ಕಾಲಿವುಡ್ ನಟ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ ವಂಶಿ ಪೈಡಿಪಲ್ಲಿ ನಿರ್ದೇಶನದ 'ವಾರಿಸು' ಜನವರಿ 11 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು ಜನ ಥಿಯೇಟರ್ಗೆ ಹೋಗಿ ಮೂವಿ ಎಂಜಾಯ್ ಮಾಡುತ್ತಿದ್ದಾರೆ.
2/ 7
ಇದರಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶರತ್ಕುಮಾರ್, ಪ್ರಭು, ಶಾಮ್, ಶ್ರೀಕಾಂತ್, ಸಂಗೀತಾ ಕ್ರಿಶ್, ಸಂಯುಕ್ತ, ಯೋಗಿ ಬಾಬು ಮತ್ತು ಖುಷ್ಬು ಕೂಡಾ ತಾರಾ ಬಳಗದಲ್ಲಿದ್ದಾರೆ.
3/ 7
ವರದಿಗಳ ಪ್ರಕಾರ, ಚಿತ್ರದ ಒಟ್ಟು ಬಜೆಟ್ 200 ಕೋಟಿ ಎನ್ನಲಾಗಿದೆ. ವಿಜಯ್ ಈ ಸಿನಿಮಾಗೆ ಬರೋಬ್ಬರಿ 110 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
4/ 7
‘ವಾರಿಸು’ ಚಿತ್ರಕ್ಕೆ ಶರತ್ಕುಮಾರ್ 2 ಕೋಟಿ ಮತ್ತು ಪ್ರಕಾಶ್ ರಾಜ್ 1.5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
5/ 7
ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾಲಿವುಡ್ನ ಅತ್ಯಂತ ಬ್ಯುಸಿ ಕಾಮಿಡಿ ನಟರಲ್ಲಿ ಒಬ್ಬರಾಗಿ ಮಿಂಚುತ್ತಿರುವ ಯೋಗಿ ಬಾಬು ಅವರಿಗೆ 35 ಲಕ್ಷ ರೂ ಸಂಭಾವನೆ ನೀಡಲಾಗಿದೆ.
6/ 7
ದಿಲ್ ರಾಜು ನಿರ್ಮಾಣದ ಈ ಚಿತ್ರವು ತೆಲುಗು ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದ್ದು, ತಮಿಳು ಮತ್ತು ಹಿಂದಿ ವರ್ಷನ್ ಜನವರಿ 11 ರಂದು ಬಿಡುಗಡೆಯಾಗಿದೆ.
7/ 7
ವಿಜಯ್ ಅಭಿನಯದ 'ವಾರಿಸು' ಚಿತ್ರ ಈಗಾಗಲೇ ದಾಖಲೆ ನಿರ್ಮಿಸಿದೆ. 100 ಕೋಟಿ ರೂಪಾಯಿಗಳ ಪ್ರೀ-ರಿಲೀಸ್ ವ್ಯವಹಾರ ದಾಖಲಾಗಿದೆ.