Urfi Javed: ಸದ್ಗುರು ಬೆಂಬಲಿಸುವವರು ನನ್ನನ್ನು ಫಾಲೋ ಮಾಡ್ಬೇಡಿ! ಜಗ್ಗಿ ವಾಸುದೇವ್ ವಿರುದ್ಧ ಉರ್ಫಿ ಗರಂ
ತನ್ನ ವಿಚಿತ್ರ ಫ್ಯಾಷನ್ ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಅನೇಕ ವಿಚಾರಗಳಿಗೆ ಟ್ರೋಲ್ ಆಗಿದ್ದಾರೆ. ಇದೀಗ ಉರ್ಫಿ ಕಣ್ಣು ಸದ್ಗುರು ಮೇಲೆ ಬಿದ್ದಿದ್ದು, ಜಗ್ಗಿ ವಾಸುದೇವ್ ವಿರುದ್ಧ ಕಿಡಿಕಾರಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ LGBTQ ಸಮುದಾಯದ ವಿರುದ್ಧವಾಗಿ ಮಾತಾಡಿದ್ದಾರೆ. ಇದಕ್ಕೆ ಯಾರೂ ಪ್ರೋತ್ಸಾಹ ನೀಡಬಾರದು ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
2/ 8
LGBTQ ಸಮುದಾಯದ ಬಗ್ಗೆ ಇತ್ತೀಚೆಗಷ್ಟೇ ಸದ್ಗುರು ಜಗ್ಗಿ ವಾಸುದೇವ್ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದರು. ಜಗತ್ತಿನಾದ್ಯಂತ ಕ್ಯಾಂಪೇನ್ ನಡೆಯುತ್ತಿದೆ. ನನ್ನ ಪ್ರಕಾರ ಆ ಕ್ಯಾಂಪೇನ್ ನಿಲ್ಲಬೇಕು. ಜನರಿಗೆ ಆಯ್ಕೆಗಳಿವೆ. ಹೀಗಾಗಿ ಕ್ಯಾಂಪೇನ್ ಮಾಡುವ ಅಗತ್ಯವಿಲ್ಲ ಎಂದಿದ್ರು.
3/ 8
ಪ್ರಕೃತಿ ತನ್ನ ಹಾದಿ ಹಿಡಿದರೆ, ಆ ಸಮುದಾಯಕ್ಕೆ ಸೇರುವ ಜನರ ಪ್ರಮಾಣ ತೀರಾ ಚಿಕ್ಕದು. ಆದರೆ, ಪ್ರಪಂಚದಲ್ಲಿ ನಡೆಯುತ್ತಿರುವ ಕ್ಯಾಂಪೇನ್ನಿಂದಾಗಿ ಆ ಸಮುದಾಯಕ್ಕೆ ಸೇರುತ್ತಿರುವ ಜನರ ಸಂಖ್ಯೆ ದೊಡ್ಡದಾಗುತ್ತಿದೆ ಎಂದು ಹೇಳಿದ್ರು.
4/ 8
ಲೈಂಗಿಕತೆಯು ಜೈವಿಕ ಪ್ರಕ್ರಿಯೆ ಪ್ರಕೃತಿಯು ಒಂದು ಉದ್ದೇಶದಿಂದಲೇ ವಿರೋಧಾಭಾಸಗಳನ್ನ ಸೃಷ್ಟಿಸಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಸಂವಾದವೊಂದರಲ್ಲಿ ಹೇಳಿದ್ದರು.
5/ 8
LGBTQ ಸಮುದಾಯದ ಪರವಾಗಿ ಉರ್ಫಿ ಜಾವೇದ್ ದನಿಯೆತ್ತಿದ್ದಾರೆ. ಸದ್ಗುರು ಫಾಲೋ ಮಾಡುವವರು ದಯವಿಟ್ಟು ನನ್ನನ್ನ ಫಾಲೋ ಮಾಡಬೇಡಿ.
6/ 8
LGBTQ ಅಭಿಯಾನದಲ್ಲಿ ತೊಡಗಿರುವವರು ತಮ್ಮ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮತ್ತು ಜೋರಾಗಿ ಮಾತನಾಡಲು ಸಮರ್ಥರಾಗಿದ್ದಾರೆ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
7/ 8
LGBTQ ಸಮುದಾಯದ ಚಿಕ್ಕದಲ್ಲ, ನಿಮ್ಮ ಮೆದುಳು ಚಿಕ್ಕದು ಎಂದು ಸದ್ಗುರು ಜಗ್ಗಿ ವಾಸುದೇವ್ ಬಗ್ಗೆ ಉರ್ಫಿ ಜಾವೇದ್ ಕಿಡಿಕಾರಿದ್ದಾರೆ.
8/ 8
ನನ್ನ ವಿಚಿತ್ರ ಫ್ಯಾಷನ್, ವಿವಾದ ಮೂಲಕವೇ ಸುದ್ದಿಯಾಗಿದ್ದ ಉರ್ಫಿ ಇದೀಗ LGBTQ ಸಮುದಾಯದ ಪರವಾಗಿ ನಿಂತು ಇನ್ಸ್ಟಾಗ್ರಾಮ್ ಮೂಲಕ ದನಿಯೆತ್ತಿದ್ದಾರೆ.