Vidyut Jammwal: ಚಿಲ್ಲಿಂಗ್ ಮೂಡ್ನಲ್ಲಿ ಆ್ಯಕ್ಷನ್ ಕಿಂಗ್ ವಿದ್ಯುತ್ ಜಮ್ವಾಲ್: ಇಲ್ಲಿವೆ ಚಿತ್ರಗಳು..! Vidyut Jammwal: ವಿದ್ಯುತ್ ಜಮ್ವಾಲ್ ಸದಾ ಆ್ಯಕ್ಷನ್ ಮೂಡ್ನಲ್ಲೇ ಇರುತ್ತಾರೆ. ಅವರು ಚಿಲ್ ಮಾಡ್ತಾರೆ ಅಂದ್ರೆ, ಅದರಲ್ಲೂ ಏನಾದರೂ ಒಂದು ಟ್ವಿಸ್ಟ್ ಇದ್ದೇ ಇರುತ್ತದೆ. ಆದರೆ ಈ ಸಲ ಅವರು ನಿಜವಾಗಿಯೂ ಸಖತ್ ರಿಲ್ಯಾಕ್ಸ್ ಆಗಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ವಿದ್ಯುತ್ ಜಮ್ವಾಲ್ ಇನ್ಸ್ಟಾಗ್ರಾಂ ಖಾತೆ)
1 / 17
ಎದೆ ಜಿಲ್ ಎನ್ನುವಂತಹ ಆ್ಯಕ್ಷನ್ಗಳನ್ನು ತಾವೇ ಮಾಡುವ ನಟ ವಿದ್ಯುತ್ ಜಮ್ವಾಲ್. ಅದಕ್ಕೆ ಅವರ ಸಿನಿಮಾಗಳಲ್ಲಿ ಆ್ಯಕ್ಷನ್ ಪ್ರಿಯರಿಗೆ ಭರಪೂರ ಮನರಂಜನೆ ಸಿಗುತ್ತದೆ.
2 / 17
ಸಾಮಾಜಿಕ ಜಾಲತಾಣದಲ್ಲೂ ಸದಾ ತಮ್ಮ ಹೊಸ ಹೊಸ ಆ್ಯಕ್ಷನ್ ವಿಡಿಯೋಗಳನ್ನೇ ಹಂಚಿಕೊಳ್ಳುತ್ತಿರುತ್ತಾರೆ ವಿದ್ಯುತ್.
3 / 17
ಕಮಾಂಡೋ ಸರಣಿ ಹಾಗೂ ಜಂಗ್ಲಿ ಚಿತ್ರದಲ್ಲಿ ಆ್ಯಕ್ಷನ್ನಿಂದಲೇ ಹೆಸರು ಮಾಡಿರುವ ವಿದ್ಯುತ್ ಈಗ ಕೊಂಚ ರಿಲ್ಯಾಕ್ಸ್ ಆದಂತಿದೆ.
4 / 17
ತಮ್ಮ ಮುದ್ದಿನ ಸಾಕು ನಾಯಿ ಡಾಲಿ ಜೊತೆ ಸ್ಪಾ ಡೇ ಎಂಜಾಯ್ ಮಾಡಿದ್ದಾರೆ.
5 / 17
ಅದರ ಕೆಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6 / 17
ಮಾರ್ಷಿಯಲ್ ಆರ್ಟ್ಸ್ ಜೊತೆಗೆ ಆಗಾಗ ಟ್ರೆಕ್ಕಿಂಗ್ ಮಾಡುವ ನಟ ರಿಲ್ಯಾಕ್ಸ್ ಆಗೋದು ತಮ್ಮ ನಾಯಿ ಜೊತೆ ಮಾತ್ರವಂತೆ.
7 / 17
ಆ್ಯಕ್ಷನ್ ಕಿಂಗ್ ಜಮ್ವಾಲ್ ಅವರು ಪ್ರಾಣಿ ಪ್ರಿಯ.
8 / 17
ಸಮಯ ಸಿಕ್ಕಾಗ ತಮ್ಮ ತೋಟದ ಮನೆಗೆ ಹೋಗಿ ಅಲ್ಲಿ ಹಸುಗಳ ಆರೈಕೆಯಲ್ಲಿ ತೊಡಗಿರುತ್ತಾರೆ.
9 / 17
ಜಮ್ವಾಲ್ ಅಭಿನಯದ ಮೂರು ಸಿನಿಮಾಗಳು ರಿಲೀಸ್ ಹಂತದಲ್ಲಿವೆ.
10 / 17
ಜಮ್ವಾಲ್ ಅಭಿನಯದ ಯಾರಾ ಹಾಗೂ ಖುದಾ ಆಫಿಸ್ ಒಟಿಟಿ ಮೂಲಕ ರಿಲೀಸ್ ಆಗಲು ಸಜ್ಜಾಗಿವೆ.
11 / 17
ಯಾರಾ ಸಿನಿಮಾದಲ್ಲಿ ಗ್ಯಾಂಗ್ಸ್ಟರ್ ಆಗಿ ನಟಿಸಿದ್ದು, ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ.
First published: July 18, 2020, 19:54 IST