ಸಾಗಲು ಸಿನಿಮಾ ಇನ್ನೂ 100 ಕೋಟಿ ಗಳಿಸಿ ಮುನ್ನುಗ್ಗಬೇಕಾಗಿದೆ.