ವೈಷ್ಣವಿ ಗೌಡ ಇಡೀ ಬಿಗ್ ಬಾಸ್ ಮನೆಯಲ್ಲೇ ಸಿಕ್ಕಾಪಟ್ಟೆ ಸೈಲೆಂಟ್ ಆಗಿರುವ ಸ್ಪರ್ಧಿ ಎಂದೇ ಖ್ಯಾತರಾಗಿದ್ದಾರೆ. ಸದಾ ನಗುತ್ತಾ ಗಂಭೀರ ಪರಿಸ್ಥಿತಿಯನ್ನು ತಿಳಿಯಾಗಿ ತೆಗೆದುಕೊಳ್ಳುವ ವೈಷ್ಣವಿ ಅವರಿಗೆ ಶಮಂತ್ ಗೌಡ ಸಿಟ್ಟು ತರಿಸಿದ್ದಾರೆ. ಸೂಪರ್ ಸಂಡೆ ಸಂಚಿಕೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ವೈಷ್ಣವಿ ಅವರು ಹಾಡು ಹಾಡುತ್ತಾ ಕುಳಿತಿರುತ್ತಾರೆ. ಆಗ ಯಾರ ಮಗಳು ಅನ್ನೋ ಸಾಲಿನಲ್ಲಿ ಆ ಹಾಡು ಕೊನೆಯಾಗುತ್ತದೆ. ಅದಕ್ಕೆ ಶಮಂತ್ ಅವರು ಡವ್ ರಾಣಿಯ ಮಗಳು ಎಂದು ಪ್ರಾಸ ಸೇರಿಸುತ್ತಾರೆ. ಹಾಡನ್ನು ಪೂರ್ಣಗೊಳಿಸಲು ಪ್ರಾಸ ಸೇರಿಸಿದ್ದನ್ನು ಶಮಂತ್ ಅವರು ತಮ್ಮ ತಾಯಿಗೆ ಡವ್ ರಾಣಿ ಎಂದರು ಅಂತ ತಪ್ಪಾಗಿ ತಿಳಿದು ವೈಷ್ಣವಿ ಸಿಟ್ಟಾಗಿದ್ದರು. ನಂತರ ಶಮಂತ್ ವೈಷ್ಣವಿ ಬಳಿ ಹೋಗಿ ಕ್ಷಮೆ ಕೆಳುವುದರೊಂದಿಗೆ, ಆ ಸ್ಟೇಟ್ಮೆಂಟ್ ಕೇವಲ ಹಾಡನ್ನು ಪೂರ್ಣಗೊಳಿಸಲು ಹೇಳಿದಷ್ಟೆ ಎಂದು ಸಮಾಧಾನ ಮಾಡುವ ಮೂಲಕ ಅದಕ್ಕೆ ತೆರೆ ಎಳೆದಿದ್ದಾರೆ.