ಅವರು ಅರ್ಜುನ್ ರೆಡ್ಡಿ ಎಂಬ ಅಪ್ರತಿಮ ಪಾತ್ರದಲ್ಲಿ ತಮ್ಮ ಛಾಪನ್ನು ಬಿಟ್ಟರು. ಮದ್ಯದ ಅಮಲಿನಲ್ಲಿ ಕೆಲಸ ಮಾಡುವ ಯಂಗ್ ಸರ್ಜನ್ ತನ್ನ ಗೆಳತಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಳೆಂದು ತಿಳಿದಾಗ ಮಾನಸಿಕವಾಗಿ ಕುಗ್ಗುತ್ತಾನೆ. ಚಿತ್ರವು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯಿತು. ವಿಜಯ್ ಅವರಿಗೆ ಅತ್ಯುತ್ತಮ ನಟನಿಗಾಗಿ ಅವರ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿದೆ ಈ ಸಿನಿಮಾ.
ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ಅಭಿನಯದ 'ಪೆಲ್ಲಿ ಚೂಪುಲು' ಈ ದಶಕದ ಅತ್ಯುತ್ತಮ ತೆಲುಗು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಹಿಟ್ ಆಗಿತ್ತು. ಎಲ್ಲಾ ಕಡೆಯಿಂದ ತಾರೆಯರು ಹೆಚ್ಚು ಮೆಚ್ಚುಗೆ ಗಳಿಸಿದರು. ಚಲನಚಿತ್ರವು ವಿಮರ್ಶಕರಿಂದ ಪಾಸಿಟಿವ್ ವಿಮರ್ಶೆ ಪಡೆಯಿತು. 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ತೆಲುಗು ಚಲನಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು.