Vasishta Simha-Haripriya: ಇಂದು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ-ಹರಿಪ್ರಿಯಾ!
ಮೊನ್ನೆಯಷ್ಟೇ ಈ ಜೋಡಿ ಮದುವೆ ಆಗುತ್ತಾರೆ ಅಂತ ಸುದ್ದಿಯಾಗುತ್ತೆ.ಇತ್ತೀಚಿಗಷ್ಟೆ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಂದ ಬೆನ್ನಲ್ಲೇ ಇಂದು (ಡಿಸೆಂಬರ್ 2) ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ವಿತಾರ್ಥ ಇಂದು ಬೆಳಗ್ಗೆ ಹರಿಪ್ರಿಯಾ ಮನೆಯಲ್ಲಿ ನೆರವೇರಿದೆ.
2/ 8
ಮೊನ್ನೆಯಷ್ಟೇ ಈ ಜೋಡಿ ಮದುವೆ ಆಗುತ್ತಾರೆ ಅಂತ ಸುದ್ದಿಯಾಗುತ್ತೆ.ಇತ್ತೀಚಿಗಷ್ಟೆ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಂದ ಬೆನ್ನಲ್ಲೇ ಇಂದು (ಡಿಸೆಂಬರ್ 2) ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
3/ 8
ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಅಂತ ಹೇಳಲಾಗುತ್ತಿದೆ. ಸಂಜೆ ವೇಳೆ ತಮ್ಮ ನಿಶ್ಚಿತಾರ್ಥದ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಲಿದ್ದಾರಂತೆ.
4/ 8
ಇಂದು ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು.
5/ 8
ಇಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
6/ 8
ರಾಜರಾಜೇಶ್ವರಿ ನಗರದಲ್ಲಿರುವ ಹರಿಪ್ರಿಯಾ ಅವರ ನಿವಾಸದಲ್ಲಿ ಈ ನಿಶ್ಚಿತಾರ್ಥ ನೆರವೇರಿದೆ. ಎರಡೂ ಕಡೆಯ ಕುಟುಂಬಸ್ಥರು ಮಾತ್ರ ಇಲ್ಲಿ ಹಾಜರಾಗಿದ್ದರು ಅಂತ ಹೇಳಲಾಗುತ್ತಿದೆ.
7/ 8
ಈ ವಿಷಯಕ್ಕೆ ಕುರಿತಂತೆ ಹರಿಪ್ರಿಯಾ ಅವರಾಗಲೀ, ವಸಿಷ್ಠ ಸಿಂಹ ಅವರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದಷ್ಟು ಬೇಗ ಅವರು ಮೌನ ಮುರಿಯಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
8/ 8
ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಮಾತು ಗಾಂಧಿನಗರದಲ್ಲಿ ಹಬ್ಬಿದೆ.