800 ವರ್ಷ ಹಳೆಯ ಕೋಟೆಯಲ್ಲಿ ನಡೆಯಲಿದೆ Vicky Kaushal-Katrina Kaif ವಿವಾಹ

ಬಾಲಿವುಡ್​ನ ಸ್ಟಾರ್​ ಜೋಡಿ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ (Vicky Kaushal-Katrina Kaif Wedding) ಅವರ ಮದುವೆ ಸುದ್ದಿ ತುಂಬಾ ಜೋರಾಗಿ ಚರ್ಚೆಯಾಗುತ್ತಿದೆ. ಈ ಜೋಡಿಯ ಮದುವೆಯ ರಾಜಸ್ತಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ಸಿಕ್ಸ್​ ಸೆನ್ಸ್​ ಬಾರ್ವಾರ ಫೋರ್ಟ್​ ಹೋಟೆಲ್​ನಲ್ಲಿ (Six Senses Fort Barwara Hotel) ನಡೆಯಲಿದೆ. ಚೌತ್​ ಕ ಬಾರ್ವಾರದಲ್ಲಿರುವ (Chauth Ka Barwara) 14ನೇ ಶತಮಾನದಲ್ಲಿ ನಿರ್ಮಿಸಲಾಗಿರುವ 800 ವರ್ಷ ಹಳೆಯ ಕೋಟೆ ಇದಾಗಿದೆ. ಇತ್ತೀಚೆಗಷ್ಟೆ ಈ ಕೋಟೆಯನ್ನು ಐಷಾರಾಮಿ ಹೋಟೆಲ್​ ಆಗಿ ಬದಲಾಯಿಸಲಾಗಿದೆಯಂತೆ. ಮೂಲಗಳ ಪ್ರಕಾರ 7-12 ಡಿಸೆಂಬರ್​ವರೆಗೂ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಅವರ ಮದುವೆಯನ್ನು ಇಲ್ಲಿ ನಡೆಸಲು ಪ್ಲಾನ್​ ಮಾಡಲಾಗಿದೆಯಂತೆ.

First published: