Vijay-Rashmika Movie: ವಾರಿಸು ಸಿನಿಮಾ ಟಿಕೆಟ್ ಸೋಲ್ಡ್ಔಟ್; 12,500ರೂ ದಾಟಿದೆ ಟಿಕೆಟ್ ರೇಟ್!
ದಳಪತಿ ವಿಜಯ್ (Vijay) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ವಾರಿಸು’ ಸಿನಿಮಾ ಜನವರಿ 11ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗ್ತಿದ್ದು, ವಿಜಯ್ ಫ್ಯಾನ್ಸ್ ಸಿನಿಮಾಗಾಗಿ ಕಾಯ್ತಿದ್ದಾರೆ. ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ವಿಜಯ್-ರಶ್ಮಿಕಾ ಜೋಡಿಯನ್ನು ತೆರೆ ಮೇಲೆ ನೋಡಲು ಕಾಯ್ತಿದ್ದ ಅಭಿಮಾನಿಗಳು ಸಿನಿಮಾ ಟಿಕೆಟ್ ಗಾಗಿ ಮುಗಿ ಬಿದ್ದಿದ್ದಾರೆ. ವಾರಿಸು ಚಿತ್ರದ ಪ್ರೀ ಬುಕ್ಕಿಂಗ್ ಓಪನ್ ಆಗಿದ್ದು, ಅನೇಕ ಶೋಗಳ ಟಿಕೆಟ್ ಸೋಲ್ಡ್ಔಟ್ ಆಗಿದೆ.
2/ 8
ವಾರಿಸು ತಮಿಳಿನಲ್ಲಿ ರಶ್ಮಿಕಾ ಮಂದಣ್ಣ 2ನೇ ಸಿನಿಮಾವಾಗಿದ್ದು, ದಳಪತಿ ಜೊತೆ ದೊಡ್ಡ ಪರದೆಯಲ್ಲಿ ರಶ್ಮಿಕಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.
3/ 8
ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ, ಸೌತ್ ಸಿನಿಮಾಗಳ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ವಾರಿಸು ಮುಂಜಾನೆ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.
4/ 8
2021ರಲ್ಲಿ ರಶ್ಮಿಕಾ ಅಭಿನಯದ ಮೊದಲ ತಮಿಳು ಸಿನಿಮಾ ‘ಸುಲ್ತಾನ್’ ರಿಲೀಸ್ ಆಯಿತು. ಆದರೆ, ಚಿತ್ರ ಹೆಚ್ಚು ಸದ್ದು ಮಾಡಲೇ ಇಲ್ಲ. ಅವರು ನಟಿಸುತ್ತಿರುವ ಎರಡನೇ ತಮಿಳು ಸಿನಿಮಾ ಇದಾಗಿದೆ. ಒಂದೊಮ್ಮೆ ಈ ಚಿತ್ರ ಗೆದ್ದರೆ ರಶ್ಮಿಕಾಗೆ ಕಾಲಿವುಡ್ನಲ್ಲಿ ಬೇಡಿಕೆ ಹೆಚ್ಚಲಿದೆ.
5/ 8
ತಮಿಳುನಾಡು ಅಷ್ಟೇ ಅಲ್ಲದೇ ದೇಶದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ದಳಪತಿ ವಿಜಯ್ ಸಿನಿಮಾಗಿ ಜನ ಕಾಯುತ್ತಿದ್ದರು, ಜನವರಿ 11 ರಂದು ಸಿನಿಮಾ ರಿಲೀಸ್ ಆಗ್ತಿದೆ.
6/ 8
ಈಗಾಗಲೇ ವಾರಿಸು ಸಿನಿಮಾದ ಟಿಕೆಟ್ 12,500 ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಪ್ರೀ ರಿಲೀಸ್ ಟಿಕೆಟ್ ಸಹ ಸೋಲ್ಡ್ ಔಟ್ ಆಗಿದೆ.
7/ 8
ಯುಕೆಯಲ್ಲಿ ವಿಜಯ್ ಸಿನಿಮಾ ಟಿಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಯುಕೆಯಲ್ಲಿ ಟಿಕೆಟ್ ಬೆಲೆ 12,500 ರೂಪಾಯಿ ದಾಟಿದೆ ಎಂದು ಇ-ಟೈಮ್ಸ್ ವರದಿ ಮಾಡಿದೆ.
8/ 8
ಯುರೋಪ್ನ 4 ಪ್ರಮುಖ ಚಿತ್ರಮಂದಿರಗಳಲ್ಲಿ ವಾರಿಸು ತೆರೆ ಕಾಣ್ತಿದ್ದು ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿದೆ.