ವರಿಸು ಚಿತ್ರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ವಿಜಯ್ಗೆ ನಾಯಕಿಯಾಗಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
2/ 8
ವರಿಸು ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಮಾತಾಡಿದ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ್ ನನ್ನ ಕ್ರಶ್ ಎಂದಿದ್ದಾರೆ.
3/ 8
ವರಿಸು ಚಿತ್ರದಲ್ಲಿ ನಟಿಸುತ್ತಾರೆ ಎಂಬ ಘೋಷಣೆಯ ನಂತರ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಜಯ್ ನನ್ನ ನೆಚ್ಚಿನ ನಟ ಎಂದು ರಶ್ಮಿಕಾ ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ.
4/ 8
ವಿಜಯ್ ನನ್ನ ನೆಚ್ಚಿನ ನಟ, ಈಗ ನಾನು ಅವರ ಮುಂದೆ ಇಲ್ಲಿ ನಿಂತು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎನ್ನುದೇ ನನಗೆ ನಂಬಲು ಆಗುತ್ತಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
5/ 8
ನಾನು ನನ್ನ ಅಪ್ಪನ ಜೊತೆ ವಿಜಯ್ ಅಭಿನಯದ ಗಿಲ್ಲಿ ಸಿನಿಮಾ ನೋಡಿದೆ. ಇದೀಗ ಅವರ ಜೊತೆಯೇ ನಾನು ಸಿನಿಮಾ ಮಾಡಿದ್ದು ಖುಷಿಯಾಗಿದೆ ಎಂದ್ರು.
6/ 8
ಅವರ ಸಿನಿಮಾ ನೋಡಿದ ಬಳಿಕ ನಾನು ವಿಜಯ್ ಸಂದರ್ಶನ ನೋಡ್ತಿದ್ದೆ. ಅವರಂತೆ ಕುಣಿಯುತ್ತಿದ್ದೆ ಮತ್ತು ಅನುಕರಣೆ ಮಾಡುತ್ತಿದ್ದೆ ಎಂದು ರಶ್ಮಿಕಾ ಹೇಳಿದ್ದಾರೆ.
7/ 8
[caption id="attachment_919603" align="alignnone" width="600"] ನಾನು ವಿಜಯ್ ಅವರ ಅಭಿಮಾನಿ ಎಂದ ನಟಿ ರಶ್ಮಿಕಾ, ನಿಮ್ಮ ನೆಚ್ಚಿನ ನಟ ಯಾರು? ನಿಮ್ಮ ಕ್ರಶ್ ಯಾರೆಂದು ಕೇಳಿದರೆ ನಾನು ಹೇಳುವ ಹೆಸರು ವಿಜಯ್ ಎಂದು ರಶ್ಮಿಕಾ ಹೇಳಿದ್ದಾರೆ.
[/caption]
8/ 8
ರಂಜಿತಮೆ ಹಾಡು ಬಿಡುಗಡೆಯಾಗಿ ಭಾರೀ ಹಿಟ್ ಆಗಿದ್ದು, ವಿಜಯ್-ರಶ್ಮಿಕಾ ಡ್ಯಾನ್ಸ್ ಹೇಗಿರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.