Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ಆಗಿರೋ ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ತುಂಬಾನೇ ಆ್ಯಕ್ಟೀವ್ ಆಗಿದ್ದಾರೆ. ಈಗ ಬಣ್ಣದ ಲೋಕಕ್ಕೂ ಕಾಲಿಟ್ಟಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ಕಾಡುಗಳ್ಳ ವೀರಪ್ಪನ್ ಮಗಳು ಈಗ ಸಿನಿರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಚಿತ್ರರಂಗಕ್ಕೂ ವೀರಪ್ಪನ್‌ಗೂ ಎಲ್ಲೂ ನಂಟಿಲ್ಲ. ಆದರೆ ವೀರಪ್ಪನ್ ಮಗಳು ಇದೀಗ ಸಿನಿರಂಗ ಪ್ರವೇಶ ಮಾಡಿದ್ದಾರೆ. ವಿಶೇಷವೆಂದ್ರೆ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    MORE
    GALLERIES

  • 28

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ಆಗಿರೋ ವಿಜಯಲಕ್ಷ್ಮೀ ತುಂಬಾನೇ ಆ್ಯಕ್ಟೀವ್ ಆಗಿದ್ದಾರೆ. ಈಗ ಬಣ್ಣದ ಲೋಕಕ್ಕೂ ಕಾಲಿಟ್ಟಿದ್ದಾರೆ.

    MORE
    GALLERIES

  • 38

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ಮಾವೀರನ್ ಪಿಳ್ಳೈ ಹೆಸರಿನ ತಮಿಳು ಚಿತ್ರದ ಮೂಲಕ ವಿಜಯಲಕ್ಷ್ಮೀ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಬಹುತೇಕ ಕೆಲಸವೂ ಪೂರ್ಣಗೊಂಡಿದೆ. ವಿಶೇಷವೆಂದ್ರೆ ಈ ಚಿತ್ರ ಸಾರಾಯಿ ನಿಷೇಧದ ಕುರಿತು ಜಾಗೃತಿ ಮೂಡಿಸುತ್ತದೆ.

    MORE
    GALLERIES

  • 48

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ಮಾವೀರನ್ ಪಿಳ್ಳೈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚಿಗೆ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ಸಿನಿಮಾದಲ್ಲಿ ಸಾರಾಯಂ ಅಭಯಂ ಅನ್ನೋ ಹಾಡು ಕೂಡ ಇದೆ. ಇದನ್ನ ಸಾರಾಯಿ ಕುರಿತು ಜಾಗೃತಿ ಮೂಡಿಸೋ ಅಭಿಯಾನಕ್ಕು ಬಳಸಬಹುದಾಗಿದೆ. ಆ ರೀತಿನೇ ಈ ಒಂದು ಹಾಡು ತಯಾರಾಗಿದೆ.

    MORE
    GALLERIES

  • 58

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ವೀರಪ್ಪನ್ ಮಗಳು ವಿಜಯಲಕ್ಷ್ಮಿ ಈ ಮಾವೀರನ್ ಪಿಳ್ಳೈ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸುತ್ತಿದ್ದಾರೆ. ಸಾರಾಯಿಯಿಂದ ಆಗೋ ತೊಂದರೆಗಳ ಕುರಿತು ಜಾಗೃತಿ ಮೂಡಿಸೋ ಕೆಲಸವನ್ನ ಕೂಡ ಮಾಡುತ್ತಿದ್ದು, ವಿಜಯಲಕ್ಷ್ಮಿ ಬಾಲ್ಯದಿಂದಲೂ ನಟನೆ ಆಸಕ್ತಿ ಹೊಂದಿದ್ದರು. ಅದು ಈಗ ಈ ಚಿತ್ರದ ಮೂಲಕ ಸಾಕಾರಗೊಂಡಿದೆ.

    MORE
    GALLERIES

  • 68

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಈ ಚಿತ್ರ ಒಪ್ಪಿಕೊಳ್ಳಲು ಒಂದು ಕಾರಣ ಇದೆ. ಆ ಕಾರಣ ಬೇರೆ ಏನೋ ಅಲ್ಲ. ಸಾರಾಯಿ ಕುರಿತು ಜಾಗೃತಿ ಮೂಡಿಸೋದೇ ಆಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಜಯಲಕ್ಷ್ಮಿ ಚಿತ್ರದ ಆಡಿಯೋ ರಿಲೀಸ್ ಸಮಯದಲ್ಲಿ ಮಾತನಾಡಿದ್ದಾರೆ.

    MORE
    GALLERIES

  • 78

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ವಿಜಯಲಕ್ಷ್ಮಿ ಈ ಚಿತ್ರದಲ್ಲಿ ನಟಿಸೋಕೆ ಇರೋ ಕಾರಣವನ್ನ ಸವಿವರವಾಗಿಯೇ ಹೇಳಿಕೊಂಡಿದ್ದಾರೆ. ಸಾರಾಯಿಯಿಂದ ಸಾಕಷ್ಟು ಕುಟುಂಬದ ಮಹಿಳೆಯರು ಕಷ್ಟಪಡುತ್ತಿದ್ದಾರೆ. ಇವರ ಬಗ್ಗೆ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಈ ವಿಷಯ ಇರೋ ಕಾರಣಕ್ಕೇನೆ ಚಿತ್ರ ಒಪ್ಪಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 88

    Veerappan Daughter: ಬಣ್ಣದಲೋಕಕ್ಕೆ ಕಾಲಿಟ್ಟ ವೀರಪ್ಪನ್ ಮಗಳು! ಯಾವ ಸಿನಿಮಾದಲ್ಲಿ ನಟಿಸ್ತಾರೆ ವಿಜಯಲಕ್ಷ್ಮೀ?

    ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ವೀರಪ್ಪನ್ ಮಗಳು ವಿಜಯಲಕ್ಷ್ಮಿ ಅವರನ್ನ ಇಂಡಸ್ಟ್ರಿ ಕೈಬಿಸಿ ಕರೆದಿದೆ. ಅವರನ್ನ ನಾವು ತುಂಬು ಹೃದಯದಿಂದಲೇ ಸ್ವಾಗತಿಸುತ್ತೇವೆ ಎಂದು ಚಿತ್ರದ ನಿರ್ದೇಶಕ ಪೇರರಸು ಹೇಳಿದ್ದಾರೆ. ಇನ್ನು ಚಿತ್ರಕ್ಕೆ ರವಿ ವರ್ಮ ಸಂಗೀತ ಕೊಟ್ಟಿದ್ದಾರೆ. ಮಂಜುನಾಥ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ರಿಲೀಸ್ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

    MORE
    GALLERIES