Vasishta Simha-Haripriya: ಹರಿಪ್ರಿಯಾ ಮೊದಲ ಸಿನಿಮಾ ಮಾಡೋವಾಗ ಸ್ಕೂಲ್ನಲ್ಲಿ ಓದುತ್ತಿದ್ದೆ ಎಂದ ವಸಿಷ್ಠ ಸಿಂಹ! ಇವರ ಏಜ್ ಗ್ಯಾಪ್ ಎಷ್ಟು?
ಸ್ಯಾಂಡಲ್ವುಡ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ? ಹರಿಪ್ರಿಯಾ ಅವರ ಮೊದಲ ಸಿನಿಮಾ ರಿಲೀಸ್ ಆದಾಗ ವಸಿಷ್ಠ ಸಿಂಹ ಅವರ ಕಾಲೇಜು ಕಲಿಕೆಯೇ ಮುಗಿದಿರಲಿಲ್ಲ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮದುವೆಯಾಗುತ್ತಿದ್ದಾರೆ. ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಯಾಂಡಲ್ವುಡ್ನ ಜೋಡಿ.
2/ 9
ಈ ಸಂದರ್ಭ ಅವರ ವಯಸ್ಸಿನ ಕುರಿತು ಚರ್ಚೆ ಶುರುವಾಗಿದೆ. ಅವರಲ್ಲಿ ಯಾರು ದೊಡ್ಡವರು, ಅವರ ಏಜ್ ಗ್ಯಾಪ್ ಎಷ್ಟು? ಹರಿಪ್ರಿಯಾ ಹಿಂದಿನಿಂದಲೇ ನಟಿಸುತ್ತಿದ್ದಾರೆ, ಅವರಿಗೆ ಎಷ್ಟು ವರ್ಷ ವಯಸ್ಸಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
3/ 9
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸ್ಯಾಂಡಲ್ವುಡ್ ಜೋಡಿ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
4/ 9
ನನಗೆ ಆ ಒಂದು ಸಿನಿಮಾವನ್ನು ನೋಡಲು ಸಾಧ್ಯವಾಗಲಿಲ್ಲ. ಅವರ ಮೊದಲ ಕನ್ನಡ ಸಿನಿಮಾ. ಮನಸುಗಳ ಮಾತು ಮಧುರ. ಆ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಹದಿನೇಳು ಚೈತ್ರದ ಹುಡುಗಿ ಹಾಡನ್ನು ಯೂಟ್ಯೂಬ್ನಲ್ಲಿ ನೋಡುತ್ತಿದ್ದೆ ಎಂದಿದ್ದಾರೆ.
5/ 9
ಆವಾಗಿನಿಂದ ಅವರನ್ನು ಕಂಡರೆ ಒಂಥರಾ ಕ್ರಶ್. ಅದನ್ನು ಅವರಿಗೆ ಹೇಳಿರಲಿಲ್ಲ. ಆ ಹಾಡಿನ ಲಿರಿಕ್ಸ್ಗೆ ತಕ್ಕಹಾಗೆ ಇದ್ದರು. ನಾನು ಮೈಸೂರಿನಲ್ಲಿದ್ದೆ. ನಾನು ಸ್ಕೂಲ್ ಹುಡುಗ ಆಗ ಎಂದಿದ್ದಾರೆ.
6/ 9
ನಾನು ಸ್ಕೂಲ್ ಹುಡುಗ ಎನ್ನುವಾಗ ಹರಿಪ್ರಿಯಾ ಜೋರಾಗಿ ನಕ್ಕಿದ್ದರು. ತಟ್ಟನೆ ತಪ್ಪು ತಿದ್ದಿಕೊಂಡ ವಸಿಷ್ಠ ಸಿಂಹ ಅವರು ಅಲ್ಲ ನಾನು ಪಿಯುಸಿ ಓದುತ್ತಿದ್ದೆ ಎಂದಿದ್ದಾರೆ.
7/ 9
ತುಂಬಾ ಅದ್ಧೂರಿಯಾಗಿ ಮದುವೆ ಆಗುತ್ತಿದ್ದೇವೆ. ಜನವರಿ 26ಕ್ಕೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆಯುತ್ತದೆ. 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಇರುತ್ತೆ ಎಂದು ಈ ಜೋಡಿ ತಿಳಿಸಿದ್ದಾರೆ.
8/ 9
ಹರಿಪ್ರಿಯಾ ಅವರು 29 ಅಕ್ಟೋಬರ್ 1991ರಲ್ಲಿ ಹುಟ್ಟಿದ್ದು ನಟಿಗೆ ಈಗ 31 ವರ್ಷ ವಯಸ್ಸು. ಸ್ಯಾಂಡಲ್ವುಡ್ನಲ್ಲಿ ಸಕ್ಸಸ್ಫುಲ್ ನಟಿಯಾಗಿ ಬೆಳೆದಿದ್ದಾರೆ.
9/ 9
ವಸಿಷ್ಠ ಸಿಂಹ ಅವರು 19 ಅಕ್ಟೋಬರ್ 1988ರಲ್ಲಿ ಹುಟ್ಟಿದ್ದು ಅವರಿಗೆ ಈಗ 34 ವರ್ಷ ವಯಸ್ಸು. ಈ ಜೋಡಿಯ ಮಧ್ಯೆ 3 ವರ್ಷ ವಯಸ್ಸಿನ ಅಂತರವಿದೆ.