Vasishta Simha: ಟ್ರೆಡಿಷನಲ್ ಔಟ್ಫಿಟ್ನಲ್ಲಿ ವಸಿಷ್ಠ ಸಿಂಹ! ಮುಖದಲ್ಲಿ ಮದುಮಗನ ಕಳೆ
ವಸಿಷ್ಠ ಸಿಂಹ ಮದುವೆಗೂ ಮೊದಲು ಈಗ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ. ನಟನ ಫೋಟೋಶೂಟ್ ಈಗ ವೈರಲ್ ಆಗಿದೆ.
1/ 7
ಶೀಘ್ರದಲ್ಲಿಯೇ ಹಸೆಮಣೆ ಏರಲಿರುವ ಕನ್ನಡದ ಯುವನಟ ವಸಿಷ್ಠ ಸಿಂಹ ಅವರು ಹೊಸ ಫೋಟೋಶೂಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಪಿಕಾಕ್ ಕಲರ್ ಕುರ್ತಾ ಧರಿಸಿದ್ದಾರೆ.
2/ 7
ಸುಂದರವಾದ ಕುರ್ತಾ ಧರಿಸಿ ಸ್ಟೈಲಿಷ್ ಆಗಿ ಪೋಸ್ ಕೊಟ್ಟ ವಸಿಷ್ಠ ಸಿಂಹ ಅವರ ಕೆಲವು ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
3/ 7
ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇವರ ಮದುವೆ ನಡೆಯಲಿದೆ.
4/ 7
ಮದುವೆ ಸಮೀಪಿಸುತ್ತಿರುವಾಗ ನಟ ಹೊಸ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋಗೆ 34 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
5/ 7
ವಸಿಷ್ಠ ಸಿಂಹ ಅವರ್ ಸಿನಿಮಾದ ಶೂಟಿಂಗ್ ಸೆಟ್ಗೆ ನಟಿ ಹರಿಪ್ರಿಯಾ ಅವರು ದಿಢೀರ್ ವಿಸಿಟ್ ಕೊಟ್ಟಿದ್ದರು. ಅಲ್ಲಿ ಅವರ ಭೇಟಿಯ ಫೋಟೋಸ್ ವೈರಲ್ ಆಗಿದ್ದವು.
6/ 7
ಇಬ್ಬರೂ ವೆಕೇಷನ್ ಹೋಗಿದ್ದು ಅವರ ವೆಕೇಷನ್ ಫೋಟೋಸ್ ಕೂಡಾ ವೈರಲ್ ಆಗಿತ್ತು. ಮರುಭೂಮಿಯಲ್ಲಿ ಸುಂದರವಾದ ಸನ್ಸೆಟ್ ಎಂಜಾಯ್ ಮಾಡಿತ್ತು ಸ್ಯಾಂಡಲ್ವುಡ್ನ ಈ ಜೋಡಿ.
7/ 7
ಇವರ ಎಂಗೇಜ್ಮೆಂಟ್ ತುಂಬನಾ ಸಿಂಪಲ್ ಆಗಿ ನಡೆದಿತ್ತು. ಸಿಂಪಲ್ ಡೆಕೊರೇಷನ್, ಸ್ವಲ್ಪವೇ ಮಂದಿ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
First published: