ರಜನಿಕಾಂತ್ ಹಿಂದಿಕ್ಕಿ ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ ಈ ಸ್ಟಾರ್ ನಟ!
‘ತಲೈವಾ‘, ‘ಕಬಾಲಿ‘, ‘ಪೆಟಾ‘ ಸಿನಿಮಾಗಳಿಗೆ ರಜನಿಕಾಂತ್ ಹೆಚ್ಚು ಸಂಭಾವನೆಯನ್ನು ಪಡೆದುಕೊಂಡಿದ್ದರು. ಅದರಂತೆ ಸದ್ಯ ನಟಿಸುತ್ತಿರುವ ‘ದರ್ಬಾರ್‘ ಸಿನಿಮಾಗೂ 90 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಚ್ಚರಿ ಸಂಗತಿ ಏನೆಂದರೆ ನಟ ರಜನಿಕಾಂತ್ ಅವರನ್ನು ಮೀರಿ ತಮಿಳಿನ ನಟರೊಬ್ಬರು ಸಿನಿಮಾವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಯಾರು ಗೊತ್ತಾ ಆ ನಟ?
ಸೂಪರ್ ಸ್ಟಾರ್ ರಜನಿಕಾಂತ್ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎಂದು ಹೇಳಲಾಗುತ್ತಿತ್ತು.
2/ 9
ತಲೈವಾ, ಕಬಾಲಿ, ಪೆಟಾ ಸಿನಿಮಾಗಳಿಗೆ ರಜನಿಕಾಂತ್ ಹೆಚ್ಚು ಸಂಭಾವನೆಯನ್ನು ಪಡೆದುಕೊಂಡಿದ್ದರು. ಅದರಂತೆ ಸದ್ಯ ನಟಿಸುತ್ತಿರುವ ದರ್ಬಾರ್ ಸಿನಿಮಾಗೂ 90 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
3/ 9
ಆದರೆ ಅಚ್ಚರಿ ಸಂಗತಿ ಏನೆಂದರೆ ನಟ ರಜನಿಕಾಂತ್ ಅವರನ್ನು ಮೀರಿ ತಮಿಳಿನ ನಟರೊಬ್ಬರು ಸಿನಿಮಾವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಯಾರು ಗೊತ್ತಾ ಆ ನಟ?
4/ 9
ತಮಿಳಿನ ಇಳಯದಳಪತಿ ವಿಜಯ್ ಅವರು ಸಿನಿಮಾವೊಂದಕ್ಕೆ ರಜನಿಕಾಂತ್ಗಿಂತ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ ಹೇಳಲಾಗುತ್ತಿದೆ. ಸದ್ಯ ನಟ ವಿಜಯ್ ‘ಮಾಸ್ಟರ್‘ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಮುಂದಿನ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಪ್ರಾರಂಭಕ್ಕೂ ಮುನ್ನ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
5/ 9
ವಿಜಯ್ ಸಹಿ ಮಾಡಿರುವ ಮುಂದಿನ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸಿನಿಮಾಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗುತ್ತಿದೆ.
6/ 9
ಈಗಾಗಲೇ ನಟ ವಿಜಯ್ಗೆ ಸನ್ ಪಿಕ್ಚರ್ಸ್ 50 ಕೋಟಿ. ರೂ ಮುಂಗಡ ನೀಡಿದೆಯಂತೆ. ‘ಅಸುರನ್‘ ಖ್ಯಾತಿಯ ವೆಟ್ರಿಮಾರನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
7/ 9
‘ಬಿಗಿಲ್‘ ಚಿತ್ರ ಸಕ್ಸಸ್ಗೊಂಡ ನಂತರ ನಟ ವಿಜಯ್ ಸಂಭಾವನೆಯನ್ನು ಹೆಚ್ಚಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ
8/ 9
ನಟ ವಿಜಯ್ ‘ಮಾಸ್ಟರ್‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆಗೊಂಡಿತ್ತು. ಮಾತ್ರವಲ್ಲದೆ , ವಿಜಯ್ ಅವರ ಮಾಸ್ಟರ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.
9/ 9
‘ಮಾಸ್ಟರ್‘ ಸಿನಿಮಾದಲ್ಲಿ ನಟ ವಿಜಯ್ ಜೊತೆಗೆ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಶಿವಮೊಗ್ಗ ಜೈಲಿನಲ್ಲಿ ಮಾಸ್ಟರ್ ಚಿತ್ರದ ಶೂಟಿಂಗ್ಗಾಗಿ ಬೀಡುಬಿಟ್ಟಿತ್ತು.