Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

ಟಾಲಿವುಡ್​ನ ಸ್ಮಾರ್ಟ್ ಬಾಯ್ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನಿಗೆ ಸಿನಿಮಾ ಇಂಡಸ್ಟ್ರಿಯ ನಟ-ನಟಿಯರು, ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ. ವಿಜಯ್ ದೇವರಕೊಂಡ ಲೈಫ್​ನಲ್ಲಿ ಒಮ್ಮೆ ಕೂಡ ಲವ್ ಯೂ ಟೂ ಹೇಳಿಲ್ವಂತೆ. ಯಾಕೆ ಗೊತ್ತಾ?

First published:

 • 19

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ಟಾಲಿವುಡ್​ನ ಬಹುಬೇಡಿಕೆಯ ನಟ ವಿಜಯ್ ದೇವರಕೊಂಡಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ತನ್ನ ಹ್ಯಾಂಡ್​ಸಮ್ ಲುಕ್​ನಿಂದಲೇ ವಿಜಯ್ ಸಾವಿರಾರು ಹುಡುಗಿಯರ ಮನ ಕದ್ದಿದ್ದಾರೆ. ವಿಜಯ್ ದೇವರಕೊಂಡ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

  MORE
  GALLERIES

 • 29

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  34 ವರ್ಷ ವಯಸ್ಸಾಗಿದ್ದರೂ ವಿಜಯ್ ಯಾಕೆ ಮದುವೆ ಬಗ್ಗೆ ಮನಸ್ಸು ಮಾಡ್ತಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದ್ರೆ ನಟ ದೇವರಕೊಂಡ ಮಾತ್ರ ನಾನು ಇನ್ನೂ ಮದುವೆ ಅಥವಾ ಭವಿಷ್ಯದ ಹೆಂಡತಿ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ.

  MORE
  GALLERIES

 • 39

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ಗೀತಾ ಗೋವಿಂದಂ ಸಿನಿಮಾ ಮಾಡಿದ ಬಳಿಕ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಖತ್ ಕ್ಲೋಸ್ ಆಗಿದ್ದಾರೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ.

  MORE
  GALLERIES

 • 49

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ಜಿಕ್ಯೂ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ತನ್ನ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಪ್ರೀತಿ, ಪ್ರೇಮದ ಬಗ್ಗೆ ತನಗಿರುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯೆಲ್ಲಾ ಬೂಟಾಟಿಕೆ ಎಂದ ವಿಜಯ್, ಎಲ್ಲಾವೂ ಹಣದ ಮೇಲೆ ನಿಂತಿದೆ ಎಂದಿದ್ದಾರೆ.

  MORE
  GALLERIES

 • 59

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ತಮ್ಮ ಲವ್ ಲೈಫ್ ಬಗ್ಗೆ ಮಾತಾಡಿದ ವಿಜಯ್ ದೇವರಕೊಂಡ, ಇದುವರೆಗೂ ನಾನು ಯಾರಿಗೂ ‘ಐ ಲವ್ ಯೂ ಟೂ’ ಎಂದು ಹೇಳಿಲ್ಲ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ವಿಜಯ್ ಸಂದರ್ಶನದಲ್ಲಿ ವಿವರಿಸಿದ್ದಾರೆ.

  MORE
  GALLERIES

 • 69

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ನನಗೆ ಲವ್ ಸ್ಟೋರಿಗಳಲ್ಲೂ ನಂಬಿಕೆ ಇದೆ. ಆದ್ರೆ ಪ್ರೀತಿಯಲ್ಲಿ ಬೀಳಲು ಭಯವಾಗುತ್ತೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಪ್ರೀತಿಯ ಬಗ್ಗೆ ತಂದೆಯ ಸಲಹೆಯನ್ನು ಪಾಲಿಸಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರೀತಿಯೇ ಜಗತ್ತಿನ ಅತಿ ದೊಡ್ಡ ಬೂಟಾಟಿಕೆ ಮತ್ತು ಹಣವೇ ಜಗತ್ತಿನ ಕೇಂದ್ರ ಎಂದು ನನ್ನ ತಂದೆ ಹೇಳಿದ್ದರು ಎಂದು ವಿಜಯ್ ತಿಳಿಸಿದ್ದಾರೆ.

  MORE
  GALLERIES

 • 79

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ತಂದೆಯ ಮಾತು ಆಳವಾಗಿ ಬೇರೂರಿತ್ತು. ಬೆಳೆಯುತ್ತಿರುವ ಸಂಬಂಧಗಳಲ್ಲಿ ನಂಬಿಕೆ ಇರಲಿಲ್ಲ. ತನ್ನ ಬಳಿಗೆ ಬಂದವರೆಲ್ಲರೂ ಆಸೆಯಿಂದ ಬಂದವರು ಎಂದು ನಂಬಲು ಪ್ರಾರಂಭಿಸಿದೆ ಎಂದು ನಟ ಹೇಳಿದ್ದಾರೆ.

  MORE
  GALLERIES

 • 89

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ನನ್ನನ್ನು ಯಾರಾದ್ರೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿದವರಿಗೆ ನಾನು ಕೂಡ ನಿನ್ನನ್ನು ಪ್ರೀತಿಸುತ್ತೇನೆ ಎಂದು ಎಂದಿಗೂ ಹೇಳಿಲ್ಲ. ಇಂದಿಗೂ ಅದು ಸ್ವಭಾವದಲ್ಲೇ ಬಂದಿಲ್ಲ  ಎಂದು ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.

  MORE
  GALLERIES

 • 99

  Vijay Deverakonda: ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದಾರೆ ವಿಜಯ್ ದೇವರಕೊಂಡ! ಎಲ್ಲವೂ ಹಣದ ಮೇಲಿದೆ ಎಂದಿದ್ಯಾಕೆ ನಟ?

  ಸಿನಿಮಾ ಇಂಡಸ್ಟಿಗೆ ಕಾಲಿಟ್ಟ ಬಳಿಕ ತನ್ನ ದೃಷ್ಟಿಕೋನ ಬದಲಾಯಿತು ಎಂದೂ ವಿಜಯ್ ಹೇಳಿದ್ದಾರೆ. ನಟ ವಿಜಯ್ ಕೆಲ ವರ್ಷಗಳಿಂದ ಓರ್ವ ಹುಡುಗಿಯೊಂದಿಗೆ ಸಖತ್ ಕ್ಲೋಸ್ ಆಗಿದ್ದಾರೆ. ಆ ಹುಡುಗಿ ಯಾರೆಂಬುದನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ.

  MORE
  GALLERIES