ಒಂದು ಕಾಲದಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಟಾಲಿವುಡ್ ಅನ್ನೇ ಆಳಿದ ಸ್ಟಾರ್ ನಟಿ ಈಗ ಮತ್ತೆ ನಾಯಕಿಯಾಗಿ ರಿ ಎಂಟ್ರಿ ಕೊಡಲಿದ್ದಾರೆ. ಹೌದು, ಸದ್ಯ ಬಾಯ್ಫ್ರೆಂಡ್ ಜತೆ ಕಳೆದ ವರ್ಷ ಸಪ್ತಪದಿ ತುಳಿದು ಗೃಹಿಣಿಯಾಗಿರುವ ಶ್ರಿಯಾ ಸರಣ್ ಮತ್ತೆ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ವಿವಾಹವಾದ ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರಿಯಾಗೆ ಈಗ ಮತ್ತೆ ನಾಯಕಿ ಆಗುವ ಅವಕಾಶ ಸಿಕ್ಕಿದೆ. ತಮಿಳಿನ 'ಅಸುರನ್' ಸಿನಿಮಾದ ತೆಲುಗು ರಿಮೇಕ್ನಲ್ಲಿ ಶ್ರಿಯಾ ನಟಿಸಲಿದ್ದಾರಂತೆ. ಧನುಷ್ ಅಭಿನಯದ 'ಅಸುರನ್' ತಮಿಳಿನಲ್ಲಿ ಹಿಟ್ ಆಗಿದ್ದು, ಅದನ್ನು ಈಗ ತೆಲುಗಿನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಧನುಷ್ ಪಾತ್ರಕ್ಕೆ ಜೀವ ತುಂಬಲಿದ್ದು, ನಾಯಕಿಯಾಗಿ ಶ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಪಾತ್ರಕ್ಕೆ ಶ್ರಿಯಾ ಓಕೆ ಹೇಳಿದ್ದಾರಾ ಎಂದು ಇನ್ನೂ ಬಹಿರಂಗವಾಗಿಲ್ಲ. ಉಳಿದಂತೆ ಬೇರೆ ಪಾತ್ರಗಳಿಗಾಗಿ ಚಿತ್ರತಂಡ ಹೊಸಬರ ಹುಡುಕಾಟದಲ್ಲಿ ತೊಡಗಿದೆ. ಅದಕ್ಕಾಗಿ ಚಿತ್ರತಂಡ ಈಗಾಗಲೇ ಪ್ರಕಟಣೆ ಸಹ ನೀಡಿದೆಯಂತೆ. ಸದ್ಯ ಗಂಡ ಜತೆ ಇರುವ ಶ್ರಿಯಾ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಮತ್ತೆ ನಾಯಕಿಯಾಗಿ ತೆರೆ ಮೇಲೆ ಅಬ್ಬರಿಸೋಕೆ ಸಜ್ಜಾಗುತ್ತಿದ್ದಾರೆ. ನಟಿ ಶ್ರಿಯಾ ಸರಣ್ ನಟಿ ಶ್ರಿಯಾ ಸರಣ್ ನಟಿ ಶ್ರಿಯಾ ಸರಣ್