Friends Forever: ಸ್ನೇಹಿತೆಯರ ಜೊತೆ ಕಾಲ ಕಳೆದ ನಟಿ ಅಮೂಲ್ಯಾ
ಮದುವೆಯಾದ ನಂತರ ಬಣ್ಣದ ಲೋಕದಿಂದ ದೂರ ಇರುವ ನಟಿ ಅಮೂಲ್ಯಾ ಮನೆ ಹಾಗೂ ಗಂಡ ಅಂತ ಕಾಲ ಕಳೆಯುತ್ತಿದ್ದಾರೆ. ಆಗಾಗ ತಮ್ಮ ಸ್ನೇಹಿತೆಯರನ್ನೂ ಸಹ ಭೇಟಿಯಾಗುತ್ತಾ ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಹೌದು, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಅಮೂಲ್ಯಾ ಒಟ್ಟಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ತಮ್ಮ ಕಾಲೇಜಿನ ಗೆಳತಿಯರ ಜೊತೆ ಅಮೂಲ್ಯಾ ಸಮಯ ಕಳೆದಿದ್ದಾರೆ. (ಚಿತ್ರಗಳು ಕೃಪೆ: ಅಮೂಲ್ಯಾ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಅಮೂಲ್ಯಾ ಅವರು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಬಣ್ಣದ ಲೋಕದ ಮಂದಿಯ ಜತೆಗೆ ಇಂದಿಗೂ ಉತ್ತಮ ಭಾಂದವ್ಯ ಹೊಂದಿದ್ದಾರೆ. ಅವರು ತಮ್ಮ ಸ್ನೇಹಿತರು ಹಾಗೂ ಆತ್ಮೀಯರನ್ನು ಆಗಾಗ ಭೇಟಿಯಾಗುತ್ತ ಇರುತ್ತಾರೆ.
2/ 6
ಈಗಲೂ ಸಹ ತಮ್ಮ ಕಾಲೇಜಿನ ಸ್ನೇಹಿತೆಯರನ್ನು ಭೇಟಿಯಾಗಿದ್ದಾರೆ. ಅವರ ಜೊತೆ ಕೆಲ ಸಮಯ ಕಳೆದು, ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸ್ನೇಹಿತೆಯರ ಜೊತೆಗಿನ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
3/ 6
ಕಾಲೇಜಿನ ಸ್ನೇಹಿತೆಯರ ಜೊತೆ ರೆಸ್ಟೊರೆಂಟ್ ಒಂದಕ್ಕೆ ಭೇಟಿ ಕೊಟ್ಟಿರುವ ಅಮೂಲ್ಯಾ, ಅಲ್ಲಿ ಇಷ್ಟದ ಖಾದ್ಯಗಳನ್ನು ಸವಿದಿದ್ದಾರೆ. ಜೊತೆಗೆ ತಾವು ಸವಿದ ಖಾದ್ಯಗಳ ಚಿತ್ರಗಳನ್ನೂ ಹಾಗೂ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ.
4/ 6
ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಹಾಗೂ ಅಮೂಲ್ಯಾ ಅವರು ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದವರು. ಇವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿರುವಾಗಿನಿಂದ ಪ್ರವಾಸ ಹೋಗುವುದು, ಅಲ್ಲಲ್ಲಿ ಸುತ್ತಾಡುವುದನ್ನು ಮಾಡುತ್ತಿದ್ದರಂತೆ.
5/ 6
ಸ್ನೇಹ ಹಾಗೂ ಸ್ನೇಹಿತೆಯರ ಕುರಿತಾಗಿ ಸಾಕಷ್ಟು ಸಲ ಅಮೂಲ್ಯಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಗೆಳತಿಯರು ಸಮಯ ಸಿಕ್ಕಾಗಲೆಲ್ಲ ಭೇಟಿ ಮಾಡುತ್ತಾ, ಈಗಲೂ ಆಗಾಗ ಪ್ರವಾಸಕ್ಕೆಂದು ಹೋಗುತ್ತಿರುತ್ತಾರೆ.
6/ 6
ಅಮೂಲ್ಯಾ, ವೈಷ್ಣವಿ ಗೌಡ ಹಾಗೂ ಇತರೆ ಸ್ನೇಹಿತೆಯರು ತಮ್ಮ ಕಾಲೇಜು ದಿನಗಳಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಹಳೇ ದಿನಗಳನ್ನು ನೆನಪಿಸಿಕೊಳ್ಳುವುದನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ.