ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಸೌತ್ ಸಿನಿ ಇಂಡಸ್ಟ್ರಿಯ ಸೂಪರ್ ಕ್ಯೂಟ್ ಜೋಡಿಯಾಗಿದೆ. 6 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಇಬ್ಬರೂ ಮದುವೆಯಾಗಿದ್ದರು. ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಘ್ನೇಶ್ ತಮ್ಮ ಲವ್ ಲೈಫ್ ಮತ್ತು ನಯನತಾರಾ ಜೊತೆಗಿನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನ್ ಮತ್ತು ರೌಡಿ ಧಾನ್ ಸೆಟ್ಗಳಲ್ಲಿ ನಡೆದ ಘಟನೆಗಳ ಬಗ್ಗೆ ವಿಘ್ನೇಶ್ ಮಾತಾಡಿದ್ದಾರೆ.
'ಸೆಟ್ನಲ್ಲಿ ನಾವು ರೊಮ್ಯಾನ್ಸ್ ಮಾಡಿಲ್ಲ. ಕೆಲ ತುಂಬಾ ವೃತ್ತಿಪರವಾಗಿತ್ತು. ಸೆಟ್ನಲ್ಲಿದ್ದ ನನ್ನ ಕೆಲವು ಗೆಳೆಯರಿಗೆ ಇದು ಗೊತ್ತಿತ್ತು. ಆಗ ನಾನು ಯಾವತ್ತು ನಯನತಾರಾ ಕ್ಯಾರವಾನ್ ಹತ್ತಿರಲಿಲ್ಲ. ಚಿತ್ರದ 2ನೇ ಶೆಡ್ಯೂಲ್ ಸಮಯದಲ್ಲಿ ಅವರ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ರಿಲೇಷನ್ ಶಿಪ್ ಬಳಿಕವೂ ನಾನು ಅವರನ್ನು ಸೆಟ್ನಲ್ಲಿ ಮೇಡಂ ಅಂತಾನೆ ಕರೆಯುತ್ತಿದೆ ಎಂದು ಹೇಳಿದ್ದಾರೆ.