B Saroja Devi: ಹಿರಿಯ ನಟಿ ಸರೋಜಾ ದೇವಿ ಬರ್ತ್ಡೇ! ಸಿನಿ ಸ್ಟಾರ್ಸ್ ಜೊತೆಗಿನ ಫೋಟೋಸ್ ಇಲ್ಲಿವೆ
ಬಹುಭಾಷಾ ನಟಿ ಸರೋಜಾ ದೇವಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಿ. ಸರೋಜಾ ದೇವಿ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಲವು ಫೋಟೋಸ್ ಶೇರ್ ಮಾಡಿದ್ದಾರೆ.
ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾ ದೇವಿ ಅವರ ಹುಟ್ಟಿದ ದಿನ ಇಂದು. ನಟಿ ಇಂದು 85ನೇ ವರ್ಷದ ಬರ್ತ್ಡೇ ಆಚರಿಸುತ್ತಿದ್ದಾರೆ.
2/ 7
ಈ ಸಂದರ್ಭದಲ್ಲಿ ಹಿರಿಯ ನಟಿಯ ಅಭಿಮಾನಿಗಳು ಅವರು ಸ್ಟಾರ್ ನಟರ ಜೊತೆಗಿದ್ದ ಹಲವಾರು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
3/ 7
ತಮಿಳು ನಟ ಸೂರ್ಯ ಅವರ ಸಹೋದರ ನಟ ಕಾರ್ತಿ ಅವರು ಸರೋಜ ದೇವಿ ಅವರ ಜೊತೆ ನಿಂತು ತೆಗೆಸಿಕೊಂಡ ಫೋಟೋ. ಇದರಲ್ಲಿ ಹಿರಿಯ ನಟಿ ಆಕಾಶ ನೀಲಿ ಬಣ್ಣದ ಸೀರೆ ಉಟ್ಟಿದ್ದರು.
4/ 7
ತಮಿಳು, ತೆಲುಗು, ಕನ್ನಡ ಸೇರಿ ಸೌತ್ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ ಅವರಿಗೆ ಇಂಡಸ್ಟ್ರಿಯಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.
5/ 7
ಸರೋಜಾ ದೇವಿ ಅವರು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅಂಬರೀಶ್ ಜೊತೆಗೆ. ಇದರಲ್ಲಿ ನಟಿ ಹಸಿರು ಬಣ್ಣದ ಝರಿ ಸೀರೆ ಉಟ್ಟುಕೊಂಡಿರುವುದನ್ನು ಕಾಣಬಹುದು.
6/ 7
ನಟಿ ಜಯಂತಿ ಅವರು ಹಾಗೂ ಭಾರತೀ ವಿಷ್ಣು ವರ್ಧನ್ ಅವರು ಸರೋಜಾ ದೇವಿ ಜೊತೆ ತೆಗೆಸಿಕೊಂಡಿರುವ ಹಳೆಯ ಫೋಟೋ. ಸ್ಯಾಂಡಲ್ವುಡ್ನ ಮೂವರು ಸ್ಟಾರ್ ನಟಿಯರನ್ನು ಇಲ್ಲಿ ಒಟ್ಟಿಗೆ ಕಾಣಬಹುದು.
7/ 7
ನಟ ಪುನೀತ್ ರಾಜ್ಕುಮಾರ್ ಅವರು ಸರೋಜಾ ದೇವಿ ಅವರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋದಲ್ಲಿ ನಟಿಯ ಮುಗುಳುನಗೆ ಕಾಣಬಹುದು. ಪುನೀತ್ ಅವರು ನಗುತ್ತಾ ತಮ್ಮ ಫೋನ್ನಲ್ಲಿ ಸೆಲ್ಫೀ ತೆಗೆದುಕೊಂಡಿದ್ದಾರೆ.