ವೀರಸಿಂಹ ರೆಡ್ಡಿ ಸಿನಿಮಾ ಕರ್ನಾಟಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನಂದಮುರಿ ಬಾಲಕೃಷ್ಣ ಅವರ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಕಂಡಿದೆ. ಗುರುವಾರ ರಿಲೀಸ್ ಆದ ದಿನವೇ ಸಿನಿಮಾ 32 ಕೋಟಿ ಕಲೆಕ್ಷನ್ ಮಾಡಿದೆ.
2/ 7
ತೆಲುಗು ಸಿನಿಮಾ ವಿಜಯ್ ಅಭಿನಯದ ವಾರಿಸು ಹಾಗೂ ಅಜಿತ್ ಅವರ ತುನಿವು ಸಿನಿಮಾದ ಟೋಟಲ್ ಕಲೆಕ್ಷನ್ ಬೀಟ್ ಮಾಡಿ ಮುನ್ನುಗ್ಗುತ್ತಿದೆ. ವೀರಸಿಂಹ ರೆಡ್ಡಿ ಸಿನಿಮಾ ಸುಮಾರು 67 ಶೇಕಡ ಒಕ್ಯುಪೆನ್ಸಿ ಪಡೆದಿದ್ದು ಸಕ್ಸಸ್ಫುಲ್ ಆಗಿ ಓಡುತ್ತಿದೆ.
3/ 7
ವೀರಸಿಂಹ ರೆಡ್ಡಿ ಸಿನಿಮಾ ಮೊದಲ ದಿನ 32 ಕೋಟಿ ಗಳಿಸಿದೆ ಎನ್ನಲಾಗಿದೆ. ವಾರಿಸು ಸಿನಿಮಾ 26.5 ಕೋಟಿ ಗಳಿಸಿದ್ದು ತುನಿವು ಸಿನಿಮಾ ಕೂಡಾ 26 ಕೋಟಿ ಗಳಿಸಿದೆ.
4/ 7
ಹೈದರಾಬಾದ್ನ ಆರ್ಟಿಎಕ್ಸ್ ರೋಡ್ನಲ್ಲಿ ಮಾತ್ರವೇ ಸಿನಿಮಾ 43 ಲಕ್ಷ ಗಳಿಸಿದೆ. ಪುಷ್ಪಾ ಹಾಗೂ ತ್ರಿಬಲ್ ಆರ್ ಸಿನಿಮಾದ ಡೇ ವನ್ ಕಲೆಕ್ಷನ್ ಸುಮಾರು 75 ಲಕ್ಷ ಇತ್ತು.
5/ 7
ಫಸ್ಟ್ ಡೇ ಕಲೆಕ್ಷನ್ ನೋಡಿದರೆ ಬಾಲಯ್ಯ ಅವರ ಸಿನಿಮಾ ಫೆಂಟಾಸ್ಟಿಕ್ ಆದ ಓಪನಿಂಗ್ ಪಡೆದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
6/ 7
ಬಾಲಯ್ಯ ಅವರ ಜೊತೆ ಹನಿ ರೋಸ್, ಶ್ರುತಿ ಹಾಸನ್, ವರಲಕ್ಷ್ಮಿ ಶರತ್ಕುಮಾರ್, ದುನಿಯಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
7/ 7
ಈ ಸಿನಿಮಾ ಜನವರಿ 13ರಂದು ರಿಲೀಸ್ ಆಗುವ ವಾಲ್ಟೇರ್ ವೀರಯ್ಯ ಸಿನಿಮಾ ಜೊತೆ ಕ್ಲಾಷ್ ಆಗಲಿದೆ. ಆದರೆ ಆರಂಭಿಕ ಕಲೆಕ್ಷನ್ ಭರವಸೆ ಮೂಡಿಸಿದೆ.