Vijay-Rashmika Mandanna: ಕಿರಿಕ್ ಚೆಲುವೆಯ ಮುಡಿಗೆ ರೆಡ್ ರೋಸ್ ಇಟ್ಟ ವಿಜಯ್! ವಾರಿಸು ಸಖತ್ ಫೋಟೋಸ್
ವಾರಿಸು ಸಿನಿಮಾದ ರಂಜಿತಮೇ ಸಾಂಗ್ ಸಖತ್ ಟ್ರೆಂಡ್ ಆಗಿದೆ. ಇದರಲ್ಲಿ ರಶ್ಮಿಕಾ ಹಾಗೂ ವಿಜಯ್ ಜೋಡಿಯ ಕೆಲವು ಸೂಪರ್ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
1/ 9
ವಿಜಯ್ ಹಾಗು ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಸಖತ್ ಕ್ರೇಜ್ ಸೃಷ್ಟಿಸಿದೆ. ಕಾಲಿವುಡ್ನಲ್ಲಿ ಹೊಸ ವರ್ಷದ ಬಹುನಿರೀಕ್ಷಿತ ಚಿತ್ರ ಇದಾಗಿದೆ.
2/ 9
ರಶ್ಮಿಕಾ ಮಂದಣ್ಣ ಮುಡಿಗೆ ಕೆಂಪು ಗುಲಾಬಿಗಳನ್ನು ಮುಡಿಸುವ ವಿಜಯ್ ಅವರ ಸ್ಟಿಲ್ಸ್ ವೈರಲ್ ಆಗಿವೆ. ರಂಜಿತಮೆ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
3/ 9
ಸ್ಟೈಲಿಷ್ ಜೋಡಿಯಾಗಿ ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರ ಕಾಸ್ಟ್ಯೂಮ್ಸ್ ಕೂಡಾ ಕಲರ್ಫುಲ್ ಆಗಿದೆ.
4/ 9
ವಿಜಯ್ ಕೂಡಾ ಫ್ಲೋರಲ್ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದು ರಶ್ಮಿಕಾ ಹಳೆಯ ಕಾಲದ ಹೀರೋಯಿನ್ನಂತೆ ಕಿವಿಯ ಪಕ್ಕ ಗುಲಾಬಿ ಮುಡಿದು ಕಾಣಿಸಿಕೊಂಡಿದ್ದಾರೆ.
5/ 9
ಹೀರೋ ಹಾಗೂ ಹೀರೋಯಿನ್ ಡ್ರೆಸ್ ನೋಡಿದರೆ ಇದು ಪಕ್ಕಾ ಜಿಂಕ್-ಚಾಕ್ ಸಾಂಗ್ ಎನ್ನುವುದು ರಿವೀಲ್ ಆಗುತ್ತದೆ. ಕಾರಣ ಎಲ್ಲಿಯೂ ಈ ಜೋಡಿ ಫಾರ್ಮಲ್ ಆಗಿ ಡ್ರೆಸ್ನಲ್ಲಿ ಕಂಡುಬಂದಿಲ್ಲ.
6/ 9
ರೆಡ್ ಬ್ಲೌಸ್ ಧರಿಸಿದ ರಶ್ಮಿಕಾ ಕೈತುಂಬಾ ಬಳೆಗಳನ್ನು ಧರಿಸಿದ್ದಾರೆ. ನಾಚಿಕೊಂಡ ವಿಜಯ್ ಅವರ ಕೆನ್ನೆಗೆ ಮುತ್ತಿಡುವ ಸ್ಟಿಲ್ಸ್ ಅನ್ನು ಸಿನಿಪ್ರೇಮಿಗಳು ವೈರಲ್ ಮಾಡಿದ್ದಾರೆ.
7/ 9
ರಶ್ಮಿಕಾ ಅವರಿಗೆ ವಾರಿಸು ತಮಿಳಿನಲ್ಲಿ ಎರಡನೇ ಪ್ರಾಜೆಕ್ಟ್. ಇದಕ್ಕೂ ಮುನ್ನ ನಟಿ ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು.
8/ 9
ವಾರಿಸು ಸಿನಿಮಾ ಜನವರಿ 23ರಂದು ರಿಲೀಸ್ ಆಗಲಿದೆ. ಸಿನಿಮಾ ಟ್ರೈಲರ್ ಜನವರಿ 11ರಂದು ರಿಲೀಸ್ ಆಗಲಿದೆ. ಇದರ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು.
9/ 9
ರಶ್ಮಿಕಾ ಎಂದಿನಂತೆ ಫುಲ್ ಸ್ಮೈಲ್ನಲ್ಲಿ ಕಾಣಿಸಿಕೊಂಡಿದ್ದು ವಿಜಯ್ ಜೊತೆ ಅವರ ಕಾಂಬಿನೇಷನ್ ಹಾಡಿನಲ್ಲಿ ಸಖತ್ತಾಗಿ ಸಿಂಕ್ ಆಗಿದೆ. ಹಾಗಾಗಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.
First published: