Cinema Hall: ಪ್ರೇಕ್ಷಕರಿಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ಸಿನಿಮಾ ಹಾಲ್ ಮಾಲೀಕರಿಗೆ ಸಿಕ್ತು ಜಯ!
ಮಾಲ್, ಮಲ್ಟಿಫ್ಲೆಕ್ಸ್ ಸಿನಿಮಾ ಹಾಲ್ ಗಳಲ್ಲಿ ಸಿನಿಮಾ ನೋಡೋದೆ ಇತ್ತೀಚಿನ ಟ್ರೆಂಡ್ ಆಗಿದೆ. ಇಲ್ಲಿ ಟಿಕೆಟ್ ಕೊಂಚ ದುಬಾರಿನೇ ಆದ್ರೆ ಅದಕ್ಕಿಂತ ದುಬಾರಿ ಅಂದ್ರೆ ಅಲ್ಲಿ ಸಿಗುವ ಸ್ನ್ಯಾಕ್ಸ್. ಇದೀಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದ ಈ ವಿಚಾರದಲ್ಲಿ ಸಿನಿಮಾ ಹಾಲ್ ಮಾಲೀಕರಿಗೆ ಜಯ ಸಿಕ್ಕಿದೆ.
ಸಿನಿಮಾ ವಿರಾಮದ ವೇಳೆ ತಿನ್ನಲು ಪಾಪ್ ಕಾರ್ನ್ ಬೆಲೆ ಕೇಳಿದ್ರೆ ಟಿಕೆಟ್ ಗಿಂತ ಕಾಸ್ಲಿ ಆಗಿರುತ್ತೆ. ಸಿನಿಮಾ ಹಾಲ್ ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆ ವಿಚಾರ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರವಾಗಿದೆ.
2/ 8
ಸಿನಿಮಾ ಹಾಲ್ ನಲ್ಲಿ ಬೆಲೆ ಜಾಸ್ತಿ ಎಂದು ಹೊರಗಡೆಯಿಂದ ಫುಡ್ ತೆಗೆದುಕೊಂಡು ಹೋದ್ರೆ ಒಳಗೆ ಎಂಟ್ರಿ ಇರೋದಿಲ್ಲ. ಹೊರಗೆ ಫುಡ್ ಇಟ್ಟು ಒಳಗೆ ಹೋಗಬೇಕು ಈ ವಿಚಾರಕ್ಕೆ ಅನೇಕರು ಸಿನಿಮಾ ಹಾಲ್ ಗಳ ವಿರುದ್ಧ ಕಿಡಿಕಾರಿದ್ರು.
3/ 8
ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಿನಿಮಾ ಹಾಲ್ ಮಾಲೀಕರ ಪರವಾಗಿಯೇ ತೀರ್ಪು ನೀಡಿದ್ದಾರೆ.
4/ 8
ಸಿನಿಮಾ ಹಾಲ್ ಗೆ ಬರುವ ಪ್ರೇಕ್ಷಕರು ಒಳಗೆ ತಿಂಡಿ, ಪಾನೀಯಗಳನ್ನು ಕೊಂಡೊಯ್ಯುವುದನ್ನು ತಡೆಯುವ ಹಕ್ಕು ಸಿನಿಮಾ ಹಾಲ್ ಮಾಲೀಕರಿಗಿದೆ ಎಂದು ಹೇಳಿದೆ.
5/ 8
ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನಿಂದ ಸಿನಿಮಾ ಹಾಲ್ಗಳಿಗೆ ದೊಡ್ಡ ಗೆಲುವಾಗಿದೆ. ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಎಸ್ಸಿ ಪೀಠವು ಸಿನಿಮಾ ಹಾಲ್ಗಳು ಮಾಲೀಕರ ಖಾಸಗಿ ಆಸ್ತಿ ಎಂದು ಹೇಳಿದೆ
6/ 8
ಸಿನಿಮಾ ಹಾಲ್ ಮಾಲೀಕರ ಖಾಸಗಿ ಆಸ್ತಿಯಾಗಿದೆ. ಹೀಗಾಗಿ ಅವರು ನಿಯಮಗಳನ್ನು ರೂಪಿಸಲು ಅರ್ಹರಾಗಿದ್ದಾರೆ.
7/ 8
ತಿಂಡಿ-ಕೂಲ್ ಡಿಂಕ್ಸ್ ಗಳನ್ನು ಮಾರುವ ಸ್ವಾತಂತ್ರ್ಯ ಅವರಿಗೆ ಇದೆ. ಅದನ್ನು ಖರೀದಿಸೋದು ಅಥವಾ ಖರೀದಿಸದಿರುವ ಆಯ್ಕೆ ಪ್ರೇಕ್ಷಕರಿಗೂ ಇದೆ ಎಂದು ನ್ಯಾಯಾಲಯ ತಿಳಿಸಿದೆ.
8/ 8
ಸಿನಿಮಾ ಹಾಲ್ ಗಳಲ್ಲಿ ಹೊರಗಿನ ಫುಡ್ ಗೆ ಅನುಮತಿ ನೀಡುವಂತೆ ಅನೇಕ ಬಾರಿ ಪ್ರೇಕ್ಷಕರು ಮನವಿ ಮಾಡಿದ್ರು.