Vijay-Rashmika Mandanna: 'ವಾರಿಸು' ವಿಜಯೋತ್ಸವ, 250 ಕೋಟಿ ಕಲೆಕ್ಷನ್! ನಿರ್ಮಾಪಕ ಫುಲ್ ಖುಷ್
ನಟ ವಿಜಯ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ನಿರ್ಮಾಪಕರೇ ಮಾಹಿತಿ ನೀಡಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ವಿಜಯ್ ಫ್ಯಾನ್ಸ್ಗೆ ಉಡುಗೊರೆಯಾಗಿ ರಿಲೀಸ್ ಆದ ವಾರಿಸು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದೆ. ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ.
2/ 8
11 ದಿನಗಳಲ್ಲಿಯೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರದ ನಿರ್ಮಾಪಕರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
3/ 8
ವಂಶಿ ಪೈಡಿಪಲ್ಲಿ ನಿರ್ದೇಶನದ ವಾರಿಸು ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸಿದ್ದಾರೆ.
4/ 8
ಚಿತ್ರದಲ್ಲಿ ಜಯಸುಧಾ, ಶಾಮ್, ಶ್ರೀಕಾಂತ್, ಸಂಯುಕ್ತ, ಸಂಗೀತ, ಪ್ರಕಾಶ್ ರಾಜ್, ಯೋಗಿ ಬಾಬು, ಮತ್ತು ವಿಟಿವಿ ಗಣೇಶ್ ಮುಂತಾದವರು ನಟಿಸಿದ್ದಾರೆ. ವಂಶಿ ಮತ್ತು ವಿಜಯ್ ಜೋಡಿ ತೆರೆ ಮೇಲೆ ಮೋಡಿ ಮಾಡಿದೆ.
5/ 8
ವಾರಿಸು ಸಿನಿಮಾ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ಸಿನಿಮಾದಲ್ಲಿ ಉದ್ಯಮಿ ಶರತ್ ಕುಮಾರ್ ಮತ್ತು ಅವರ ಮೂವರು ಪುತ್ರರ ಸುತ್ತ ಕಥೆಯನ್ನು ಎಣೆಯಲಾಗಿದೆ.
6/ 8
ವಿಜಯ್ ಕಿರಿಯ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಒಬ್ಬ ಉದ್ಯಮಿಯಾಗಿ ಕಾಣಿಸಿಕೊಂಡಿದ್ದು, ಕುಟುಂಬ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರುತ್ತಾರೆ.
7/ 8
ವಾರಿಸು ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಆಗಿಯೇ ಸದ್ದು ಮಾಡಿದೆ.
8/ 8
ಈ ಚಿತ್ರವು ತೆಲುಗಿನಲ್ಲಿ ವಾರಸಡು ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಸಂಗೀತವನ್ನು ಥಮನ್ ಸಂಯೋಜಿಸಿದ್ದು, ಹಾಡುಗಳು ಸೂಪರ್ ಹಿಟ್ ಆಗಿದೆ.
First published:
18